Tuesday, May 22, 2012
Saturday, May 12, 2012
ನವಕರ್ನಾಟಕ ಪ್ರಕಾಶನದ ಕೃತಿಗಳು
ಅತ್ಯಂತ ಪ್ರಭಾವಶಾಲಿ ಲೇಖಕರೆಂದು ಹೆಸರು ಗಳಿಸಿದ ರಹಮತ್ ತರೀಕೆರೆ
ಅವರ ಪ್ರವಾಸಾನುಭವಗಳ ಲೇಖನಮಾಲೆ. ಇಲ್ಲಿನ ಎಲ್ಲ ಬರಹಗಳೂ ಓದುಗರ ಮನಸೂರೆಗೊಳ್ಳುವುದಂತೂ
ಸತ್ಯ. ನಾಡನ್ನು ಸುತ್ತಿ ವಿವಿಧ ಮಾಹಿತಿಗಳನ್ನು ಕಲೆಹಾಕಿ ತಮ್ಮ ಅನುಭವ
ಹೆಚ್ಚಿಸಿಕೊಳ್ಳುವುದೇ ಅಲ್ಲದೆ ಅವನ್ನು ಪುಸ್ತಕ, ಲೇಖನಗಳ ಮೂಲಕ ಆಪ್ತವಾಗಿ
ಹಂಚಿಕೊಳ್ಳುವುದು ಇವರ ಒಂದು ವಿಶೇಷ ಗುಣ. ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿನ
ತಿರುಗಾಟದ ಒಟ್ಟು ೩೮ ಬರಹಗಳಿವೆ. ಇವರ ಪ್ರವಾಸಕಥನಗಳು ಆಯಾ ಪ್ರದೇಶದ ಐತಿಹಾಸಿಕ
ಮಹತ್ವವನ್ನು ತಿಳಿಸುವುದಲ್ಲದೆ ಅಲ್ಲಿಯ ಅಂದಿನ-ಇಂದಿನ ಬದುಕಿನ ರೀತಿಯನ್ನೂ
ತಿಳಿಸುತ್ತವೆ. ಓದಿ ಮರೆಯುವ ಯಾವ ವಿಷಯವೂ ಇಲ್ಲಿಲ್ಲ.
ಸಾಮಾಜಿಕ ಕಾದಂಬರಿ. ನಮ್ಮಲ್ಲಿ ಅನೇಕ ಆತಂಕಗಳನ್ನು ಸೃಷ್ಟಿಸಬಲ್ಲಂತಹ ಅಂತರ್ಮತೀಯ ವಿವಾಹದ ಒಳಿತು-ಕೆಡುಕುಗಳನ್ನು ವಿಶ್ಲೇಷಿಸುತ್ತದೆ. ಪರಸ್ಪರ ಪ್ರೀತಿಸಿ ತಮ್ಮಿಚ್ಛೆಯಂತೆ ಬಾಳಲು ಬಿಡಲೊಲ್ಲದ ಸಮಾಜದ ನಡವಳಿಕೆಗಳ ಚಿತ್ರಣ. ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾದ ಸಂಘರ್ಷಗಳ ಸರಮಾಲೆ ಹೇಗಿದ್ದುವೆಂಬ ಅರಿವು ನೀಡುವ ಕಥನ. ಕೌಟುಂಬಿಕ ಪರಿಸರವನ್ನು ದಾಟಿ ಮುಂದುವರೆದು ಕೇವಲ ವ್ಯಕ್ತಿಗತವಾದ ವಿಷಯವೊಂದು ಹೇಗೆ ಅನಗತ್ಯ ಪ್ರಚಾರದಿಂದ ಅಸಹನೀಯವಾಗುತ್ತದೆಂದು ನಾವು ಇಲ್ಲಿ ಗ್ರಹಿಸಬಹುದು. ಕಾಲೇಜು ದಿನಗಳಲ್ಲಿನ ಪ್ರೀತಿ-ಪ್ರೇಮ-ಪ್ರಣಯಗಳು ಬಾಳಿನಲ್ಲಿ ಹೇಗೆ ಗುಲ್ಲೆಬ್ಬಿಸುತ್ತವೆಂದು ತಿಳಿಸುವ ಒಂದು ನೈಜ ಅಪೂರ್ವ ಕಥೆ.

Tuesday, May 8, 2012
ನವಕರ್ನಾಟಕ ಪ್ರಕಾಶನದ ಮುಂದಿನ ಪ್ರಕಟಣೆ
ಭೀಮಾಯಣ - ಅಸ್ಪೃಶ್ಯತೆಯ ಅನುಭವಗಳು (ಭೀಮರಾವ್ ರಾಮಾಜಿ ಅಂಬೇಡ್ಕರ ಅವರ ಜೀವನದ ಘಟನೆಗಳು)
ಭಾರತದಲ್ಲಿ ಅಸ್ಪೃಶ್ಯನಾದವನಿಗೆ ಹೇಗನ್ನಿಸುತ್ತದೆ? ಕೆಲವು ಭಾರತೀಯರೇಕೆ ಇತರರನ್ನು ಸ್ಪರ್ಶಿಸಲು ಹೇಸುತ್ತಾರೆ? ಭೀಮರಾವ್ ರಾಮ್ಜೀ ಅಂಬೇಡ್ಕರರು(1895-1956)ದೇಶದ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿಗಳು, ಅಸ್ಪೃಶ್ಯನಾಗಿ ತಾವು ಬೆಳೆದು ಬಂದ ಅನುಭವಗಳನ್ನು ಮತ್ತು ನಿರಂತರವಾಗಿ ಎದುರಿಸಿದ ಜಾತಿ ಭೇದವನ್ನು ನೆನಪಿಸಿಕೊಂಡಿದ್ದಾರೆ. ಅವರ ಹತ್ತನೇ ವಯಸ್ಸಿನಲ್ಲಿ ಶಾಲೆಯಲ್ಲಿದ್ದಾಗ, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಂದ ಬಳಿಕ ಬರೋಡದಲ್ಲಿ: ತಾವು ಪ್ರಯಾಣಿಸುತ್ತಿದ್ದಾಗ, ಇತ್ಯಾದಿ ಸಂದರ್ಭಗಳಲ್ಲಿ. ಅನೇಕ ಸಂಕಷ್ಟಗಳನ್ನು ಎದುರಿಸಿ ಭಾರತದ ಸಂವಿಧಾನದ ಕರಡು ತಯಾರಿಸಿದರು. ಅನಂತರದ ದಿನಗಳಲ್ಲಿ ಬೌದ್ಧರಾದರು. ಅಂಬೇಡ್ಕರರ ಅನುಭವಗಳೇ ಭಾರತದ 170 ಮಿಲಿಯನ್ ದಲಿತರಿಗೆ ಇಂದೂ ಕಾಡುತ್ತಿವೆ. ಅವರಿಗೆ ನೀರನ್ನು ಕೊಡುವುದಿಲ್ಲ. ವಾಸಕ್ಕೆ ಸ್ಥಳವಿಲ್ಲ. ಜೀವನಾವಶ್ಯಕತೆಗಳ ಪೂರೈಕೆಯಿಲ್ಲ. ಈ ನೆಲನಡುಗಿಸುವ ಕೃತಿಯಲ್ಲಿ ಪಾರ್ಧಾನ್ಗೊಂಡ ಕಲಾವಿದರಾದ ದುರ್ಗಾಬಾಯಿ ವ್ಯಾಮ್ ಮತ್ತು ಸುಭಾಷ್ ವ್ಯಾಮ್ರವರು ಚಾರಿತ್ರಿಕ ಘಟನೆಗಳಾದ ಮಹಾಡ ಸತ್ಯಾಗ್ರಹವನ್ನು ಈಚಿನ ಘಟನೆಗಳ ಜೊತೆ ನೇಯುತ್ತಾರೆ. ಸಂಪ್ರದಾಯಬದ್ಧ ನಿರೂಪಣಾ ವ್ಯಾಕರಣವನ್ನೇ ಬದಿಗೆ ಸರಿಸಿ, ಚಿತ್ರಕಥೆಯಲ್ಲಿ ಹೊಸ ಚೈತನ್ಯ ತುಂಬಿದ್ದಾರೆ. ಅವರ ಮಾಂತ್ರಿಕ ಕಲೆಯು ಇಲ್ಲಿ ದೈತ್ಯಾಕಾರವಾಗಿ ಹೊರಹೊಮ್ಮಿದೆ.
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ