Sunday, June 9, 2013

Navakarnataka Books in Kannada Prabha 09 June 13


Navakarnataka Books in Kannada Prabha 09 June 13

ಹೊಸ ಪುಸ್ತಕ

ಪ್ರ: ನವಕರ್ನಾಟಕ ಪ್ರಕಾಶನಎಂಬೆಸಿ ಸೆಂಟರ್ ಕ್ರೆಸೆಂಟ್ ರಸ್ತೆಬೆಂಗಳೂರು- 560 001.ಇವರ ಪ್ರಕಟಣೆ...ಗುರಜಾಡರ ಕಥೆಗಳುಲೇ: ಸ. ರಘುನಾಥಪುಟ: 88, ಬೆಲೆ: 45 ರು.ಅಲೆಮಾರಿಯ ಅಂತರಂಗಲೇ: ಕುಪ್ಪೆ ನಾಗಾರಾಜಪುಟ: 216, ಬೆಲೆ: 125 ರು.ಶಾಂತಿಗೊಂದು ಸವಾಲುಲೇ: ಬಿ.ಎ. ಸನದಿಪುಟ: 168, ಬೆಲೆ: 100 ರು.ವಿಶ್ವ ಕಥಾವಾಹಿನಿಲೇ: ನಿರಂಜನಪುಟ: 352, ಬೆಲೆ: 200 ರು.ಅಕಾಲ ಮಳೆ ಸುರಿದಾಗಿನ ಕಥೆಲೇ: ಆನಂದ ವಿಂಗಕರಪುಟ: 144, ಬೆಲೆ: 90 ರು.ಪ್ರ: ಹಳ್ಳಿ ಸಾಹಿತ್ಯ ಪ್ರಕಾಶನ1226, 1ನೇ ಕ್ರಾಸ್ರಕ್ಷಣಪುರಂ, ಹಾಸನಇವರ ಪ್ರಕಟಣೆ...ಅಂತಲೇ: ಚಿನ್ನೇನಹಳ್ಳಿ ಸ್ವಾಮಿಪುಟ: 108, ಬೆಲೆ: 80 ರು.ಮನಸ್ಸು ಮಂದಾರಲೇ: ಡಾ. ಎ.ಎಂ. ನಾಗೇಶ್ಪುಟ: 112, ಬೆಲೆ: 70 ರು.ಪ್ರ: ಅನನ್ಯ ಪ್ರಕಾಶನ5ನೇ ಮೇನ್, 2ನೇ ಕ್ರಾಸ್ಆದರ್ಶನಗರಮಾಲೂರು- 563 130ಇವರ ಪ್ರಕಟಣೆ...ಪದ್ಯ ಹೇಳುವ ಮರಲೇ: ಸಿ.ಎಂ. ಗೋವಿಂದರೆಡ್ಡಿಪುಟ: 172, ಬೆಲೆ: 100 ರು.ಚಿಣ್ಣರ ಲೋಕದ ಬಣ್ಣದ ಹಾಡುಲೇ: ಸಿ.ಎಂ. ಗೋವಿಂದ ರೆಡ್ಡಿಪುಟ: 168, ಬೆಲೆ: 100 ರು.

Monday, May 20, 2013

Navakarnataka Book Launch Session - Report in Daily Newspapers 20 May 2013





























Navakarnataka Book Launch Session - Report in Udayavani Daily 20 May 2013

Navakarnataka Book Launch Session - Report in Vijayavani Daily 20 May 2013

Navakarnataka Book Launch Session - Report in Prajavani Daily 20 May 2013
Navakarnataka Book Launch Session - Photo in Samyuktha Karnataka Daily 20 May 2013

Saturday, May 11, 2013

ನಮ್ಮ ಮುಂಬರುವ ಹೊಸ ಪ್ರಕಟಣೆಗಳು







Tuesday, April 9, 2013

Neladodala Chiguru - Book Introduction in Udayavani Josh 09 April 2013

ಬಿಸಿ ಬಿಸಿ ಸುದ್ದಿ 
ನೆಲದೊಡಲ ಚಿಗುರು- ನಾರಾಯಣ ರೆಡ್ಡಿ ಯಶಸ್ಸಿನ ಕಥೆ 
ಮಣ್ಣಿನೊಡನೆ ಒಡನಾಡುತ್ತಾ ಹೊನ್ನಿನಂತಹ ಬೆಳೆ ತೆಗೆಯುತ್ತಿರುವ ನಾಡೋಜ ಡಾ.ಎಲ್‌. ನಾರಾಯಣ ರೆಡ್ಡಿಯವರ ಬದುಕು-ಚಿಂತನೆಗಳ ಸಂಗ್ರಹ ರೂಪ ನೆಲದೊಡಲ ಚಿಗುರು ಕಳೆದ ವಾರ ಬಿಡುಗಡೆಯಾಗಿ ಕೃಷಿಕರಿಗೆ ಹೊಸ ವಿಧಾನಗಳನ್ನು ತೆರೆದು ತೋರಿಸಿದೆ, ಹೊಸ ಚಿಂತನೆಗೆ ಹಚ್ಚಿದೆ.(ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು. ಫೋನ್‌: 080-22203580) ಮಣ್ಣಿನ ನರುಗಂಪನ್ನು ಉಳಿಸುವ ಸಾವಯವ ಪದ್ಧತಿಯ ಪ್ರತಿಪಾದಕ ನಾರಾಯಣ ರೆಡ್ಡಿಯವರ ಜೀವನ-ಸಾಧನೆಯನ್ನು ಅವರೊಡನೆ ಕೆಲಸಮಾಡಿರುವ ಎನ್‌.ಎಲ್‌. ಆನಂದ್‌ ಮತ್ತು ಗುಂಡಪ್ಪ ದೇವಿಕೇರಿಯವರು ಆಸಕ್ತಿ ಮೂಡಿಸುವಂತೆ ನಿರೂಪಿಸಿ¨ªಾರೆ. 
ಇಂದಿನ ಯುವಕರು ಈ ಮನುಷ್ಯ ಜನ್ಮದ ಉದ್ದೇಶಗಳನ್ನೇ ಮರೆತು, ಕ್ಷಣಿಕ ಸುಖದ ಬೆನ್ಹತ್ತಿ, ತಮ್ಮ ಪವಿತ್ರವಾದ ಜೀವನವನ್ನು ವ್ಯರ್ಥಮಾಡಿಕೊಂಡು ಪಶ್ಚಾತ್ತಾಪಪಡುತ್ತಿ¨ªಾರೆ. ಇದು ಆರೋಗ್ಯಕರ ಸಮಾಜದ ಒಳ್ಳೆಯ ಬೆಳವಣಿಗೆಯಲ್ಲ. ಅವರು ಉದಾತ್ತ ಧ್ಯೇಯವನ್ನು ಹೊಂದು, ಚಿಂತನೆಗಳನ್ನು ಮೈಗೂಡಿಸಿಕೊಂಡು ಶ್ರಮಿಸಿದರೆ, ಗೌರವದಿಂದ ಕೂಡಿದ ನೆಮ್ಮದಿಯ ಬದುಕು ನಡೆಸಿ ಸಮಾಜಕ್ಕೆ ದಾರಿ ತೋರಿಸಬಲ್ಲರೆಂಬುದು ನನ್ನ ನಂಬುಗೆ. ಅದೇ ಈ ಪುಸ್ತಕದ ಆಶಯ. 
ಮನುಷ್ಯನ ಏಳಿಗೆಗೆ ಹೆಚ್ಚಿನ ವಿದ್ಯೆ ಮತ್ತು ಐಶ್ವರ್ಯ ಅನಿವಾರ್ಯವಲ್ಲವೆಂಬುದು ನನ್ನ ಬದುಕಿನಲ್ಲಿ ನಾನು ಕಂಡುಕೊಂಡ ನಿತ್ಯಸತ್ಯವನ್ನು ಈ ಹೊತ್ತಿಗೆಯಲ್ಲಿ ನೈಜ ಸ್ಥಿತಿಯಲ್ಲಿ ನಿರೂಪಿಸಲಾಗಿದೆ. ಯುವಕರು-ವಿದ್ಯಾರ್ಥಿಗಳು, ರೈತಾಪಿ ಬಂಧುಗಳು, ಕೃಷಿ ಸ್ನೇಹಿ ಮನಸುಗಳು ಈ ಪುಸ್ತಕವನ್ನು ಓದಿ, ಚಿಂತಿಸಿ, ಪ್ರಯತ್ನಿಸಿ ಸಫ‌ಲರಾದರೆ ಈ ಇಬ್ಬರು ಯುವ ಬರಹಗಾರರ ಶ್ರಮವನ್ನು ಗೌರವಿಸಿದಂತೆಯೇ ಸರಿ. ಯುವಕರಲ್ಲಿ, ಹೆಚ್ಚಿನ ಮಟ್ಟಿಗೆ ಗ್ರಾಮೀಣರಲ್ಲಿ, ನಮ್ಮಿಂದ ಏಳಿಗೆ ಸಾಧ್ಯವಿಲ್ಲ ಎಂಬ ಹಿಂಜರಿಯುವಿಕೆನ್ನು ತೊಡೆದು ನಾನು ಸಾಧಿಸಿ ತೋರಿಸಬÇÉೆ ಎಂಬ ಛಲ ಮೂಡಿಸುವಲ್ಲಿ ಈ ಹೊತ್ತಗೆಯು ಸಹಾಯವಾಗಬಲ್ಲದು ಎಂಬುದರಲ್ಲಿ ನನಗೆ ವಿಶ್ವಾಸವಿದೆ, ಎನ್ನುತ್ತಾರೆ ಸಾಧಕ ನಾರಾಯಣ ರೆಡ್ಡಿಯವರು. 
ಸಾವಯವ ಯೋಗಿ ಎಂದು ಹೆಸರು ಪಡೆಯಲು ಮತ್ತು ಅವರಿಗೆ ದೇಶವಿದೇಶಗಳ ಕೃಷಿ ತಜ್ಞರಿಂದ, ಸರಕಾರಗಳಿಂದ ಸಂದಿರುವ ಪ್ರಶಸ್ತಿಗಳೂ ಅಷ್ಟೇನು ಸುಲಭವಾಗಿ ದೊರೆತಿಲ್ಲ. ಅವರು ರಾತ್ರಿ ಹಗಲು ಹೆಂಡತಿ ಮಕ್ಕಳೊಂದಿಗೆ ಅನ್ನ ನೀರು ಕಡೆಗಣಿಸಿ ದುಡಿದಿ¨ªಾರೆ. ಶಿಸ್ತು, ಶ್ರದ್ಧೆ, ಸಂಕಲ್ಪಗಳಿಂದ, ಧರ್ಮಜೀವನದಲ್ಲಿಯೇ ನಡೆದುಬಂದಿ¨ªಾರೆ; ಅಸಂಖ್ಯ ಕಷ್ಟಗಳನ್ನು ಅನುಭವಿಸಿ¨ªಾರೆ. ಈ ದಾರಿಯಲ್ಲಿ ಮಹೋನ್ನತ ಸಾಧನೆಗಳನ್ನು ಮಾಡಿ ಸಮಾಜಕ್ಕೆ ತೋರಿಸಿ¨ªಾರೆ. ದಾರಿಯುದ್ದಕ್ಕೂ ಗಾಂಧೀಜಿಯವರ ಸರಳ, ಸತ್ಯ ಮಾರ್ಗಗಳನ್ನೇ ಅನುಸರಿಸುತ್ತ ಬಂದಿರುವುದು ಕಾಣುತ್ತದೆ. ಈ ಕಥೆ ಓದಿ ಮರುಚಿಂತನೆಯನ್ನು ಮಾಡುವಾಗ, ಏಳುವ ಪ್ರಶ್ನೆಯೊಂದಿದೆ. ಈ ಹಳ್ಳಿಯ ಸಾಧಾರಣ ಯುವಕ, ತನಗೆ ತಾನೇ ಗುರುವಾಗಿ, ತ್ಯಾಗ ಮತ್ತು ಶ್ರದ್ಧೆಗಳಿಂದ, ಇಂತಹ ಮಹೋನ್ನತ ಸಾಧನೆಯನ್ನು ಮಾಡಬೇಕಾದರೆ, ಈ ಸಾರ್ಥಕ ಸಾಧನೆಯ ಮೂಲವೇನು? ಪ್ರೇರಣೆಯೇನು? 
ಇದಕ್ಕೆ ಸರಳವಾದ ಉತ್ತರ ಸಿಗುವುದಿಲ್ಲ. ಜೀವನದಲ್ಲಿ ಯಾವುದೇ ಮಹಾತ್ಮರ ಕೃಪೆ ಅವರಿಗೆ ಒದಗಿ ಬಂದಿಲ್ಲ; ಯಾವುದೇ ಅದ್ಭುತ ಘಟನೆಯ ಪ್ರಭಾವಕ್ಕೆ ಒಳಗಾಗಿಲ್ಲ. ಉದ್ದಕ್ಕೂ ಕಷ್ಟ ನಿಷ್ಟುರಗಳನ್ನು ಎದುರಿಸುವಾಗ, ಎಲ್ಲರ ಹೃದಯದಲ್ಲೂ ಅಡಗಿರುವ ಧರ್ಮನಿಷ್ಠೆಯನ್ನು ಇವರು ಎಚ್ಚರಿಸಿಕೊಂಡಿದ್ದೇ ಈ ಸಾಧನೆಗೆ ಕಾರಣವೆಂದು ಕಾಣುತ್ತದೆ. ಅದು ತ್ಯಾಗ, ಶ್ರದ್ಧೆ ಮತ್ತು ಸಂಕಲ್ಪದ ಫ‌ಲ, ಕೇವಲ ಅವಕಾಶದ ಫ‌ಲವಲ್ಲ, ಎನ್ನುತ್ತಾರೆ ಹಿರಿಯ ಕೃಷಿ ತಜ್ಞ ಡಾ.ಆರ್‌. ದ್ವಾರಕೀನಾಥ್‌. ಈ ಮಾರ್ಗದರ್ಶಿ ಕೃತಿಯನ್ನು ನಮ್ಮ ಯುವಜನರು ಓದಲೇಬೇಕು ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಿಲ್ಲ, ಅಲ್ಲವೇ?