Thursday, April 17, 2025
Monday, April 14, 2025
ಉಲ್ಲಾಸ ಕಾರಂತ ಅವರ 3 ಪುಸ್ತಕಗಳು
ಈ ಕೃತಿಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿರುವ ಡಾ| ಎಚ್.ಆರ್. ಕೃಷ್ಣಮೂರ್ತಿಯವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದವರು. ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನಾಧಿಕಾರಿಯಾಗಿ ಆಕಾಶವಾಣಿ ಪ್ರವೇಶಿಸಿದ ಇವರು, ಈಗ ಆಕಾಶವಾಣಿಯ ದಕ್ಷಿಣ ವಲಯದ ಉನ್ನತಾಧಿಕಾರಿ. ಪ್ರಕೃತಿ, ಪರಿಸರ, ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ವಿಮರ್ಶೆ: ಜಗತ್ತಿನಲ್ಲಿ ಕಣ್ಮರೆಯಾಗುತ್ತಿರುವ ಜೀವಿಗಳ ಪಟ್ಟಿಯಲ್ಲಿ ಮಾರ್ಜಾಲ ಕುಟುಂಬಕ್ಕೆ ಸೇರಿದ ಹುಲಿಗಳೂ ಸೇರಿವೆ. ಹುಲಿಗಳ ಜೀವನದ ಬಗ್ಗೆ ಹಾಗೂ ಅವು ನಶಿಸುತ್ತಿರುವದಕ್ಕೆ ಕಾರಣಗಳನ್ನು ಕಾರಂತರು ಈ ಪುಸ್ತಕದಲ್ಲಿ ನೀಡಿದ್ದಾರೆ. https://navakarnataka.com/ullas-karanth-set-of-3-books
Friday, February 28, 2025
Nucleus - An Introduction of Dr. Palahalli Vishwanath - Shikshana Varthe - Monthly Magazine of the Department of Education - Feb 2025
Nucleus - An Introduction of Dr. Palahalli Vishwanath. Published by Navakarnataka Publications
Book Introduction by Bedre Manjunath in Shikshana Varthe - Monthly Magazine of the Department of Education - Feb 2025
Wednesday, February 26, 2025
Saturday, February 22, 2025
ವಿಜ್ಞಾನಿಗಳೊಡನೆ ವಿವೇಚನೆ ಭಾಗ - 1 (ಹೊಸತು ವಾಚಿಕೆ)
ಪ್ರೊ|| ಯು. ಆರ್. ರಾವ್ : ಪರಮಾಣು ಇಂಧನದಿಂದ ವಿದ್ಯುಚ್ಛಕ್ತಿಯ ಉತ್ಪಾದನೆಯತ್ತ ಸಾಗುವುದು ನಮಗೆ ಅನಿವಾರ್ಯ. ನಮ್ಮ ದೇಶ ಮಾತ್ರವಲ್ಲ, ಎಲ್ಲರಿಗೂ ಅದೇ ದಾರಿ. ಯಾವ ಪರಿಮಾಣದಲ್ಲಿ ಎಂಬುದಷ್ಟೇ ಪ್ರಶ್ನೆ... ಪ್ರೊ| ಜೆ. ಆರ್. ಲಕ್ಷ್ಮಣರಾವ್ : 'ವಿಜ್ಞಾನ ಮತ್ತು ತಾಂತ್ರಿಕತೆ' ಇವುಗಳ ಬಗ್ಗೆ ಹೇಳೋದಾದರೆ ವಿಜ್ಞಾನ ಎನ್ನುವುದು 'ಜ್ಞಾನದ ಸಂಪಾದನೆ'. ಆದರೆ ತಾಂತ್ರಿಕತೆ ಈ ಜ್ಞಾನವನ್ನು ಬಳಸಿ ಉಪಯೋಗ ಪಡೆದುಕೊಳ್ಳುವುದು. ಡಾ|| ಸಿ. ಎನ್. ಆರ್. ರಾವ್ : ವಿಜ್ಞಾನಿಗಳು ನೈತಿಕ ಜವಾಬ್ದಾರಿ ಯನ್ನು ವಹಿಸಿಕೊಳ್ಳುವುದು ಅವಶ್ಯಕವಾಗಿದೆ... ಶುದ್ಧ ವಿಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಬದಲು ಎಲ್ಲೆಲ್ಲೂ ಐ.ಟಿ. ವಿಜೃಂಭಿಸುತ್ತಿದೆ. ಶ್ರೀಮತಿ ಕೆ. ಎನ್. ಮಾಲತಿ : ಇಂದು ಬಡವರಿಗೆ ಹಣ್ಣು ತರಕಾರಿ ಕೊಳ್ಳುವುದು ತುಂಬಾ ದುಬಾರಿಯಾಗುತ್ತಿದೆ... ರಾಸಾಯನಿಕ ಗೊಬ್ಬರ ಕೀಟ ನಾಶಕಗಳ ಹಾವಳಿಯಿಂದ ಸಹಜವಾದ ಸಾವಯವ ಕೃಷಿಯಿಂದ ಬೆಳೆದ ಆಹಾರ ಸಿಗುವುದು ಕಷ್ಟ..
ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ 1799 - 1947
ವಸಾಹತುಪೂರ್ವ ಮತ್ತು ವಸಾಹತುಕಾಲೀನ ಭಾರತದ ಸಂದರ್ಭದಲ್ಲಿ ಆರ್ಥಿಕತೆಯ ಜೀವನಾಡಿಯಾಗಿದ್ದುದು ಕೃಷಿ ಮತ್ತು ಅದಕ್ಕೆ ಪೂರಕವಾಗಿದ್ದ ಕೈಗಾರಿಕೆಗಳ ವ್ಯವಸ್ಥೆಯೇ ಆಗಿದ್ದರೂ ಕರ್ನಾಟಕಕ್ಕೆ ಸಂಬಂಧಿಸಿ ಆ ಕುರಿತ ಅಧ್ಯಯನಗಳು ನಡೆದದ್ದು ಕಡಿಮೆಯೇ. ಈ ದೃಷ್ಟಿಯಿಂದ ಗೆಳೆಯ ಸಿದ್ದಲಿಂಗಸ್ವಾಮಿಯವರ ''ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ'' ಎಂಬ ಈ ಕೃತಿ ಸ್ವಾಗತಾರ್ಹವಾದುದು. 19ನೆಯ ಶತಮಾನಾರಂಭದಿಂದ ಹಿಡಿದು 20ನೇ ಶತಮಾನದ ಪೂರ್ವಾರ್ಧದ ವರೆಗಿನ ಅವಧಿಯ ಕರ್ನಾಟಕದ ಕೃಷಿ, ಕೃಷಿ ವ್ಯವಸ್ಥೆ, ಭೂ ಹಿಡುವಳಿ, ಭೂಕಂದಾಯ ವ್ಯವಸ್ಥೆಗಳು, ಔದ್ಯಮೀಕರಣ ಹಾಗೂ ನಗರೀಕರಣಗಳ ಪ್ರಕ್ರಿಯೆಯಲ್ಲಿ ಉಂಟಾದ ಕೃಷಿಯ ವಾಣಿಜೀಕರಣದಿಂದ ಉಂಟಾದ ಸ್ಥಿತ್ಯಂತರಗಳೇ ಮೊದಲಾದ ವಿಷಯಗಳನ್ನು ಸಿದ್ದಲಿಂಗಸ್ವಾಮಿಯವರು ವಿಮರ್ಶಾತ್ಮಕವಾಗಿ ಪರಿಶೀಲಿಸಿದ್ದಾರೆ.
ನುಡಿತೇರನೆಳೆದವರು : ಬಾನುಲಿ ಕಲಿಗಳು
1) ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಯಾವಾಗ ಆರಂಭ ಗೊಂಡವು , ಗೊತ್ತೇ ? 2) ದೇಶದ ಮೊದಲ ಖಾಸಗಿ ವಾಹಿನಿ ನಮ್ಮ ಮೈಸೂರಿನ ಕಥೆ ಗೊತ್ತೇ ? 3) ಮೈಸೂರು ಬೆಂಗಳೂರಾಗಿದ್ದು, 19 ವರ್ಷ ಸ್ಥಗಿತಗೊಂಡಿದ್ದು, ಪುನರಾರಂಭ ಗೊಂಡದ್ದು ತಿಳಿದಿದೆಯೇ ? 4) ದೊರೆಸ್ವಾಮಿ ಆಯ್ಯಂಗಾರ್, ಆರ್.ಕೆ ಶ್ರೀಕಂಠನ್ , ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್ ಕೃಷ್ಣಮೂರ್ತಿ, ಎಚ್ ಕೆ ನಾರಾಯಣ, ಪದ್ಮಚರಣ ಮೊದಲಾದ ಸಂಗೀತ ಮಾಂತ್ರಿಕರು ಆಕಾಶ ವಾಣಿಯಲ್ಲಿ 30 ವರ್ಷಗಳಿಗೂ ಮೀರಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಲ್ಲಿರಾ ? 5) ಆಕಾಶವಾಣಿ 1954 ರಲ್ಲೇ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಂಗೀತ ಕಛೇರಿ ಏರ್ಪಡಿಸುತ್ತಿತ್ತು ಅಂದರೆ ಆಶ್ಚರ್ಯ ಆಗುತ್ತದೆಯೇ? 6) ಧ್ವನಿಪರೀಕ್ಷೆ ಹೇಗೆ ನಡೆಯುತ್ತಿತ್ತು, ಅದಕ್ಕೆ ನಿಯಮಾವಳಿಗಳು ರೂಪುಗೊಂಡ ಬಗೆ ಎಂಥ ಚೆಂದ ಗೊತ್ತೇ ? 7) ಆಕಾಶವಾಣಿ ರೂಪಕ , ಆಕಾಶವಾಣಿ ನಾಟಕ ಲೋಕದಲ್ಲಿ ಸಂಚರಿಸಿದ್ದೀರಾ.. 8) ವಿಜ್ಞಾನ ಸರಣಿಗಳನ್ನು , ಸರಳ ವಾಗಿ ರೂಪಿಸಿ, ದೇಶದಲ್ಲೇ ಖ್ಯಾತಿ ಪಡೆದ ಬೆಂಗಳೂರು ಆಕಾಶವಾಣಿ ಪ್ರಯೋಗಗಳು.. ಅಬ್ಬಾ....! 9) ಕೃಷಿ ಪಾಠ ಶಾಲೆಯಲ್ಲಿ ಹಸು ಕರು ಎತ್ತು ಎಮ್ಮೆ ಕೋಳಿ ಬಹುಮಾನ ಕೊಟ್ಟರು. ರೈತರಿಗೆ ಬೋರೆವೆಲ್ ತೋಡಿಸಿಕೊಟ್ಟರು. ಕೇಳಿದ್ದೀರಾ? 10) ಆಕಾಶವಾಣಿ ಚಿತ್ರಗೀತೆ ಆಧಾರಿತ ಕಾರ್ಯಕ್ರಮ ಗಳನ್ನು ಉದ್ಘೋಷಕರು ಪಾಳಿಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಅವರ ಅನಿಸಿಕೆಗಳು ಮನದ ಮಾತು ಕೇಳಿದ್ದೀರಾ... ಇಂಥಹ ಹತ್ತು ಹಲವು ವಿಚಾರಗಳನ್ನು ಹೊತ್ತು ತರುತ್ತಿದೆ, "ನುಡಿತೇರನೆಳೆದವರು, ಬಾನುಲಿ ಕಲಿಗಳು" ಪುಸ್ತಕ. 1940 ರಿಂದ 1990 ರ ಅವಧಿಯಲ್ಲಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ದಿಗ್ಗಜ ಪ್ರಸಾರಕರ ವ್ಯಕ್ತಿ ಚಿತ್ರಗಳನ್ನು ಪರಿಚಯಿಸುತ್ತಿದೆ "ನುಡಿ ತೇರನೆಳೆದವರು" ಪುಸ್ತಕ. ಕರ್ನಾಟಕದ ಆಕಾಶವಾಣಿ ಕೇಂದ್ರಗಳಲ್ಲಿ ನಡೆದ ಕೆಲಸಗಳ ಸ್ಥೂಲ ದಾಖಲೀಕರಣ! ಕರುನಾಡ ಕೊರಳಿನ ಕಥೆಗಳು ! ! ಪ್ರಯೋಗಗಳು, ಪರಿಕಲ್ಪನೆಗಳು !! ಇಂಥ ಒಂದು ಪ್ರಯತ್ನ , ದೇಶದಲ್ಲಿ ಮೊದಲು ಎಂದಿದ್ದಾರೆ ಹಲವಾರು ಪರಿಣತರು. ಬನ್ನಿ, ನುಡಿ ತೇರ ಎಳೆದ ದಿಗ್ಗಜರಿಗೆ ನಮಸ್ಕಾರ ಮಾಡೋಣ. ಕನ್ನಡ ಭಾಷೆಗೆ , ಸಂಗೀತ , ಸಾಂಸ್ಕೃತಿಕ ಲೋಕಕ್ಕೆ ಆಕಾಶವಾಣಿ ನೀಡಿದ ಕೊಡುಗೆಗಳನ್ನು ಸ್ಮರಿಸೋಣ...https://navakarnataka.com/nuditeraneledavaru-banuli-kaligalu
ಬನ್ನಿ ಕ್ಯಾನ್ಸರ್ ಗೆಲ್ಲೋಣ
ಬನ್ನಿ ಕ್ಯಾನ್ಸರ್ ಗೆಲ್ಲೋಣ ಎಂಬ ಈ ಕನ್ನಡ ಪುಸ್ತಕವು ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ಮತ್ತು ಅದರ ಚಿಕಿತ್ಸಾ ಆಯ್ಕೆಗಳನ್ನು ಸುಲಭ ಹಾಗೂ ಸ್ಪಷ್ಟ ರೀತಿಯಲ್ಲಿ ವಿವರಿಸಲು ರಚಿಸಲಾಗಿದೆ. ಕ್ಯಾನ್ಸರ್ ರೋಗದ ಪ್ರಮುಖ ಕಾರಣಗಳು, ಮೊದಲ ಹಂತದ ಲಕ್ಷಣಗಳು ಹಾಗೂ ಇತ್ತೀಚಿನ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಸಮಗ್ರವಾಗಿ ಒಳಗೊಂಡಿರುವ ಈ ಕೃತಿ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಅನಾವರಣವಾಗದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತದೆ. ಈ ಪುಸ್ತಕವು ಯಾವುದೇ ವಿಭ್ರಾಂತಿಗಳನ್ನು ದೂರ ಮಾಡಿ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಎದುರಿಸಲು ಅಗತ್ಯವಿರುವ ಧೈರ್ಯ, ಉತ್ಸಾಹ ಮತ್ತು ಸಮರ್ಥತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಬನ್ನಿ, ಜ್ಞಾನದ ಮೂಲಕ ಬಲಶಾಲಿಗಳಾಗಿ, ಆರೋಗ್ಯಕರ ಭವಿಷ್ಯಕ್ಕೆ ಹೆಜ್ಜೆ ಇಡೋಣ.
Sunday, February 2, 2025
Travel Diary of Francis Buchanan - 200 Varshagala Hindiana Pravasa - M S Hebbar - Vishwavani 02.02.2025
Travel Diary of Francis Buchanan - 200 Varshagala Hindiana Pravasa - Translation by D S Lingaraju - Introduced by M S Hebbar - Vishwavani 02.02.2025
Saturday, January 18, 2025
Subscribe to:
Posts (Atom)