
Navakarnataka Book Launch Session on 23 Jan 2011
at Ka Sa Pa Sabhangana
All are welcome.
at Ka Sa Pa Sabhangana
All are welcome.
| |||
ಸಾಹಿತ್ಯ ಚರಿತ್ರೆಯ ಹೊಸ ಅಂಕ | |||
ವೀರಣ್ಣನವರ ‘ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ- ಪ್ರಾಚೀನ ಸಾಹಿತ್ಯ’ ಮರುಮುದ್ರಣ ಮುದ್ರಣ ಕಾಣುತ್ತಿರುವ ಕೃತಿ. ಈ ಪುಸ್ತಕ ಸಾಹಿತ್ಯಾಸಕ್ತರ ನಡುವೆ ಚರ್ಚೆ- ಜಿಜ್ಞಾಸೆಗಳಿಗೆ ಎಡೆ ಮಾಡಿಕೊಟ್ಟಿದ್ದ ಕೃತಿ. ಈ ಪುಸ್ತಕದ ಮುಂದುವರಿದ ಭಾಗವಾಗಿ ರಾಜಸತ್ತೆಯ ವಿಘಟನೆಯ ಕಾಲದ ಕೃತಿ ಹೊರಬಂದಿದೆ. | |||
ಪ್ರಾಚೀನ ಸಾಹಿತ್ಯ ರಾಜಸತ್ತೆಯ ವೈಭವದ ಕಾಲಕ್ಕೆ ಸಂಬಂಧಿಸಿದ್ದರೆ, ಮಧ್ಯಕಾಲೀನ ಸಾಹಿತ್ಯ ರಾಜಸತ್ತೆಯ ವಿಘಟನೆಯ ಕಾಲಕ್ಕೆ ಸಂಬಂಧಿಸಿದೆ. ಇತಿಹಾಸವನ್ನು ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಅಧ್ಯಯನ ಮಾಡುವ ಮಹತ್ವದ ಕಾರ್ಯದಲ್ಲಿ ಲಿಖಿತ ದಾಖಲೆಯಾದ ಸಾಹಿತ್ಯದ ಒಳನೋಟಗಳು ಅಪಾರ ನೆರವು ನೀಡುತ್ತವೆ. ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯದ ಚರಿತ್ರೆಯನ್ನು, ಆಯಾ ಸಾಮಾಜಿಕ ಸನ್ನಿವೇಶದಲ್ಲಿ ನಡೆಯುವ ಸಂಘರ್ಷಗಳ ಅಭಿವ್ಯಕ್ತಿಯಾಗಿ ಅಧ್ಯಯನ ಮಾಡುವುದು ಅಗತ್ಯ. ಇಂಥ ಅಗತ್ಯದ ಹಿನ್ನೆಲೆಯಲ್ಲಿ ವೀರಣ್ಣನವರ ಕೃತಿಗಳು ಮುಖ್ಯವೆನ್ನಿಸುತ್ತವೆ.
ಜ.14ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಸಿ.ವೀರಣ್ಣನವರ ಎರಡೂ ಪುಸ್ತಕಗಳನ್ನು 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಬಿಡುಗಡೆ ಮಾಡುವರು. |