ಡಾ|| ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ಶನಿವಾರ,
ಜುಲೈ 13, 2013ರಂದು ಬಿಡುಗಡೆಯಾಗಲಿರುವ ಕೃತಿ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ‘ಇಗೋ
ಕನ್ನಡ - ಸಂಯುಕ್ತ ಸಂಪುಟ’.
ಪ್ರಜಾವಾಣಿಯ ಅಂಕಣಗಳಲ್ಲಿ ಪ್ರಸಿದ್ಧಿ ಪಡೆದು
ನವಕರ್ನಾಟಕದಿಂದ ಪ್ರಕಟಗೊಂಡು ಕನ್ನಡಿಗರಿಗೆ ಸುಪರಿಚಿತವಾದ ಇಗೋ ಕನ್ನಡದ ಮೂರು
ಸಂಪುಟಗಳು ಒಂದಾಗಿ ಇದೀಗ ಸಂಯುಕ್ತ ಸಂಪುಟವಾಗಿ ಹೊರಬರುತ್ತಿದೆ. ಪ್ರೊ||ಜಿ.ವಿ. ಅವರ
ಅರಿವಿಗೆ ಎಲ್ಲೆಯೇ ಇಲ್ಲವೇನೋ ಎಂಬಷ್ಟು ಆಳವಾದ ಪಾಂಡಿತ್ಯಪೂರ್ಣ ವಿವರಣೆಯನ್ನೊಳಗೊಂಡು
ಇವು ಕನ್ನಡಿಗರ ಮನಸೆಳೆದಿವೆ. ಜನರಿಂದಲೇ ಕೇಳಲಾದ ಪದಗಳಿಗೆ ವಿವರಣೆಯಿದ್ದು ಸಮಗ್ರ
ಮಾಹಿತಿಯೊಂದಿಗೆ ಶಬ್ದ ಸಾಮ್ರಾಜ್ಯವನ್ನೇ ಸೃಷ್ಟಿಸಿ ಜನರ ಮೆಚ್ಚುಗೆ ಗಳಿಸಿದ ಹಿರಿಮೆಯೂ ಈ
ನಿಘಂಟಿಗಿದೆ. ಪದದ ಮೂಲ, ವ್ಯುತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ,
ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ - ಹೀಗೆ ಎಲ್ಲ ವಿವರಗಳ ಮಹಾಪೂರವೇ ಇಲ್ಲಿ
ಹರಿದುಬಂದಿದೆ. ಇದು ಯಾರಿಗಾಗಿ ಎನ್ನುವುದಕ್ಕಿಂತ ಎಲ್ಲರಿಗಾಗಿ ಎಂಬುದೇ
ಸೂಕ್ತವಾಗಬಹುದು.
No comments:
Post a Comment