Thursday, December 21, 2017

"ಥಟ್ ಅಂತ ಹೇಳಿ"...? ಕಾರ್ಯಕ್ರಮದಲ್ಲಿ "ಇಹದ ಪರಿಮಳ : ಕಥಾಸಂಕಲನ" ಕೃತಿಯ ಪರಿಚಯ


ಚಂದನ ವಾಹಿನಿ ಪ್ರಸಾರ ಮಾಡುವ "ಥಟ್ ಅಂತ ಹೇಳಿ"...? ಕಾರ್ಯಕ್ರಮದಲ್ಲಿ ಡಾ. ನಾ.
ಸೋಮೇಶ್ವರ ಅವರು ಕಂನಾಡಿಗಾ ನಾರಾಯಣ ಅವರ ಇತ್ತೀಚಿಗೆ ರಚಿಸಿರುವ "ಇಹದ ಪರಿಮಳ :
ಕಥಾಸಂಕಲನ" ಎಂಬ ಕೃತಿಯನ್ನು ಪರಿಚಯ ಮಾಡಿಕೊಟ್ಟರು.

Saturday, November 11, 2017

"ಕನ್ನಡ : ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ

೧೯ ನವೆಂಬರ್ ೨೦೧೭, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ, ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಕರ್ನಾಟಕ ಪ್ರಕಾಶನದ ಸಹಯೋಗದೊಡನೆ ಇ ಜ್ಞಾನ ಟ್ರಸ್ಟ್ ಪ್ರಸ್ತುತಪಡಿಸುವ "ಕನ್ನಡ : ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ, 'ನವಕರ್ನಾಟಕದ ಕನ್ನಡ ಕಲಿಕೆ ಮಾಲಿಕೆ' ಪುಸ್ತಕಗಳ ಅನಾವರಣ ಹಾಗು ಇ ಜ್ಞಾನ ಟ್ರಸ್ಟ್ ಜಾಲತಾಣದ ಲೋಕಾರ್ಪಣೆ ಮತ್ತು 'ಕಲಿಕೆಗೆ ಕೊಡುಗೆ' ಯೋಜನೆಯಡಿ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಗಳಿವೆ. ತಾವೆಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜ ಪೇಟೆ, ಬೆಂಗಳೂರು - ೫೬೦೦೧೮
http://www.navakarnatakaonline.com/

Wednesday, November 8, 2017

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ


"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ ೨೦೧೭ ನವೆಂಬರ್ ಟೀಚರ್ ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

www.navakarnatakaonline.com/vijnanada-heddariyalli-mahatiruvugalu-anantharamu
www.navakarnatakaonline.com/vijnanada-heddariyalli-mahatiruvugalu-anantharamu
www.navakarnatakaonline.com/vijnanada-heddariyalli-mahatiruvugalu-anantharamu

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ

  • "ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ ೨೦೧೭ ನವೆಂಬರ್ 'ಕಸ್ತೂರಿ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

  •  

Wednesday, October 25, 2017

ಭಾರತ ಕಮ್ಯುನಿಸ್ಟ್ ಪಕ್ಷ ಬೆಂಗಳೂರು ಜಿಲ್ಲಾ ಮಂಡಳಿ ಮತ್ತು ನವಕರ್ನಾಟಕ ಪ್ರಕಾಶನ ಜಂಟಿಯಾಗಿ ಏರ್ಪಡಿಸಿರುವ ಪುಸ್ತಕಗಳ ಲೋಕಾರ್ಪಣೆ.

ರಷ್ಯನ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಬೆಂಗಳೂರು ಜಿಲ್ಲಾ ಮಂಡಳಿ ಮತ್ತು ನವಕರ್ನಾಟಕ ಪ್ರಕಾಶನ ಜಂಟಿಯಾಗಿ ಏರ್ಪಡಿಸಿರುವ ಪುಸ್ತಕಗಳ ಲೋಕಾರ್ಪಣೆ.
2017ರ ನವೆಂಬರ್ 5ರ ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಘಾಟೆ ಭವನ, ಸಿ ಪಿ ಐ ಕಚೇರಿಯಲ್ಲಿ "ಜಗವ ನಡುಗಿಸಿದ ಹತ್ತು ದಿನ (ಜಾನ್ ರೀಡ್)" ಮತ್ತು "ಕುಟುಂಬ, ಸ್ನೇಹಿತರು ಮತ್ತು ದೇಶ (ನುಯೆನ್ ಧೀ ಬಿನ್)" ಕೃತಿಗಳನ್ನು ಲೋಕಾರ್ಪಣೆ ಮಾಡುವವರು ಡಾ. ಜಿ ರಾಮಕೃಷ್ಣ ಮತ್ತು ಡಾ. ವಸುಂಧರಾ ಭೂಪತಿ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
http://www.navakarnatakaonline.com/index

Wednesday, September 27, 2017

"ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ ೨೦೧೭"

ನವಕರ್ನಾಟಕ ಪ್ರಕಾಶನದ "ಕಿತ್ತಳೆ ನೇರಳೆ ಪೇರಳೆ" ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟ ಕೊಡಮಾಡುವ "ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ ೨೦೧೭" ಗೆ ಪಾತ್ರವಾಗಿದೆ.
http://www.navakarnatakaonline.com/kittale-nerale-perale-avasarakke-etukida-maatu-baraha

"ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?" ಕೃತಿಪರಿಚಯ


"ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?"
ಲೇಖಕರು:ಟಿ ಎಸ್ ಗೋಪಾಲ್.
ಪ್ರಕಾಶಕರು:ನವಕರ್ನಾಟಕ ಪ್ರಕಾಶನ.
ಪುಟ:೬೪,ಬೆಲೆ :ರೂ.೪೫.


ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಯಲ್ಲಿ ಪ್ರಕಟವಾಗಿರುವ ,ಟಿ.ಎಸ್ .ಗೋಪಾಲ್ ರವರು ಬರೆದಿರುವ, ಹಳಗನ್ನಡವನ್ನು ಓದಿ ತಿಳಿಯುವ ಸುಲಭೋಪಾಯಗಳನ್ನು ತಿಳಿಸುವ ಈ ಕೃತಿ ಕನ್ನಡ ಸಾಹಿತ್ಯಾಸಕ್ತರಿಗೆ ಹಳಗನ್ನಡ ಸಾಹಿತ್ಯದ ಮಹತ್ವವನ್ನೂ ಉಪಯುಕ್ತತೆಯನ್ನೂ ಅರ್ಥ ಮಾಡಿಸುವ ಸಾಧನವಾಗಿದೆ.
ಹಳಗನ್ನಡ ಕಾವ್ಯದ ಪ್ರಸ್ತುತತೆ,ವಿದ್ಯಾರ್ಥಿಗಳಿಗೆ,ಬೋಧಕರಿಗೆ,ಹಾಗೂ ಕಾವ್ಯಾಸ್ವಾದಕರಿಗೆ ಹೇಗೆ ಅಗತ್ಯ ಎಂಬುದರ ಪ್ರಸ್ತಾವನೆಗಳ ಮೂಲಕ ಕೃತಿ ಆರಂಭಗೊಂಡಿದೆ.ಹಳೆಗನ್ನಡದ ಪರಿಧಿಯಲ್ಲಿ ಪೂರ್ವದ ಹಳಗನ್ನಡ ,ಹಳಗನ್ನಡ ಹಾಗೂ ನಡುಗನ್ನಡ ಮುಂತಾದ ಕಾಲಘಟ್ಟಗಳನ್ನೂ ವ್ಯಾಪಕವಾಗಿ ಚರ್ಚಿಸಿ ನಿದರ್ಶನಗಳನ್ನು ನೀಡಿದ್ದಾರೆ ಲೇಖಕರು.
ಕನ್ನಡದ ಶಾಸನ ಪದ್ಯಗಳು,ಮೊದಲ ಗದ್ಯಕೃತಿ ವಡ್ಡಾರಾಧನೆ,ಕವಿರಾಜಮಾರ್ಗ,ಪಂಪಭಾರತ, ಗಧಾಯುದ್ಧ, ಕುಮಾರವ್ಯಾಸ ಭಾರತ,ಗಿರಿಜಾಕಲ್ಯಾಣ,ದುರ್ಗಸಿಂಹನ ಪಂಚತಂತ್ರ,ಜನ್ನನ ಅನಂತನಾಥ ಪುರಾಣ,ಮುಂತಾದ ಕೃತಿಗಳ ಪದ್ಯಗಳನ್ನು ವಿಭಕ್ತಿ ಪ್ರತ್ಯಯಗಳು,ಸರ್ವನಾಮಗಳು,ಕ್ರಿಯಾಪದಗಳು,ಭೂತ,ಭವಿಷ್ಯತ್ ವರ್ತಮಾನ ಕಾಲ,ಮುಂತಾದ ವ್ಯಾಕರಣ ಅಂಶಗಳ ವಿವರಣೆಗೆ ಸ್ವಾರಸ್ಯಕರವಾಗಿ ಬಳಸಿಕೊಳ್ಳಲಾಗಿದೆ.ಈ ಸಂಬಂಧ ನೀಡಿರುವ ಕೋಷ್ಟಕಗಳು ವಿಷಯದ ಸುಲಭಗ್ರಹಣಕ್ಕೆ ದಾರಿಮಾಡಿಕೊಟ್ಟಿವೆ.
ಹಳಗನ್ನಡ ಕಾವ್ಯ ಅರ್ಥ ಮಾಡಿಕೊಳ್ಳಲು ನಿಘಂಟು, ವ್ಯಾಕರಣ ಪುಸ್ತಕಗಳು ಸಹಾಯ ಮಾಡಿದರೂ ಸರಿಯಾಗಿ ಆಸ್ವಾದಿಸಲು ಸ್ವಂತ ಪರಿಶ್ರಮ ಬೇಕೆನ್ನುವುದು ಲೇಖಕರ ಅಭಿಮತ.
ಹಳೆಗನ್ನಡದ ಎಲ್ಲ ಮುಖ್ಯ ಕೃತಿಗಳನ್ನು ಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಮುಖ್ಯ ರಸಘಟ್ಟಗಳನ್ನಾದರೂ ಅರಿಯುವುದು ಅಗತ್ಯ ಎನ್ನುವ ಲೇಖಕರ ಕಳಕಳಿ ಖಂಡಿತ ಸ್ವೀಕಾರಾರ್ಹವಾದುದು.
ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಬರೆಯಲಾದ ಈ ಕೃತಿ ಬೋಧಕರಿಗೂ ಕಾವ್ಯಾಸ್ವಾದಕರಿಗೂ ಅಷ್ಟೇ ಉಪಯುಕ್ತ ಎಂಬುದು ಸತ್ಯ.
ತಮ್ಮ ಉಪಾಧ್ಯಾಯ ವೃತ್ತಿಯ ಸಾರವನ್ನು ಧಾರೆ ಎರೆದು ಕೃತಿ ರಚಿಸಿರುವ ಲೇಖಕ ಗೋಪಾಲ್ ರವರಿಗೆ ಅಭಿನಂದನೆಗಳು.ಹಾಗೆಯೇ ನವಕರ್ನಾಟಕ ಪ್ರಕಾಶನಕ್ಕೂ.
"ಕಿರಿದರೊಳ್ ಪಿರಿದರ್ಥ" ನೀಡುವ ಈ ಕೃತಿಯನ್ನು ಪಡೆಯಿರಿ, ಓದಿರಿ ಹಾಗೂ ಆನಂದಿಸಿರಿ.
ಮಹಾಬಲ
http://www.navakarnatakaonline.com/bookslist?aid=92

Monday, September 25, 2017

ಪ್ರಜಾವಾಣಿ > ಪುರವಣಿ > ಮುಕ್ತಛಂದ, 3 Sep, 2017

‘ಇದು ವಿಜ್ಞಾನದ ಬಾಗಿಲನ್ನು ಜನಸಾಮಾನ್ಯರಿಗೂ ತೆರೆಯುವ ಹೊತ್ತು’