Friday, March 10, 2017

ಕೋ. ಚೆನ್ನಬಸಪ್ಪ ಅವರ ಕಾದಂಬರಿ "ಬೇಡಿ ಕಳಚಿತು ದೇಶ ಒಡೆಯಿತು"

ಪ್ರಿಯ ಓದುಗರೆ,
ಕೋ. ಚೆನ್ನಬಸಪ್ಪ ಅವರ ಕಾದಂಬರಿ "ಬೇಡಿ ಕಳಚಿತು ದೇಶ ಒಡೆಯಿತು" ೯೭೫ ಪುಟಗಳ ಈ ಬೃಹತ್ ಗ್ರಂಥವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಇದೊಂದು ಮಹತ್ವಾಕಾಂಕ್ಷೆಯ ಕೃತಿ. ಕಾದಂಬರಿಯ ಮುಸುಕಿನಲ್ಲಿ ಮೆರವಣಿಗೆ ಹೊರಟ ಸ್ವಾತಂತ್ರ್ಯ ಸಂಗ್ರಾಮದ ದೃಶ್ಯಾವಳಿ. ಹಾಳು ಹಂಪೆಯಿಂದ ಆರಂಭವಾಗುವ ಆಂದೋಳನದ ದಿಕ್ಸೂಚಿ ಅತ್ತ ಇತ್ತ ಚಲಿಸುವುದಿಲ್ಲ. ಸಾಮಾನ್ಯವಾಗಿ ಇಲ್ಲಿ ಪಾತ್ರಗಳು ಮಾತನಾಡುವುದಿಲ್ಲ. ಘಟನೆಗಳು ಮಾತನಾಡುತ್ತವೆ. ಭಾವೋದ್ರೇಕವಿಲ್ಲದ ವಿಪುಲ ಮಾಹಿತಿಗಳನ್ನೊಳಗೊಂಡ ಮುಖ್ಯ ಕೃತಿ. ಓದುಗರ ಪ್ರಶ್ನೆಗಳಿಗೆ ಮೀಟುಗೋಲಾಗಿ ಉತ್ತರಗಳ ಹುಡುಕಾಟಕ್ಕೆ ಕಾರಣವಾಗುವ ಕೃತಿ. ಮಣ್ಣ ಪದರುಗಳ ಮಧ್ಯದಲ್ಲಿ ಹೊಳೆವ ಚಿನ್ನದ ಅದಿರು.
ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಪುಸ್ತಕದ ಮೇಲೆ ಕ್ಲಿಕ್ ಮಾಡಿ.
http://www.navakarnatakaonline.com/bedi-kalachitu-desha-odeyitu-novel
http://www.navakarnatakaonline.com/bedi-kalachitu-desha-odeyitu-novel

Tuesday, March 7, 2017

"ಬರಗೂರು ಪುಸ್ತಕ ಪ್ರಶಸ್ತಿ"

ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರ "ಕರ್ನಾಟಕದ ಸಮಗ್ರ ದಲಿತ ಚರಿತ್ರೆ" ಕೃತಿಗೆ ೨೦೧೬ರ ಸಾಲಿನ "ಬರಗೂರು ಪುಸ್ತಕ ಪ್ರಶಸ್ತಿ" ಲಭಿಸಿದೆ. ೯೦೦ ಪುಟಗಳ   ಈ ಬೃಹತ್ ಗ್ರಂಥವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.