A Report in Prajavani, Udayavani, Samyuktha Karnataka Daily on Navakarnataka Book Launch Session
`ಹೊಸ ಪುಸ್ತಕ ಓದುವ ಪ್ರವೃತ್ತಿ ಬೆಳೆಯುತ್ತಿಲ್ಲ'
ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಆಧುನಿಕ ಭಾರತದ ಇತಿಹಾಸ~, `ಇಸ್ಲಾಂ- ಕೆಲವು ತಪ್ಪು ಗ್ರಹಿಕೆಗಳು~ ಹಾಗೂ ರಾಷ್ಟ್ರೀಯ ಆಂದೋಲನ-ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನಗಳು~ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಇತಿಹಾಸತಜ್ಞ ಪ್ರೊ.ಷ.ಶೆಟ್ಟರ್ ಕೃತಿಯ ಪ್ರತಿಯನ್ನು ನವಕರ್ನಾಟಕ ಪ್ರಕಾಶನದ ನಿರ್ದೇಶಕ ಸಿ.ಆರ್.ಕೃಷ್ಣರಾವ್ ಅವರಿಗೆ ಹಸ್ತಾಂತರಿಸಿದರು. ಲೇಖಕರಾದ ಹಸನ್ ನಯೀಂ ಸುರಕೋಡ, ಎಂ.ಅಬ್ದುಲ್ ರೆಹಮಾನ್ ಪಾಷ, ಡಾ.ಎಂ.ವಿ.ವಸು, ಡಾ.ಎಚ್.ಎಸ್.ಗೋಪಾಲ ರಾವ್ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ
ಬೆಂಗಳೂರು: `ನಾಡಿನ ತಜ್ಞ ಪ್ರಾಧ್ಯಾಪಕರು ತಮಗೆ ಪರಿಚಿತರಿರುವ ತಜ್ಞ ಪ್ರಾಧ್ಯಾಪಕರ ಪಠ್ಯಪುಸ್ತಕಗಳನ್ನೇ ಓದುವಂತೆ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಹೊಸ ಪುಸ್ತಕಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿಲ್ಲ` ಎಂದು ಹಿರಿಯ ಇತಿಹಾಸತಜ್ಞ ಪ್ರೊ.ಷ.ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ನವಕರ್ನಾಟಕ ಪ್ರಕಾಶನದ ಆಶ್ರಯದಲ್ಲಿ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಆಯೋಜಿಸಿದ್ದ `ಆಧುನಿಕ ಭಾರತದ ಇತಿಹಾಸ`, `ಇಸ್ಲಾಂ- ಕೆಲವು ತಪ್ಪು ಗ್ರಹಿಕೆಗಳು` ಹಾಗೂ ರಾಷ್ಟ್ರೀಯ ಆಂದೋಲನ-ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನಗಳು` ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಉಪನ್ಯಾಸಕರು ಕನ್ನಡದಲ್ಲೇ ಪಾಠ ಮಾಡಲಾರಂಭಿಸಿದ ಬಳಿಕ ಮೂಲಭಾಷೆ (ಇಂಗ್ಲಿಷ್)ಯ ಉತ್ತಮ ಕೃತಿಗಳನ್ನು ಓದುವುದನ್ನು ಕೈಬಿಟ್ಟರು. ಇದರಿಂದಾಗಿ ಬೋಧನಾ ಕ್ರಮದಲ್ಲಿ ಹಾಗೂ ಸಾಧನೆಯಲ್ಲಿ ಕುಂಠಿತವಾಯಿತು. ಅಲ್ಲದೆ ತಜ್ಞ ಪ್ರಾಧ್ಯಾಪಕರು ಅಲ್ಲಲ್ಲಿ ವಿಷಯಗಳನ್ನು ಕದ್ದು ಪಠ್ಯಪುಸ್ತಕಗಳನ್ನು ರಚಿಸುತ್ತಾರೆ. ಇಂತಹ ಪುಸ್ತಕಗಳೇ ಗ್ರಂಥಾಲಯಗಳಲ್ಲಿ ದೊರಕುತ್ತಿವೆ. ಇನ್ನೊಂದೆಡೆ, ಅಧ್ಯಾಪಕರು ಹೇಳಿದ ಪಠ್ಯಗಳನ್ನೇ ವಿದ್ಯಾರ್ಥಿಗಳು ಶಿಸ್ತಿನಿಂದ ಅಧ್ಯಯನ ಮಾಡುತ್ತಾರೆ` ಎಂದು ಅವರು ಅಭಿಪ್ರಾಯಪಟ್ಟರು.
`ಈಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಜಾಸ್ತಿ ಆಗಿದೆ. ಆದರೆ, ಅಧ್ಯಾಪಕ ವೃತ್ತಿಯಲ್ಲಿ ಇರುವವರಲ್ಲಿ ಪುಸ್ತಕಗಳನ್ನು ಓದುವ ಪ್ರವೃತ್ತಿ ಕಡಿಮೆಯಾಗಿದೆ` ಎಂದ ಅವರು, `ಅನುವಾದ ಮಾಡುವುದು ಬಹಳಷ್ಟು ಜಟಿಲದ ಕೆಲಸ. ಮೂಲ ಲೇಖಕರಿಗೆ ಅಪಮಾನ ಆಗದ ಹಾಗೆ ಅದನ್ನು ನಮ್ಮ ಭಾಷೆಯಲ್ಲಿ ಒದಗಿಸುವುದು ಭಾಷಾಂತರಕಾರನಿಗೆ ಸವಾಲಿನ ಕೆಲಸ` ಎಂದರು.
ಹಿರಿಯ ಇತಿಹಾಸತಜ್ಞ ಡಾ.ಎಚ್.ಎಸ್.ಗೋಪಾಲ ರಾವ್ ಮಾತನಾಡಿ, `ಮಹಾತ್ಮ ಗಾಂಧೀಜಿ ಖಾದಿ, ಶಿಕ್ಷಣ ಹಾಗೂ ಶಿಕ್ಷಣದ ಪರವಾಗಿದ್ದರು. ಅಸ್ಪೃಶ್ಯತೆಯ ವಿರೋಧಿಯಾಗಿದ್ದರು. ಈ ಕಾರಣಕ್ಕಾಗಿ ಅವರು ಬಹುಸಂಖ್ಯಾತರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕು ಎಂಬುದು ಗಾಂಧೀಜಿ ಅವರ ಆಶಯವಾಗಿತ್ತು. ಆದರೆ, ಇಂದಿಗೂ ಜಾತಿ ವ್ಯವಸ್ಥೆ ಮುಂದುವರಿದಿದೆ` ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ವಿವಿ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ.ವಿ.ವಸು ಮಾತನಾಡಿ, `ಈಗ ಚರಿತ್ರೆ ದೊಡ್ಡ ವಿವಾದಾತ್ಮಕ ವಿಚಾರ ಆಗಿದೆ. ಚರಿತ್ರೆ ಶೈಕ್ಷಣಿಕ ಶಿಸ್ತಿನಿಂದ ಹೊರಹೋಗಿ ರಾಜಕೀಯಗೊಂಡಿದೆ. ಕೃತಿಯನ್ನು ಯಾರು ಬರೆಯುತ್ತಿದ್ದಾರೆ ಎಂಬ ವಿಚಾರವೇ ಆತಂಕ ಉಂಟು ಮಾಡುತ್ತಿದೆ` ಎಂದರು.
`ಮಹಿಳೆಯರನ್ನು ಇಸ್ಲಾಂ ಧರ್ಮ ದಮನಿಸಿದೆ ಎಂಬುದು ಸುಳ್ಳು`
`ಮಹಿಳೆಯರನ್ನು ಇಸ್ಲಾಂ ಧರ್ಮ ದಮನಿಸಿದೆ ಎಂಬುದು ಸುಳ್ಳು ವಾದ. ಉಲೆಮಾಗಳು ವ್ಯವಸ್ಥೆಯ ಜತೆಗೆ ಶಾಮೀಲಾಗಿ ಸ್ವಂತ ಹಿತಾಸಕ್ತಿಗೆ ಅನುಗುಣವಾಗಿ ಇಸ್ಲಾಂ ಧರ್ಮವನ್ನು ಅರ್ಥೈಸಿ ಮೂಲ ಇಸ್ಲಾಂನ ಆಶಯಗಳನ್ನೇ ಮಣ್ಣುಗೂಡಿಸಿದರು` ಎಂದು ಲೇಖಕ ಹಸನ್ ನಯೀಂ ಸುರಕೋಡ ಕಿಡಿಕಾರಿದರು.
ಸಮಾರಂಭದಲ್ಲಿ ಅವರು ಮಾತನಾಡಿ, `ಮುಸ್ಲಿಂ ಮಹಿಳೆಯರು ರಣರಂಗದಲ್ಲಿ ಹೋರಾಟ ಮಾಡಿದ ಉಲ್ಲೇಖಗಳು. ನಾವೆಲ್ಲ ಇಸ್ಲಾಂನ ನಿಜವಾದ ವಿಚಾರಗಳ ಬಗ್ಗೆ ಪ್ರಸಾರ ಮಾಡಿದ್ದರೆ ಧರ್ಮ ಈ ಸ್ಥಿತಿಗೆ ತಲುಪುತ್ತಿರಲಿಲ್ಲ. ಇದರಲ್ಲಿ ಮುಸ್ಲಿಮರ ತಪ್ಪು ಸಹ ಇದೆ. ಇಸ್ಲಾಂ ಮೌಲ್ಯಗಳನ್ನು ಆಧರಿಸಿದ ಧರ್ಮ` ಎಂದು ಅಭಿಪ್ರಾಯಪಟ್ಟರು.
ಲೇಖಕ ಎಂ.ಅಬ್ದುಲ್ ರೆಹಮಾನ್ ಪಾಷ ಮಾತನಾಡಿ, `ಜಿಹಾದ್ ಅಥವಾ ಧರ್ಮಯುದ್ಧವನ್ನು ನಮ್ಮ ಇಷ್ಟಕ್ಕೆ ಬಂದ ಹಾಗೆ ಎಳೆದಾಡಿದ್ದೇವೆ. ಆತ್ಮಶುದ್ಧಿ ಹಾಗೂ ಆಂತರ್ಯದ ಶುದ್ಧೀಕರಣಕ್ಕೆ ಮೂಲವಾಗುವ ಸಂದೇಶದ ಜಿಹಾದ್ ಇಂದು ಕೆಟ್ಟ ಉದ್ದೇಶಗಳಿಗೆ ಬಳಕೆಯಾಗುತ್ತಿದೆ` ಎಂದು ಆತಂಕ ವ್ಯಕ್ತಪಡಿಸಿದರು.
`ಏಳನೇ ಶತಮಾನದ ಆರಂಭದವರೆಗೂ ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಿತಿಗತಿ ಉತ್ತಮವಾಗಿದ್ದು ಅವರಿಗೆ ಅತ್ಯಂತ ಗೌರವ ನೀಡಲಾಗುತ್ತಿತ್ತು. ಬಳಿಕ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತುಳಿತಕ್ಕೆ ಒಳಗಾದರು. ಮಹಿಳೆಯರನ್ನು ತುಳಿಯಲು ಇಸ್ಲಾಂನ ತಪ್ಪು ಗ್ರಹಿಕೆಗಳನ್ನು ಬಳಸಿಕೊಳ್ಳಲಾಯಿತು` ಎಂದರು.
ಕೃತಿ: ಇಸ್ಲಾಂ-ಕೆಲವು ತಪ್ಪು ಗ್ರಹಿಕೆಗಳು
ಲೇ: ಡಾ.ಅಸ್ಗರ್ ಅಲಿ ಎಂಜಿನಿಯರ್
ಕನ್ನಡಕ್ಕೆ: ಹಸನ್ ನಯೀಂ ಸುರಕೋಡ
ಪುಟ: 96, ಬೆಲೆ: ರೂ 60
ಕೃತಿ: ಆಧುನಿಕ ಭಾರತದ ಇತಿಹಾಸ
ಲೇ: ಬಿಪಿನ್‌ಚಂದ್ರ
ಕನ್ನಡಕ್ಕೆ: ಎಚ್.ಎಸ್.ಗೋಪಾಲರಾವ್
ಪುಟ: 372, ಬೆಲೆ: ರೂ 225
ಕೃತಿ: ರಾಷ್ಟ್ರೀಯ ಆಂದೋಲನ- ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನಗಳು
ಲೇ: ಇರ್ಫಾನ್ ಹಬೀಬ್
ಕನ್ನಡಕ್ಕೆ: ಎಂ.ಅಬ್ದುಲ್ ರೆಹಮಾನ್ ಪಾಷ ಪುಟ:144, ಬೆಲೆ: ರೂ 90
Navakarnataka Book Launch Session - A Report in Prajavani 26 Nov 12