Thursday, January 10, 2019

"ಜುಮ್ಮಾ" ಪುಸ್ತಕಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ೨೦೧೭ರ ಅನುವಾದ ಪ್ರಶಸ್ತಿ

ಸೃಜನ್ ಅವರ ಅನುವಾದಿಸಿದ "ಜುಮ್ಮಾ" (ಲೇಖಕರು : ವೇಂಪಲ್ಲಿ ಶರೀಫ್) ಕಥಾ ಸಂಕಲನಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ೨೦೧೭ರ ಅನುವಾದ ಪ್ರಶಸ್ತಿ ನೀಡಿದೆ . ಈ ಹಿಂದೆ ಇದೇ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ೨೦೧೭ರ ವಾಸುದೇವ ಭೂಪಾಲಂ ದತ್ತಿ ಪ್ರಶಸ್ತಿ ನೀಡಿತ್ತು . ಅನುವಾದಕ, ಕಲಾವಿದ ಸೃಜನ್ ಅವರಿಗೆ ಅಭಿನಂದನೆಗಳು.
http://www.navakarnatakaonline.com/jumma

Friday, November 2, 2018

ಧಾರವಾಡದಲ್ಲಿ "ಕೇಳುವ ಕೌತುಕ" ಕೃತಿಯ ಲೋಕಾರ್ಪಣೆ.

ಸಿ ಯು ಬೆಳ್ಳಕ್ಕಿ ಅವರ "ಕೇಳುವ ಕೌತುಕ : ಮಾಧ್ಯಮ ಲೋಕದ ರಸನಿಮಿಷಗಳು" ಕೃತಿಯ ಲೋಕಾರ್ಪಣೆ.

http://www.navakarnatakaonline.com/keluva-koutuka-maadhyamalokada-rasanmishagalu

Tuesday, August 21, 2018

" ಉಮ್ಮಾ" ಕಾದಂಬರಿ ಮೂಲಕ ಧಾರ್ಮಿಕ ಚರಿತ್ರೆ - ಪುರಾಣದ ಕಥೆ

"ಓದಿರಿ" ಕಾದಂಬರಿ ಮೂಲಕ ಪ್ರವಾದಿ ಮುಹಮ್ಮದರ ಜೀವನವನ್ನು ಕನ್ನಡಕ್ಕೆ ಪರಿಚಯಸಿದ್ದ ಕಾದಂಬರಿಕಾರ ಬೊಳುವಾರು ಮಹಮದ್ ಕುಂಞ್, ಇದೀಗ ಪ್ರವಾದಿ ಮುಹಮ್ಮದರ ಪತ್ನಿಯ ಜೀವನಪ್ರೇರಿತ ಕೃತಿಯನ್ನು ರಚಿಸಿದ್ದಾರೆ. "ಉಮ್ಮಾ" ಹೆಸರಿನ ಈ ಕೃತಿ 27, ಆಗಸ್ಟ್ 2018 ರಿಂದ ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ.

ಪುಸ್ತಕ ಕೊಳ್ಳಲು ಕೆಳಗಿನ ಪುಸ್ತಕದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/umma

Friday, August 10, 2018

ಕನ್ನಡ ಸಾಹಿತ್ಯ ಪರಿಷತ್ತಿನ 2017ರ ದತ್ತಿ ಪ್ರಶಸ್ತಿ

ಮಾನ್ಯರೆ ,
ಕನ್ನಡ ಸಾಹಿತ್ಯ ಪರಿಷತ್ತಿನ 2017ರ ದತ್ತಿ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಅವುಗಳಲ್ಲಿ ಆರು ಪ್ರಶಸ್ತಿಗಳು ನಮ್ಮ ಸಂಸ್ಥೆ ಹಾಗೂ ನಮ್ಮ ಪ್ರಕಟಣೆಗಳಿಗೆ ಸಂದಿರುವುದು ಸಂತಸ ತಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪರಿಷತ್ತಿನ ಕೇಂದ್ರ ಕಛೇರಿಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ 12.08.2018ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಡಾ. ಎಲ್ . ಹನುಮಂತಯ್ಯ ಅವರು ಪ್ರಶಸ್ತಿಗಳ ಪ್ರದಾನ ಮಾಡಲಿದ್ದಾರೆ. ದಯವಿಟ್ಟು ಬನ್ನಿ.
ಪುರಸ್ಕೃತರ ಹೆಸರು ಮತ್ತು ಕೃತಿಯ ಹೆಸರು
1. ಡಾ. ಟಿ. ಆರ್ . ಅನಂತರಾಮು
ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು
(ವಿಜ್ಞಾನ - ತಂತ್ರಜ್ಞಾನ)

2. ಡಾ. ಮಹಾಬಲೇಶ್ವರ ರಾವ್
ಸೃಜನಶೀಲ ಶಿಕ್ಷಣ (ಮನೋವಿಜ್ಞಾನ)

3. ಶ್ರೀ ಕಂನಾಡಿಗಾ ನಾರಾಯಣ
ಇಹದ ಪರಿಮಳ (ಸಣ್ಣ ಕಥೆ)

4. ಶ್ರೀಮತಿ ಎ.ಎಸ್. ಮಾಲತಿ
ಸೀತಾಚರಿತ (ನಾಟಕ)

5. ಶ್ರೀ ಸೃಜನ್
ಜುಮ್ಮಾ (ಅನುವಾದ)

6. ನವಕರ್ನಾಟಕ ಪ್ರಕಾಶನ (ಸಂಸ್ಥೆಗೆ) ಇಹದ ಪರಿಮಳ (ಪ್ರಕಟಣೆಗಾಗಿ)

http://www.navakarnatakaonline.com/