ಕೃತಿ ಕುರಿತು ಅಭಿಪ್ರಾಯ
ಪ್ರತಿ
ಅಧ್ಯಾಯವೂ ವಿಜ್ಞಾನದ ಇತಿಹಾಸದಲ್ಲಿನ ಸಿಹಿ-ಕಹಿ ಕಥೆಗಳನ್ನು ಹೇಳುತ್ತದೆ:
ವಿಜ್ಞಾನಿಗಳಲ್ಲಿ ವಿಶ್ವ ವಿಖ್ಯಾತರಾದವರೂ ಇದ್ದಾರೆ, ಜೀವ ಕಳೆದುಕೊಂಡವರೂ ಇದ್ದಾರೆ.
ಭೌತ ವಿಜ್ಞಾನದಿಂದ ಹಿಡಿದು ರಸಾಯನ, ಜೀವ, ಭೂ, ಗಣಿತ, ಅಂತರಜಾಲ - ವಿಧಿ ವಿಜ್ಞಾನ ಕೂಡ –
ಇವನ್ನೆಲ್ಲಾ ಕೂಡಿಸಿ, ಆ ವಿಷಯಗಳ ಮೇಲೆ ಮಾನವನ ಸಾಹಸ, ಆ ಸಾಹಸಗಳು ಸಾಧಿಸಿದ
ವಿಜಯಗಳು, ಆ ವಿಜಯಗಳು ಹುಟ್ಟಿಸಿರುವ ವಿಸ್ಮಯ ಹಾಗೂ ಬೆರಗುಗಳನ್ನು ತಿಳಿಗನ್ನಡದಲ್ಲಿ
ಕನ್ನಡದ ಜನತೆಗೆ ಅರ್ಪಿಸಿದ್ದಾರೆ. ಪುಸ್ತಕದ ಮೊದಲನೆ ಪುಟದಲ್ಲಿಯೇ ಎಚ್. ಆರ್.
ಕೃಷ್ಣಮೂರ್ತಿಗಳು ಹೇಳಿರುವಂತೆ ಅಮೆರಿಕ ವಿಜ್ಞಾನಿ ರಿಚರ್ಡ್ ಫೈನ್‍ಮನ್ ಪ್ರಕಾರ
ವಿಜ್ಞಾನವು ವಿಶ್ವದಲ್ಲಿ ನಡೆಯುತ್ತಿರುವ ಮಹಾ ಚದುರಂಗದಾಟದ ಗೂಢ, ಗುಪ್ತ ನಿಯಮಗಳನ್ನು
ಕಂಡು ಹಿಡಿಯುವ ಸಾಹಸ. ಈ ಸಾಹಸದ ಹತ್ತಾರು ಕಥೆಗಳೇ ಈ ಪುಸ್ತಕದ ರಮ್ಯವಾದ ವಸ್ತು.
- ಪ್ರೊ|| ರೊದ್ದಂ ನರಸಿಂಹ, ಖ್ಯಾತ ವಿಜ್ಞಾನಿ.
- ಪ್ರೊ|| ರೊದ್ದಂ ನರಸಿಂಹ, ಖ್ಯಾತ ವಿಜ್ಞಾನಿ.