Thursday, March 29, 2012

 
ಡಾ|| ಇಂದಿರಾ ಹೆಗ್ಗಡೆಯವರು ತುಳುನಾಡಿನ ಒಂದು ಪ್ರಾದೇಶಿಕ ಆಚರಣೆಯ ಪರಂಪರೆಯ ಮೂಲವನ್ನು ಹುಡುಕುತ್ತ ಬಹು ಶ್ತಮವಹಿಸಿ ಅಧ್ಯಯನ ಮಾದಿ ಅನುಭವ ಸಹಿತ ಪ್ರಸ್ತುತಪಡಿಸಿದ ಕೃತಿಯಿದು. ತುಳುನಾಡಿನಲ್ಲೆಲ್ಲ ಆರಾಧಿಸಲ್ಪಡುವ ಪ್ರಾಚೀನ ಸಂಸ್ಕೃತಿಯ ಬಿರ್ಮೆರ್ - ನಾಗ - ಭೂತ - ಮುಂತಾದ ದೈವಗಳ ಮೂಲಸ್ಥಾನ ಆದಿ - ಆಲಡೆ ಎಂದು ಕರೆಯಲಾಗುವ ಸ್ಥಳಗಳಿಗೆಲ್ಲ ಭೇಟಿ ಕೊಟ್ಟು ಈ ಆಚರಣೆಯ ಹಿನ್ನೆಲೆಯನ್ನು ಗ್ರಹಿಸಿದ್ದಾರೆ. ಇಲ್ಲಿ ಮಾತೃವಂಶೀಯ ಮೂಲದ ಅನೇಕ ಕಡೆಗಳಲ್ಲಿ ಮನೆಯೊಳಗೆ ಅಥವಾ ಹೊರಗಡೆ ಬನದಲ್ಲಿ ಸ್ಥಾಪಿತವಾದ ಭೂತ - ನಾಗಗಳ ಕಲ್ಲು ಪ್ರತಿಮೆಗಳಿದ್ದು ಅವುಗಳ ಹಿಂದಿರುವ ಚಾರಿತ್ರಿಕ ಅಂಶಗಳನ್ನು ತಿಳಿಸುತ್ತ ಇಂದಿಗೂ ಜೀವಂತವಾಗಿರುವ ಪದ್ಧತಿಗಳತ್ತ ನಮ್ಮ ಗಮನ ಸೆಳೆಯುತ್ತಾರೆ. ಗತ ಇತಿಹಾಸದ ಭಾಗವಾಗಿರುವ ಇವುಗಳ ಹಿಂದೆ ಏನೇನಿದೆಯೆಂದು ನಿಖರವಾಗಿ ತಿಳಿದುಕೊಳ್ಳಲು ನೂರಾರು ಗ್ರಂಥಗಳನ್ನು ಓದಿ ವಿವಿಧ ಜನವರ್ಗದವರನ್ನೂ ಸ್ವತಃ ಮಾತನಾಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜನರೊಂದಿಗೇ ಬೆಳೆದುಬಂದಿರುವ ಈ ಸಂಸ್ಕೃತಿಗಳ ಅಧ್ಯಯನ - ಪರಿಚಯಗಳು ಉಗಮ - ವಿಕಾಸ - ಪರಿವರ್ತನೆಗಳೆಂಬ ಮೂರು ನೆಲೆಗಳಲ್ಲಿ ಪರಿಚಯಿಸಲ್ಪಟ್ಟವೆ.

No comments:

Post a Comment