ಸೃಜನ್
ಅವರ ಅನುವಾದಿಸಿದ "ಜುಮ್ಮಾ" (ಲೇಖಕರು : ವೇಂಪಲ್ಲಿ ಶರೀಫ್) ಕಥಾ ಸಂಕಲನಕ್ಕೆ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ೨೦೧೭ರ ಅನುವಾದ ಪ್ರಶಸ್ತಿ ನೀಡಿದೆ . ಈ ಹಿಂದೆ
ಇದೇ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ೨೦೧೭ರ ವಾಸುದೇವ ಭೂಪಾಲಂ ದತ್ತಿ
ಪ್ರಶಸ್ತಿ ನೀಡಿತ್ತು . ಅನುವಾದಕ, ಕಲಾವಿದ ಸೃಜನ್ ಅವರಿಗೆ ಅಭಿನಂದನೆಗಳು.
"ಓದಿರಿ" ಕಾದಂಬರಿ ಮೂಲಕ ಪ್ರವಾದಿ ಮುಹಮ್ಮದರ ಜೀವನವನ್ನು ಕನ್ನಡಕ್ಕೆ ಪರಿಚಯಸಿದ್ದ
ಕಾದಂಬರಿಕಾರ ಬೊಳುವಾರು ಮಹಮದ್ ಕುಂಞ್, ಇದೀಗ ಪ್ರವಾದಿ ಮುಹಮ್ಮದರ ಪತ್ನಿಯ
ಜೀವನಪ್ರೇರಿತ ಕೃತಿಯನ್ನು ರಚಿಸಿದ್ದಾರೆ. "ಉಮ್ಮಾ" ಹೆಸರಿನ ಈ ಕೃತಿ 27, ಆಗಸ್ಟ್ 2018 ರಿಂದ ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ.
ಮಾನ್ಯರೆ ,
ಕನ್ನಡ ಸಾಹಿತ್ಯ ಪರಿಷತ್ತಿನ 2017ರ ದತ್ತಿ ಪ್ರಶಸ್ತಿಗಳು
ಪ್ರಕಟಗೊಂಡಿದ್ದು, ಅವುಗಳಲ್ಲಿ ಆರು ಪ್ರಶಸ್ತಿಗಳು ನಮ್ಮ ಸಂಸ್ಥೆ ಹಾಗೂ ನಮ್ಮ
ಪ್ರಕಟಣೆಗಳಿಗೆ ಸಂದಿರುವುದು ಸಂತಸ ತಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಪರಿಷತ್ತಿನ ಕೇಂದ್ರ ಕಛೇರಿಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ 12.08.2018ರಂದು
ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ
ಡಾ. ಎಲ್ . ಹನುಮಂತಯ್ಯ ಅವರು ಪ್ರಶಸ್ತಿಗಳ ಪ್ರದಾನ ಮಾಡಲಿದ್ದಾರೆ. ದಯವಿಟ್ಟು ಬನ್ನಿ.
ಪುರಸ್ಕೃತರ ಹೆಸರು ಮತ್ತು ಕೃತಿಯ ಹೆಸರು
1. ಡಾ. ಟಿ. ಆರ್ . ಅನಂತರಾಮು ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು (ವಿಜ್ಞಾನ - ತಂತ್ರಜ್ಞಾನ)
2. ಡಾ. ಮಹಾಬಲೇಶ್ವರ ರಾವ್ ಸೃಜನಶೀಲ ಶಿಕ್ಷಣ (ಮನೋವಿಜ್ಞಾನ)