Monday, December 22, 2014
Wednesday, November 12, 2014
Leelavathi 108 Problems of SBRao - Shikshana Varthe Monthly Nov 2014
Leelavathi 108 Problems of SBRao - Shikshana Varthe Monthly Nov 2014
Gurupurasakar 2015
http://www.schooleducation.kar.nic.in/shikshanavarthe/SV1114.pdf
http://www.schooleducation.kar.nic.in/html/shikshanavarthe.html
Monday, October 1, 2012
Tuesday, September 4, 2012
New Books from Navakarnataka in Shikshana Varthe Monthly Sept 2012

<object style="width:420px;height:282px" ><param name="movie" value="http://static.issuu.com/webembed/viewers/style1/v2/IssuuReader.swf?mode=mini&backgroundColor=%23222222&documentId=120904081233-e0d34c15b42047f6b5645b780e6c77af" /><param name="allowfullscreen" value="true"/><param name="menu" value="false"/><param name="wmode" value="transparent"/><embed src="http://static.issuu.com/webembed/viewers/style1/v2/IssuuReader.swf" type="application/x-shockwave-flash" allowfullscreen="true" menu="false" wmode="transparent" style="width:420px;height:282px" flashvars="mode=mini&backgroundColor=%23222222&documentId=120904081233-e0d34c15b42047f6b5645b780e6c77af" /></object>
Open publication - Free publishing - More teachers day

http://schooleducation.kar.nic.in/shikshanavarthe/SV0912.pdf
Tuesday, July 24, 2012
Saturday, December 3, 2011
Tuesday, October 25, 2011
Nano World - Two Books by Prof. C N R Rao released in Bangalore on 24 Oct. 2011

`ಬದುಕುವ ಸಾಮರ್ಥ್ಯ ರೂಪಿಸುವ ಶಿಕ್ಷಣ ಬೇಕು'
- October 25, 2011
ಯಲಹಂಕ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವುದರ ಜೊತೆಗೆ ಬದುಕುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ಸುಪ್ರೀಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಕರೆ ನೀಡಿದರು.
ಜಕ್ಕೂರಿನಲ್ಲಿರುವ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಪ್ರೊ.ಸಿ.ಎನ್.ಆರ್.ರಾವ್ ಅವರ `ಮಿತಿಯಿಲ್ಲದ ಏಣಿ`, `ನ್ಯಾನೊ ಪ್ರಪಂಚ`, `ನ್ಯಾನೊ ವರ್ಲ್ಡ್` ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೇವಲ ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನದ ಶಿಕ್ಷಣ ನೀಡುವುದರಿಂದ ಅವರಲ್ಲಿ ಜ್ಞಾನ ವೃದ್ಧಿಯಾಗಬಹುದು. ಆದರೆ ಬದುಕಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಲು ಬೇಕಾದ ಶಿಕ್ಷಣ ನೀಡುವುದು ಅತ್ಯಗತ್ಯ ಎಂದರು.
ದೇಶದ ಈಗಿನ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಮತ್ತು ವಿಜ್ಞಾನದ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಆರ್ಥಿಕ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು ಹೊರಟಿದ್ದೇವೆ ಎಂದು ವಿಷಾದಿಸಿದ ಅವರು, ಕೇವಲ ತಲಾದಾಯವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ಆರ್ಥಿಕ ಪ್ರಗತಿಯನ್ನು ಮನಗಾಣಬೇಕು ಎಂದು ಹೇಳಿದರು.
ಪುಸ್ತಕಗಳನ್ನು ರಚಿಸಿರುವ ಲೇಖಕರು, ಭಾರತದ ಅತ್ಯುತ್ತಮ ವಿಜ್ಞಾನಿ ಗಳಲ್ಲೊಬ್ಬರು ಎಂದು ಪ್ರಶಂಸಿಸಿ, ಅವರು ತಮ್ಮ ಪುಸ್ತಕಗಳಲ್ಲಿ ನೀಡಿರುವ ಮಾಹಿತಿಯನ್ನು ಜನರು ಅರ್ಥಮಾಡಿಕೊಳ್ಳುವ ಮೂಲಕ ಅದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಪುಸ್ತಕದ ಲೇಖಕರಾದ ಪ್ರೊ.ಸಿ.ಎನ್.ಆರ್.ರಾವ್ ಅವರು ಮಾತನಾಡಿ, ಯುವ ಜನಾಂಗಕ್ಕೆ ಮಾಹಿತಿಗಳು ದೊರೆಯಬೇಕೆಂಬ ಉದ್ದೇಶದಿಂದ ಈ ಪುಸ್ತಕಗಳನ್ನು ಬರೆದಿದ್ದೇನೆ. ಸಾಮಾನ್ಯ ಜ್ಞಾನಾರ್ಜನೆಗೆ ಅನುಕೂಲವಾಗುವಂತಹ ಕೃತಿಗಳನ್ನು ಹೆಚ್ಚಾಗಿ ರಚಿಸಬೇಕಾಗಿದೆ ಎಂದು ಅವರು ಹೇಳಿದರು.
ಶಿಕ್ಷಕರು ತಮ್ಮಲ್ಲಿರುವ ಸಂಪೂರ್ಣ ಜ್ಞಾನವನ್ನು ಮಕ್ಕಳಿಗೆ ಧಾರೆಯೆರೆದಾಗ ಮಾತ್ರ ಅವರು ನಿಜವಾದ ಶಿಕ್ಷಕರೆನಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಪ್ರೊ.ರೊದ್ದಂ ನರಸಿಂಹ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು. ಕೇಂದ್ರದ ಅಧ್ಯಕ್ಷ ಪ್ರೊ.ಎಂ.ಆರ್.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಅನುವಾದಕರಾದ ಡಾ.ಎಚ್.ಎಸ್.ನಿರಂಜನ ಆರಾಧ್ಯ, ಇಂದುಮತಿ ರಾವ್ ಮೊದಲಾದವರು ಉಪಸ್ಥಿತರಿದ್ದರು.
Sunday, October 2, 2011
Friday, September 9, 2011
Play and Learn English through Language Games Book Introduction in Shikshana Varthe - September 2011

SV0912 | | | |
SV0812 | | | |
SV0712 | | | |
SV0612 | | | |
SV0511 | | | |
SV0411 | | | |
SV0311 | | | |
SV0211 | | | |
SV0111 | |
Sunday, August 14, 2011
"Gurudeva Mattu Mahatma" Translated into Kannada by G. Ramanath Bhatt - Mayura Monthly - August 2011

ಆರ್. ಎಸ್. ರಾಜಾರಾಮ್
Regards
Navakarnataka Publications Pvt. Ltd.
Embassy Centre
Crescent Road
Kumarapark East
Bengaluru - 560 001
Phone : 080 3057 8020/21/22
080 2220 3580/81/82
Fax : 080 3057 8023
E-mail : navakarnataka@gmail.com
navakarnataka@vsnl.com
Url : www.navakarnataka.com
http://navakarnataka.blogspot.

Translated into Kannada by G. Ramanath Bhatt
Published in Mayura Monthly - August 2011
Thank You Editors
Saturday, April 9, 2011
Viswa Katha Kosha - A Compendium of Stories from All the World Over - Edited by Niranjana
Viswa Katha Kosha - A Compendium of Stories from All the World Over - Edited by Niranjana
Monday, April 4, 2011
Viswa Katha Kosha of Navakarnataka Publications - Press Reports on 4 April 2011

ವಿಶ್ವಕಥಾಕೋಶ ಮರುಮುದ್ರಿತ ಸಂಪುಟ ಬಿಡುಗಡೆ

ಬೆಂಗಳೂರು: ಮೂವತ್ತು ವರ್ಷಗಳ ಹಿಂದೆ ಪ್ರಕಟವಾಗಿದ್ದ ವಿಶ್ವಕಥಾಕೋಶ ಮಾಲಿಕೆಯ 25 ಮರುಮುದ್ರಿತ ಸಂಪುಟಗಳನ್ನು ಭಾನುವಾರ ಇಲ್ಲಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ನವಕರ್ನಾಟಕ ಪ್ರಕಾಶನ ಸಂಸ್ಥೆಯು ನಿರಂಜನರ (ಕುಳಕುಂದ ಶಿವರಾಯ) ಪ್ರಧಾನ ಸಂಪಾದಕತ್ವದಲ್ಲಿ ಹೊರತಂದಿದ್ದ ಈ ಕೃತಿಗಳನ್ನು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ‘ವಿಶ್ವದ ಶ್ರೇಷ್ಠ ಲೇಖಕರ ಕಥೆಗಳನ್ನೊಳಗೊಂಡ ಈ ಸಂಪುಟಗಳು ಇತರ ಧರ್ಮ, ವಿಚಾರಗಳನ್ನು ಪರಿಚಯಿಸಿರುವುದು ಶ್ಲಾಘನೀಯ’ ಎಂದರು.
ಈ ಸಂಪುಟಗಳ ಪ್ರಕಟಣೆಗೆ ಧನ ಸಹಾಯ ಮಾಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಮಾತನಾಡಿ, ‘ಒಬ್ಬ ಕನ್ನಡತಿಯಾಗಿ, ಸಾಹಿತ್ಯ ಪ್ರೇಮಿಯಾಗಿ ಈ ಪುಸ್ತಕಗಳ ಪ್ರಕಟಣೆಗೆ ಹಣ ನೀಡಿದ್ದೇನೆ. ಕೃತಿಗಳ ಪ್ರಕಟಣೆಗೆ ಯಾರು ಬೇಕಾದರೂ ಹಣ ನೀಡುತ್ತಾರೆ. ಆದರೆ 30 ವರ್ಷಗಳಷ್ಟು ಹಳೆಯದಾದ ವಿಶ್ವಕೋಶದ ಸಂಪುಟಗಳನ್ನು ಮರುಮುದ್ರಣ ಮಾಡಿರುವುದು ಸವಾಲಿನ ಕೆಲಸ’ ಎಂದರು.
‘ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳದಿದ್ದರೆ ಕನ್ನಡ ಲೇಖಕರು ಬದುಕುವುದಾದರೂ ಹೇಗೆ? ಪ್ರತಿಯೊಬ್ಬರೂ ತಮ್ಮ ಮನೆಯ ತಿಂಗಳ ಬಜೆಟ್‌ನಲ್ಲಿ ಸ್ವಲ್ಪ ಭಾಗವನ್ನು ಪುಸ್ತಕಗಳ ಖರೀದಿಗೆಂದೇ ತೆಗೆದಿರಿಸಬೇಕು’ ಎಂದು ಮನವಿ ಮಾಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ರಾಜಾರಾಮ್ ಮಾತನಾಡಿ, ‘ಇಂಟರ್ನೆಟ್, ಸರ್ಚ್ ಎಂಜಿನ್ ಇಲ್ಲದ ಸಮಯದಲ್ಲಿ ನಿರಂಜನರು ವಿಶ್ವದ ವಿವಿಧ ಲೇಖಕರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಭಾರತದಲ್ಲಿರುವ ವಿವಿಧ ದೇಶಗಳ ರಾಯಭಾರ ಕಚೇರಿಗಳಿಗೆ ಪತ್ರ ಬರೆದು ಆಯಾ ಲೇಖಕರ ಕೃತಿ, ವಿಳಾಸಗಳನ್ನು ಪಡೆಯಬೇಕಾಯಿತು. ಇದಕ್ಕಾಗಿಯೇ ಎರಡು ವರ್ಷಗಳು ಹಿಡಿದವು. ಆದರೆ ವಿದೇಶದಲ್ಲಿರುವ ಕೆಲ ಭಾರತೀಯ ರಾಯಭಾರಿಗಳು ಸ್ಪಂದಿಸಲಿಲ್ಲ’ ಎಂದು ವಿಷಾದಿಸಿದರು.
ಲಂಕಾ ದಹನವೇ?: ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್‌ಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಅತಿ ರಂಜಿತ ವರದಿಗಳನ್ನು ಪ್ರಕಟಿಸಿದವು. ‘ಲಂಕಾ ದಹನ’, ‘ಪಾಕಿಗಳ ಗಡಿಪಾರು’ ಎಂಬಂಥ ತಲೆ ಬರಹಗಳನ್ನು ಪ್ರಕಟಿಸುವ ಮೂಲಕ ರಾಜಕೀಯವನ್ನು ಕ್ರೀಡೆಯೊಂದಿಗೆ ಥಳುಕು ಹಾಕಿದ್ದ ಸರಿಯಲ್ಲ ಎಂದು ಅವರು ಟೀಕಿಸಿದರು.
ಕೃತಿ ಪರಿಚಯಿಸಿದ ಲೇಖಕ ಎಸ್.ದಿವಾಕರ್, ‘ವಿಶ್ವದ ವಿವಿಧ ಭಾಷೆಗಳ ಶ್ರೇಷ್ಠ ಕೃತಿಗಳಿಗೆ ಸರಿಸಾಟಿಯಾಗಬಲ್ಲ ಕನ್ನಡದ ಹಲವಾರು ಕಥೆಗಳು ವಿಶ್ವಕಥಾಕೋಶದಲ್ಲಿವೆ’ ಎಂದರು.ಇತರ ಭಾಷೆಗಳ ಕೃತಿಗಳನ್ನು ವಿಶ್ವಕಥಾಕೋಶಕ್ಕಾಗಿ ಅನುವಾದಿಸಿದ ಸಿ.ಸೀತಾರಾಂ, ಸಿ.ಕೃಷ್ಣರಾವ್, ಕೃತಿಗಳ ಮುಖಪುಟಕ್ಕೆ ಚಿತ್ರಗಳನ್ನು ರಚಿಸಿದ ಕಲಾವಿದ ಕಮಲೇಶ್, ಪ್ರಾಧ್ಯಾಪಕಿ ಡಾ.ಎಚ್.ನಾಗವೇಣಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ವಿಶ್ವ ಭ್ರಾತೃತ್ವವನ್ನು ಬಿಂಬಿಸುವ ನೃತ್ಯ ಪ್ರದರ್ಶನವನ್ನು ವಿಶ್ರುತಾ ಕಲಾ ಶಾಲೆಯ ಕಲಾವಿದರು ವಿದ್ಯಾ ವೆಂಕಟರಾಮ್ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದರು. ಗಾಯಕಿ ಸುಮತಿ ಯುದ್ಧ ವಿರೋಧಿ ಗೀತೆಗಳನ್ನು ಹಾಡಿದರು.
ವಿಶ್ವಕಥಾಕೋಶದ ಸಂಪುಟಗಳು
ಧರಣಿಮಂಡಲ ಮಧ್ಯದೊಳಗೆ (22 ಕನ್ನಡ ಕಥೆಗಳು), ಆಫ್ರಿಕದ ಹಾಡು (ಆಫ್ರಿಕಾ ಖಂಡ), ಕಾಡಿನಲ್ಲಿ ಬೆಳದಿಂಗಳು (ವಿಯೆಟ್ನಾಂ), ಚೆಲುವು (ಮಂಗೋಲಿಯಾ, ಚೀನಾ, ಜಪಾನ್), ಸುಭಾಷಿಣಿ (ಭಾರತ, ನೆರೆಹೊರೆಯ ದೇಶಗಳ 23 ಕಥೆಗಳು), ವಿಚಿತ್ರ ಕಕ್ಷಿದಾರ (ಇಂಗ್ಲೆಂಡ್), ಮಂಜುಹೂವಿನ ಮದುವಣಿಗ (ಹಂಗೆರಿ, ರೊಮಾನಿಯಾ), ಬೂದುಬಣ್ಣದ ಕಾಂಗರೂ (ಆಸ್ಟ್ರೇಲಿಯಾ ನ್ಯೂಜಿಲೆಂಡ್), ಹೆಜ್ಜೆಗುರುತು (ರಷ್ಯ-ನೆರೆಹೊರೆ ಕಥೆಗಳು), ಅರಬಿ (ಐರ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್), ನೆತ್ತರು ದೆವ್ವ (ಜೆಕೊಸ್ಲೊವಾಕಿಯಾ), ಬಾವಿಕಟ್ಟೆಯ ಬಳಿ (ಯುಗೋಸ್ಲಾವಿಯಾ, ಆಲ್ಬೇನಿಯಾ), ಅದೃಷ್ಟ (ಅಮೆರಿಕ, ಕೆನಡಾ, ಮೆಕ್ಸಿಕೊ), ಸಜ್ಜನನ ಸಾವು (ಐಸ್‌ಲೆಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ಲೆಂಡ್), ಡೇಗೆ ಹಕ್ಕಿ (ಇಟಲಿ, ಆಸ್ಟ್ರಿಯಾ), ಅವಸಾನ (ಗ್ರೀಸ್, ಸೈಪ್ರಸ್, ಟರ್ಕಿ), ತಾತನ ಹುಟ್ಟುಹಬ್ಬ (ಹಾಲೆಂಡ್, ಬೆಲ್ಜಿಯಂ), ಬಾಲ ಮೇಧಾವಿ (ಜರ್ಮನಿ), ಇಬ್ಬರು ಗೆಳೆಯರು (ಸ್ಪೇನ್, ಪೋರ್ಚುಗಲ್), ಅಬಿಂದಾ-ಸಯಿದ್ (ಇಂಡೊನೇಷ್ಯ, ಫಿಲಿಪೈನ್ಸ್, ಮಲಯ, ಸಿಂಗಪುರ, ಥಾಯ್ಲೆಂಡ್), ನಿಗೂಢ ಸೌಧ (ಫ್ರಾನ್ಸ್), ಬೆಳಗಾಗುವ ಮುನ್ನ (ಕ್ಯೂಬಾ, ಜಮೈಕಾ), ಮರಳುಗಾಡಿನ ಮದುವೆ (ಪಶ್ಚಿಮ ಏಷ್ಯ), ಕಿವುಡು ವನದೇವತೆ (ದಕ್ಷಿಣ ಅಮೆರಿಕ), ಸಾವಿಲ್ಲದವರು (ಪಂಚ ಮಹಾಕಾವ್ಯಗಳಿಂದ ಆಯ್ದ ಕಥೆಗಳು).
ಬಿಡಿ ಪ್ರತಿ ಬೆಲೆ ರೂ 65. ಎಲ್ಲ ಸಂಪುಟಗಳ ಬೆಲೆ ರೂ 1625. ಪ್ರತಿಗಳು ನವಕರ್ನಾಟಕ ಪ್ರಕಾಶನದ ಎಲ್ಲ ಮಳಿಗೆಗಳಲ್ಲಿ ಲಭ್ಯ.

Released on 3 April 2011
Thank You Press