ನವಕರ್ನಾಟಕ ಪ್ರಕಾಶನ: ಭಾನುವಾರ ವನಿತಾ ಚಿಂತನ ಮಾಲೆಯಡಿ ಆರು ಕೃತಿಗಳ ಲೋಕಾರ್ಪಣೆ.
ಲೇಖಕಿ ಜಿ.ಟಿ. ಕುಸುಮಾ ಅವರ ‘ಫ್ಲಾರೆನ್ಸ್ ನೈಟಿಂಗೇಲ್‌ಳ ಬದುಕು ಸಾಧನೆ’; ಪ್ರೊ. ಬಿ.ಎಸ್.ಮಯೂರ ಅವರ ‘ಬಿ. ರಂಗನಾಯಕಮ್ಮ’ (ಮೈಸೂರು ವಿವಿಯಿಂದ ಬಿಇ ಪದವಿ ಪಡೆದ ಮೊದಲ ಮಹಿಳೆಯ ಬದುಕು- ಸಾಧನೆ); ಗೀತಾ ಅವರ ‘ಅಮ್ಮನಿಗೆ ಹಜ್ ಬಯಕೆ’ (ಇಂಡೋನೇಶಿಯಾದ ದಿಟ್ಟ ಮಹಿಳೆಯರ ಸಹಜ ಕಥೆಗಳು: ಮೂಲ ಅಸ್ಮಾ ನಾಡಿಯಾ). ಫಕೀರ ಮುಹಮ್ಮದ್ ಕಟ್ಟಾಡಿ ಅವರ ‘ಸೂಫಿ ಮಹಿಳೆಯರು’ (ಸೂಫಿ ಪಂಥದ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ಹೋರಾಟದ ಕುರಿತ ಕೃತಿ), ನೇಮಿಚಂದ್ರ ಅವರ ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ (ಹದಿನೇಳನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿದ್ದ ಆಫ್ರಾ ಬೆನ್ನ, ಭಾರತದವರೇ ಆದ ಭಾಂವ್ರಿ ದೇವಿ, ರೂಪನ್ ಬಜಾಜ್ ಮತ್ತು ಮ್ಯಾನ್ಮಾರ್‌ನ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಮತ್ತಿತರರ ಹೋರಾಟದ ಚಿತ್ರಣ) ಮತ್ತು ‘ಮಹಿಳಾ ವಿಜ್ಞಾನಿಗಳು’ ಲೋಕಾರ್ಪಣೆ.
ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 10.
No comments:
Post a Comment