Saturday, February 22, 2025

ನುಡಿತೇರನೆಳೆದವರು : ಬಾನುಲಿ ಕಲಿಗಳು


 1) ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಯಾವಾಗ ಆರಂಭ ಗೊಂಡವು , ಗೊತ್ತೇ ? 2) ದೇಶದ ಮೊದಲ ಖಾಸಗಿ ವಾಹಿನಿ ನಮ್ಮ ಮೈಸೂರಿನ ಕಥೆ ಗೊತ್ತೇ ? 3) ಮೈಸೂರು ಬೆಂಗಳೂರಾಗಿದ್ದು, 19 ವರ್ಷ ಸ್ಥಗಿತಗೊಂಡಿದ್ದು, ಪುನರಾರಂಭ ಗೊಂಡದ್ದು ತಿಳಿದಿದೆಯೇ ? 4) ದೊರೆಸ್ವಾಮಿ ಆಯ್ಯಂಗಾರ್, ಆರ್.ಕೆ ಶ್ರೀಕಂಠನ್ , ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್ ಕೃಷ್ಣಮೂರ್ತಿ, ಎಚ್ ಕೆ ನಾರಾಯಣ, ಪದ್ಮಚರಣ ಮೊದಲಾದ ಸಂಗೀತ ಮಾಂತ್ರಿಕರು ಆಕಾಶ ವಾಣಿಯಲ್ಲಿ 30 ವರ್ಷಗಳಿಗೂ ಮೀರಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಲ್ಲಿರಾ ? 5) ಆಕಾಶವಾಣಿ 1954 ರಲ್ಲೇ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಂಗೀತ ಕಛೇರಿ ಏರ್ಪಡಿಸುತ್ತಿತ್ತು ಅಂದರೆ ಆಶ್ಚರ್ಯ ಆಗುತ್ತದೆಯೇ? 6) ಧ್ವನಿಪರೀಕ್ಷೆ ಹೇಗೆ ನಡೆಯುತ್ತಿತ್ತು, ಅದಕ್ಕೆ ನಿಯಮಾವಳಿಗಳು ರೂಪುಗೊಂಡ ಬಗೆ ಎಂಥ ಚೆಂದ ಗೊತ್ತೇ ? 7) ಆಕಾಶವಾಣಿ ರೂಪಕ , ಆಕಾಶವಾಣಿ ನಾಟಕ ಲೋಕದಲ್ಲಿ ಸಂಚರಿಸಿದ್ದೀರಾ.. 8) ವಿಜ್ಞಾನ ಸರಣಿಗಳನ್ನು , ಸರಳ ವಾಗಿ ರೂಪಿಸಿ, ದೇಶದಲ್ಲೇ ಖ್ಯಾತಿ ಪಡೆದ ಬೆಂಗಳೂರು ಆಕಾಶವಾಣಿ ಪ್ರಯೋಗಗಳು.. ಅಬ್ಬಾ....! 9) ಕೃಷಿ ಪಾಠ ಶಾಲೆಯಲ್ಲಿ ಹಸು ಕರು ಎತ್ತು ಎಮ್ಮೆ ಕೋಳಿ ಬಹುಮಾನ ಕೊಟ್ಟರು. ರೈತರಿಗೆ ಬೋರೆವೆಲ್ ತೋಡಿಸಿಕೊಟ್ಟರು. ಕೇಳಿದ್ದೀರಾ? 10) ಆಕಾಶವಾಣಿ ಚಿತ್ರಗೀತೆ ಆಧಾರಿತ ಕಾರ್ಯಕ್ರಮ ಗಳನ್ನು ಉದ್ಘೋಷಕರು ಪಾಳಿಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಅವರ ಅನಿಸಿಕೆಗಳು ಮನದ ಮಾತು ಕೇಳಿದ್ದೀರಾ... ಇಂಥಹ ಹತ್ತು ಹಲವು ವಿಚಾರಗಳನ್ನು ಹೊತ್ತು ತರುತ್ತಿದೆ, "ನುಡಿತೇರನೆಳೆದವರು, ಬಾನುಲಿ ಕಲಿಗಳು" ಪುಸ್ತಕ. 1940 ರಿಂದ 1990 ರ ಅವಧಿಯಲ್ಲಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ದಿಗ್ಗಜ ಪ್ರಸಾರಕರ ವ್ಯಕ್ತಿ ಚಿತ್ರಗಳನ್ನು ಪರಿಚಯಿಸುತ್ತಿದೆ "ನುಡಿ ತೇರನೆಳೆದವರು" ಪುಸ್ತಕ. ಕರ್ನಾಟಕದ ಆಕಾಶವಾಣಿ ಕೇಂದ್ರಗಳಲ್ಲಿ ನಡೆದ ಕೆಲಸಗಳ ಸ್ಥೂಲ ದಾಖಲೀಕರಣ! ಕರುನಾಡ ಕೊರಳಿನ ಕಥೆಗಳು ! ! ಪ್ರಯೋಗಗಳು, ಪರಿಕಲ್ಪನೆಗಳು !! ಇಂಥ ಒಂದು ಪ್ರಯತ್ನ , ದೇಶದಲ್ಲಿ ಮೊದಲು ಎಂದಿದ್ದಾರೆ ಹಲವಾರು ಪರಿಣತರು. ಬನ್ನಿ, ನುಡಿ ತೇರ ಎಳೆದ ದಿಗ್ಗಜರಿಗೆ ನಮಸ್ಕಾರ ಮಾಡೋಣ. ಕನ್ನಡ ಭಾಷೆಗೆ , ಸಂಗೀತ , ಸಾಂಸ್ಕೃತಿಕ ಲೋಕಕ್ಕೆ ಆಕಾಶವಾಣಿ ನೀಡಿದ ಕೊಡುಗೆಗಳನ್ನು ಸ್ಮರಿಸೋಣ...https://navakarnataka.com/nuditeraneledavaru-banuli-kaligalu

No comments:

Post a Comment