

***
ಬ್ಯಾಂಕ್ ವಂಚನೆಗಳು
(ಶೋಧನೆ ಮತ್ತು ನಿಯಂತ್ರಣ)

ಲೇ: ಎಸ್.ಸೀತಾರಾಮು
ಪು: 60 ಬೆ: ರೂ. 60
ಪ್ರ: ನವಕರ್ನಾಟಕ ಪ್ರಕಾಶನ
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,
ಬೆಂಗಳೂರು- 560 001
ಹಣ, ಬಂಗಾರ, ಸಂಪತ್ತು ಒಂದೆಡೆ ಇದ್ದಲ್ಲಿ ಮನುಷ್ಯನ ವಂಚನೆ ಇದ್ದದ್ದೇ. ಬ್ಯಾಂಕಿಗೂ ಟೋಪಿ ಹಾಕುವ ಚಾಣಾಕ್ಷರು ಎಲ್ಲ ಕಾಲದಲ್ಲೂ ಕಾಣಸಿಗುತ್ತಾರೆ. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಸುದೀರ್ಘಕಾಲ ಜಾಗೃತಿ ವಿಭಾಗದ ಉಪಮಹಾಪ್ರಬಂಧಕರಾಗಿ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಜಾಗೃತಾಧಿಕಾರಿ ಹಾಗೂ ವಂಚನೆಗಳ ಶೋಧನಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡಿದ ಅನುಭವ ಇರುವ ಎಸ್.ಸೀತಾರಾಮ್ ತಾವು ವೃತ್ತಿಯಲ್ಲಿ ಕಂಡುದ್ದನ್ನು ತಮ್ಮ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದು ಕೇವಲ ವಂಚನೆಗಳು ಹೇಗೆ ನಡೆಯುತ್ತವೆ ಎಂದು ದಾಖಲಿಸಿದ ಪುಸ್ತಕವಲ್ಲ. ‘ಬ್ಯಾಂಕ್ ವಂಚನೆಗಳನ್ನು ಕಂಡುಹಿಡಿಯಲು, ತಡೆಹಿಡಿಯಲು ಬಯಸುವ ಎಲ್ಲ ಲೆಕ್ಕ ಪರಿಶೋಧಕರು, ಬ್ಯಾಂಕ ವ್ಯವಸ್ಥಾಪನೆಗಳು, ಉದ್ಯೋಗಿಗಳು, ಅಪರಾಧ ನಿಯಂತ್ರಿಸುವ ಸಂಸ್ಥೆಗಳು ಹಾಗೂ ಬ್ಯಾಂಕ್ ಗ್ರಾಹಕರು,
ವಾಣಿಜ್ಯಶಾಸ್ತ್ರವನ್ನು ಓದುತ್ತಿರುವ ಪದವೀಧರ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೋಸ್ಕರ ಈ ಪುಸ್ತಕ’ ಎಂದು ತಮ್ಮ ಪುಸ್ತಕದ ವ್ಯಾಪ್ತಿಯನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ. ವಂಚನೆ, ಅದರ ಬಗೆಗಿನ ಕಾನೂನು, ಮನುಷ್ಯನ ವರ್ತನೆ ಇವನ್ನೆಲ್ಲ ವಿಷದವಾಗಿ ಇಲ್ಲಿ ಚರ್ಚಿಸಲಾಗಿದೆ. ಬ್ಯಾಂಕ್‌ಗಳಲ್ಲಿನ ವಂಚನೆ ಹಾಗೂ ಅದು ಸಂಭವಿಸುವ ಬಗೆಯ ಬಗ್ಗೆ ಆಸಕ್ತಿ ಇರುವವರಿಗೆ ಕೂತುಹಲ ಹುಟ್ಟಿಸುವ ಪುಸ್ತಕ ಇದಾಗಿದೆ.