ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ
ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ.
ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ ಶಕ್ತಿಗಳ ಹಾಗೂ ತಾಂತ್ರಿಕ ಬೆಳವಣಿಗೆಯ ಮಟ್ಟದ ಮತ್ತು ಉತ್ಪಾದನಾ ಸಂಬಂಧಗಳ ಸ್ಥಿತಿಗತಿಗಳ ಪ್ರತಿಬಿಂಬನೆ. ಇದಷ್ಟೇ ಇತಿಹಾಸ ಲೇಖನದಲ್ಲಿ ನೈಜ ನಿರಂತರತೆಯನ್ನೂ ಒದಗಿಸಬಲ್ಲದೆಉ.
ಈ ವಿಚಾರದ ಹಿನ್ನೆಲೆಯಲ್ಲಿ ಈ ಕಿರು ಹೊತ್ತಗೆಯ ಮೂವರು ವಿದ್ವಾಂಸ-ಲೇಖಕರೂ, ಕೋಮುವಾದಿ ಮನೋಧರ್ಮವು ಇತಿಹಾಸ ಲೇಖನದಲ್ಲಿ ಎಂತಹ ವಿರೂಪಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತೆ ಅವನ್ನು ನಿವಾರಿಸಲು ಯಾವ ದೃಷ್ಟಿಕೋನದಿಂದ ಇತಿಹಾಸ ಲೇಖನ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ವಿಶದಗೊಳಿಸಿದ್ದಾರೆ.
- ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ ಲೇಖಕರು:ರೋಮಿಲ ಥಾಪರ್, ಹರ್ಬನ್ಸ್ ಮುಖಿಯ ಮತ್ತು ಬಿಪನ್ ಚಂದ್ರ ಅನುವಾದ:ಕೆ. ಎಲ್. ಗೋಪಾಲಕೃಷ್ಣ ರಾವ್ ಪ್ರಕಾಶನ: ನವಕರ್ನಾಟಕ ಪ್ರಕಾಶನ ಪುಟ:88 ಬೆಲೆ:ರೂ.22/-
Filed under: ಐತಿಹಾಸಿಕ, ವೈಜ್ಞಾನಿಕ ಸಾಹಿತ್ಯ, ಸಂಶೋಧನಾ ಸಾಹಿತ್ಯ | Tagged: ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ, ರೋಮಿಲ ಥಾಪರ್, ಹರ್ಬನ್ಸ್ ಮುಖಿಯ ಮತ್ತು ಬಿಪನ್ ಚಂದ್ರ, ಕೆ. ಎಲ್. ಗೋಪಾಲಕೃಷ್ಣ, ಕೆ. ಎಲ್. ಗೋಪಾಲಕೃಷ್ಣ ರಾವ್, ನವಕರ್ನಾಟಕ ಪ್ರಕಾಶ
Komuvada haagu Bharateeya Ithihasa Lekhana by Romila Thapar and others
No comments:
Post a Comment