Tuesday, April 24, 2012

 ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ, ನಿರ್ಭಯ - ಮುಕ್ತ ವಾತಾವರಣದಲ್ಲಿ ಬೆಳೆದು ಇಂದಿನ ಮಹಿಳೆಯರಿಗೆ ಸ್ಫೂರ್ತಿ ನೀಡುವಂಥ ಬದುಕನ್ನು ಬಾಳಿದ ಕಮಲಾದೇವಿ ಚಟ್ಟೋಪಾಧ್ಯಾಯರ ಪೂರ್ಣ ಪ್ರಮಾಣದ ಜೀವನ ಚರಿತ್ರೆಯಿದು. ಬಲು ದಿಟ್ಟೆಯಾದ ಅವರು ಸಹಕಾರಿ ಸೇವಾಕ್ಷೇತ್ರದಲ್ಲೂ, ಸ್ವಾತಂತ್ರ್ಯ ಚಳುವಳಿಯ ಸ್ವದೇಶೀ ಆಂದೋಲನದಲ್ಲೂ ಭಾಗವಹಿಸಿದವರು. ದೇಶಪ್ರೇಮಿಗಳ ಒಡನಾಟ, ನಿಷ್ಠಾವಂತ ಸಮಾಜ ಸೇವಕರ ಪರಿಚಯ ಚಿಕ್ಕಂದಿನಿಂದಲೂ ಇವರಿಗಿತ್ತು. ಓರ್ವ ಸ್ವಯಂಸೇವಕಿಯಾಗಿ ಸೇವಾದಳದಲ್ಲಿ ಪ್ರವೇಶ ಪಡೆದ ಕಮಲಾದೇವಿ ಮುಂದೆ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಎಲ್ಲ ಚಳುವಳಿಗಳಲ್ಲಿ ಭಾಗವಹಿಸಿ ಕಾರಾಗೃಹ ಸೇರಿ ಅತ್ಯಂತ ಕಠಿಣ ದಿನಗಳನ್ನು ಕಳೆದರು. ವೈಯುಕ್ತಿಕ, ಕೌಟುಂಬಿಕ ಸುಖ ಸಂತೋಷವನ್ನು ದೇಶಕ್ಕಾಗಿ ತ್ಯಾಗ ಮಾಡಿದರು. ಉಪ್ಪಿನ ಸತ್ಯಾಗ್ರಹದ ಕಾಲ್ನಡಿಗೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲಿಲ್ಲವೆಂದು ಗಾಂಧೀಜಿಯೊಂದಿಗೆ ತಕರಾರು ತೆಗೆದ ಮಹಿಳೆ ಈಕೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೂ, ಮಹಿಳಾ ಅಭಿವೃದ್ಧಿಗೆ ಅಡ್ಡಿಯಾಗಿರುವ ಸಮಾಜದ ಕೊಳಕು ಮನಸ್ಸಿನವರೊಂದಿಗೂ ಹೋರಾಡಬೇಕಾದ ಅನಿವಾರ್ಯತೆ ಇವರಿಗಿತ್ತು. ಅಂದಿನ ರಾಷ್ಟ್ರಮಟ್ಟದ ಗಣ್ಯರೊಂದಿಗೆ ನಿಕಟಸಂಪರ್ಕವಿದ್ದ ಕಮಲಾದೇವಿ ತನ್ನ ವ್ಯವಹಾರ ಚತುರತೆಯಿಂದ ಯಶಸ್ವಿಯಾಗಿ ಎಲ್ಲವನ್ನೂ ನಿಭಾಯಿಸಿದರು. ಕರಕುಶಲ ಮಂಡಳಿಯ ಮೂಲಕ ವಿವಿಧ ನೇಯ್ಗೆ, ಹಸ್ತಕೌಶಲ್ಯದ ಸಾಮಗ್ರಿ ತಯಾರಿಕೆಗೆ ಪ್ರೋತ್ಸಾಹ ನೀಡಿದ ಅವರ ಸೇವೆ ಸ್ಮರಣೀಯ.

                                                                             ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ




 ಇಲ್ಲಿರುವ ಲೇಖನಗಳು ಸ್ತ್ರೀಕೇಂದ್ರಿತವಾಗಿದ್ದು ಮುಖ್ಯವಾಗಿ ಮಹಿಳೆ ನಡೆದುಬಂದ ದಾರಿಯ ಅವಲೋಕನ ಮಾಡುತ್ತವೆ. ಆಕೆ ಹಂತ ಹಂತವಾಗಿ ತನ್ನತನವನ್ನು ಬೆಳೆಸಿಕೊಂಡು ಪ್ರಗತಿಯತ್ತ ಸಾಗಿದ್ದು ಇತ್ತೀಚಿನ ಶತಮಾನಗಳಲ್ಲಿ. ಆಕೆಗೆ ಹೆಚ್ಚಿನ ಆತ್ಮವಿಶ್ವಾಸ ಬಂದುದೂ ತೀರಾ ಇತ್ತೀಚಿನ ದಿನಗಳಲ್ಲಿ. ಇಲ್ಲಿ ತೀರಾ ಪುರಾಣಕಾಲದ ಮಹಿಳೆಯರ ಚಿತ್ರಣವಿಲ್ಲ. ಸುಮಾರು ನೂರು ವರ್ಷಗಳಷ್ಟರ ಕಾಲಾವಧಿಯ ಮಹಿಳಾ ಚಳುವಳಿ, ಸಂಘ-ಸಂಸ್ಥೆಗಳಲ್ಲಿ ಆಕೆಯ ಪಾತ್ರ, ಲೇಖಕಿಯಾಗಿ ಮಹಿಳೆಯ ಸಂವೇದನಾಶೀಲ ಬರಹ ಇವನ್ನೆಲ್ಲ ಪರಿಚಯಿಸಿದೆ. ಅಂತರರಾಷ್ಟ್ರೀಯ ಬೀಜಿಂಗ್ ಮಹಿಳಾ ಸಮ್ಮೇಳನ ಮತ್ತು ಮುಂದಿನ ಹೆಜ್ಜೆಯಾಗಿ ಈಗೇನು ನಡೆಯುತ್ತಿದೆ ಎಂದು ಮಹಿಳಾ ಸಶಕ್ತೀಕರಣದ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಮಹಿಳಾ ಸಂಘ-ಸಂಸ್ಥೆಗಳು ಕೆಲಸ ಮಾಡುವತ್ತಲೂ ಒಂದು ಕಿರುನೋಟವೂ ಇದೆ.
  
 ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ

 
ಇವು ವ್ಯಕ್ತಿಚಿತ್ರಣಗಳು. ಲೇಖಕಿಯರಾಗಿ, ಸಮಾಜ ಸೇವೆಯಲ್ಲಿ ತೊಡಗಿ, ದುಡಿವ ಮಹಿಳೆಯಾಗಿ ತಮ್ಮ ಕುಶಲತೆಯನ್ನು ಮೆರೆದಿರುವವರ ಬದುಕಿನ ವಿವರಗಳು ಇಲ್ಲಿವೆ. ತಾವಾಯಿತು-ತಮ್ಮ ಮನೆಯಾಯಿತೆಂದುಕೊಂದು ಅಂತರ್ಮುಖಿಯಾಗಿದ್ದ ಮಹಿಳೆ ಇಂದು ತನ್ನ ಅಭ್ಯುದಯಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾಳೆ. ಹೀಗೆ ಜೀವನವನ್ನು ರೂಪಿಸಿಕೊಂಡು ಇತರರಿಗೂ ಮಾರ್ಗದರ್ಶನ ನೀಡಿ ಜನಪ್ರಿಯತೆಗಳಿಸಿ ಆದರ್ಶ ಬಾಳನ್ನು ಬಾಳಿದ್ದಾರೆ. ಮಹಿಳೆ ಪ್ರಯತ್ನಪಟ್ಟರೆ ಏನೆಲ್ಲಾ ಸಾಧಿಸಬಹುದೆಂದು ಈ ಕೃತಿಯನ್ನೋದಿದರೆ ತಿಳಿಯುತ್ತದೆ. ಇವರಲ್ಲಿ ಹೆಚ್ಚಿನವರು ಕನ್ನಡ ಬರಹಗಾರ್ತಿಯರು. ಅವರಿಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉನ್ನತ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಇದನ್ನು ಈ ಪುಸ್ತಕ ಪರಿಚಯಿಸುತ್ತದೆ.

 ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ

Friday, April 20, 2012

A Report in Vijayavani Daily on 23 April 2012
HAPPY BOOK DAY TO YOU ALL 
ಪ್ರಿಯರೆ,

2012ರ ಏಪ್ರಿಲ್ 22ರ ಭಾನುವಾರ ಬೆಳಗ್ಗೆ10 ಕ್ಕೆ ಬಸವನಗುಡಿಯಲ್ಲಿರುವ ಇಂಡಿಯನ್ 
ಇನ್‌ಸ್ಟಿಟ್ಯೂಟ್ ಅಫ್ ವರ್ಲ್ಡ್ ಕಲ್ಚರ್ ನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವಿದೆ.
ದಯವಿಟ್ಟು ಭಾಗವಹಿಸಿ. ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ.

ವಂದನೆಗಳು.
ಆರ್. ಎಸ್. ರಾಜಾರಾಮ್

































ಬಿಡುಗಡೆಯಾಗಲಿರುವ ಕೃತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Wednesday, April 18, 2012