Monday, July 6, 2009

Review of Book on Che in Pustakapreethi Blog



ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.
“……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರನಾಗಿ ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧಃಪಾತಾಳಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ, ಅಥವಾ ಆರೋಗ್ಯ ಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಟವೆಂದು ಹೇಳಲಾಗದ ಜೀವನದ ದ್ಯೇಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ….. ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು.
ಇದು ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ ನಾವು ಸಂಗಾತಿಗಳು! ಎಂದ ಅಗ್ರಗಣ್ಯ ಕ್ರಾಂತಿಕಾರಿ ಮತ್ತು ಲ್ಯಾಟಿನ್ ಅಮೆರಿಕಾದ ಜನತೆಗಳ ರಾಷ್ಟ್ರೀಯ ವಿಮೋಚನಾ ಹೋರಾಟಗಾರ ಆರ್ನೆಸ್ಟೋ ಚೆ ಗುವಾರರ ಜೀವನದ ಬಗ್ಗೆ ಐ. ಲವ್ರೆತ್ಸ್ಕಿ (ಡಾ.ಐ.ಆರ‍್.ಗ್ರಿಗುಲೆವಿಚ್, ಸೋವಿಯತ್ ಒಕ್ಕೂಟದ ವಿಜ್ಞಾನಗಳ ಅಕಾದೆಮಿಯ ಕರೆಸ್ಪಾಂಡಿಂಗ್ ಸದಸ್ಯ) ಬರೆದ ಪುಸ್ತಕ ಇದು.
ಈ ಪುಸ್ತಕಕ್ಕೆ ಲೇಖಕರು ಅನೇಕ ದಾಖಲೆಗಳನ್ನು, ಪತ್ರಿಕಾ ವರದಿ-ಲೇಖನಗಳನ್ನು, ಚೆ ಗುವಾರ ಅವರ ಮಿತ್ರರು, ಸಂಬಂಧಿಕರು ಮತ್ತು ಅವರ ಜೊತೆಗೂಡಿ ಹೋರಾಡಿದ ಸಂಗಾತಿಗಳೊಡನೆಯ ಸಂಭಾಷಣೆಗಳ ಟಿಪ್ಪಣಿಗಳನ್ನು ಬಳಸಿಕೊಂಡಿದ್ದಾರೆ.
ಈ ಪುಸ್ತಕವನ್ನು ಕನ್ನಡಕ್ಕೆ ತಂದವರು ಗೊ.ರು.ಚನ್ನಬಸಪ್ಪ, ಸೂರ್ಯಕಾಂತ ಸೊನ್ನದ ಹಾಗೂ ಕೆ.ಪಿ.ಸ್ವಾಮಿ
- ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ : ಆರ್ನೆಸ್ಟೋ ಚೆ ಗುವಾರ
ಮೂಲ ಲೇಖಕರು:ಐ ಲಾವ್ರೆತ್ ಸ್ಕಿ
ಪ್ರಕಾಶಕರು:ನವಕರ್ನಾಟಕ
ಪುಟ:504 ಬೆಲೆ:ರೂ.40/-(ಪ್ರಥಮ ಮುದ್ರಣದ ಬೆಲೆ)
Posted on July 4, 2009 by pusthakapreeethi

Book Review - Kannada Prabha - Sapthahika Prabha - 05-07-09

Kannada Prabha - Sapthahika Prabha
Book Review - 05-07-09