Saturday, February 22, 2025

ವಿಜ್ಞಾನಿಗಳೊಡನೆ ವಿವೇಚನೆ ಭಾಗ - 1 (ಹೊಸತು ವಾಚಿಕೆ)


 ಪ್ರೊ|| ಯು. ಆರ್. ರಾವ್ : ಪರಮಾಣು ಇಂಧನದಿಂದ ವಿದ್ಯುಚ್ಛಕ್ತಿಯ ಉತ್ಪಾದನೆಯತ್ತ ಸಾಗುವುದು ನಮಗೆ ಅನಿವಾರ್ಯ. ನಮ್ಮ ದೇಶ ಮಾತ್ರವಲ್ಲ, ಎಲ್ಲರಿಗೂ ಅದೇ ದಾರಿ. ಯಾವ ಪರಿಮಾಣದಲ್ಲಿ ಎಂಬುದಷ್ಟೇ ಪ್ರಶ್ನೆ... ಪ್ರೊ| ಜೆ. ಆರ್. ಲಕ್ಷ್ಮಣರಾವ್ : 'ವಿಜ್ಞಾನ ಮತ್ತು ತಾಂತ್ರಿಕತೆ' ಇವುಗಳ ಬಗ್ಗೆ ಹೇಳೋದಾದರೆ ವಿಜ್ಞಾನ ಎನ್ನುವುದು 'ಜ್ಞಾನದ ಸಂಪಾದನೆ'. ಆದರೆ ತಾಂತ್ರಿಕತೆ ಈ ಜ್ಞಾನವನ್ನು ಬಳಸಿ ಉಪಯೋಗ ಪಡೆದುಕೊಳ್ಳುವುದು. ಡಾ|| ಸಿ. ಎನ್. ಆರ್. ರಾವ್ : ವಿಜ್ಞಾನಿಗಳು ನೈತಿಕ ಜವಾಬ್ದಾರಿ ಯನ್ನು ವಹಿಸಿಕೊಳ್ಳುವುದು ಅವಶ್ಯಕವಾಗಿದೆ... ಶುದ್ಧ ವಿಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಬದಲು ಎಲ್ಲೆಲ್ಲೂ ಐ.ಟಿ. ವಿಜೃಂಭಿಸುತ್ತಿದೆ. ಶ್ರೀಮತಿ ಕೆ. ಎನ್. ಮಾಲತಿ : ಇಂದು ಬಡವರಿಗೆ ಹಣ್ಣು ತರಕಾರಿ ಕೊಳ್ಳುವುದು ತುಂಬಾ ದುಬಾರಿಯಾಗುತ್ತಿದೆ... ರಾಸಾಯನಿಕ ಗೊಬ್ಬರ ಕೀಟ ನಾಶಕಗಳ ಹಾವಳಿಯಿಂದ ಸಹಜವಾದ ಸಾವಯವ ಕೃಷಿಯಿಂದ ಬೆಳೆದ ಆಹಾರ ಸಿಗುವುದು ಕಷ್ಟ..

No comments:

Post a Comment