Saturday, February 16, 2013

ಶೀಘ್ರದಲ್ಲಿ ಬರಲಿದೆ !

ಸಾವಯವ ಯೋಗಿ, ನಾಡೋಜ ಡಾ|| ಎಲ್. ನಾರಾಯಣ ರೆಡ್ಡಿಯವರ ಬದುಕು ಚಿಂತನೆಗಳನ್ನೊಳಗೊಂಡ ಪುಸ್ತಕ "ನೆಲದೊಡಲ ಚಿಗುರು"

 

 

ನಮ್ಮ ಮುಂಬರುವ ಪ್ರಕಟಣೆ ಮತ್ತು ಮರುಮುದ್ರಣಗಳು

 


Friday, February 15, 2013

ಡಾ|| ಜ್ಯೋತ್ಸ್ನಾ ಕಾಮತ್ ಅವರ ಇತ್ತೀಚಿನ ಕೃತಿಗಳಿಂದ ಕೆಲವು ಆಯ್ದ ಪುಟಗಳು ಇಲ್ಲಿವೆ ನೋಡಿ !!

ಅರ್ಷಾದ್ ಬತೇರಿಯವರ ಸಣ್ಣ ಕಥೆಗಳ ಸಂಕಲನ "ಭೂಮಿಯಷ್ಟು ಬದುಕು"

Tuesday, February 5, 2013

Corruption in India - Article in Udayavani Josh 05 Feb 2013

Corruption in India - Article in Udayavani Josh 05 Feb 2013

 Corruption in India - Article in Udayavani Josh 05 Feb 2013
Udayavani
 • ಭ್ರಷ್ಟಾಚಾರ ತಡೆಯುವುದು ಹೇಗೆ? ಒಂದು ವಾಕ್ಯದಲ್ಲಿ ಉತ್ತರಿಸಿ: ನೂರು ಅಂಕದ ಪ್ರಶ್ನೆ

 • ದಿನ ಬೆಳಗಾದರೆ ಮಾಧ್ಯಮಗಳ ತುಂಬಾ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕೂಗೇಳುತ್ತಿರುವುದು ಕೇಳಿಸ

  • Udayavani | Feb 04, 2013
   ದಿನ ಬೆಳಗಾದರೆ ಮಾಧ್ಯಮಗಳ ತುಂಬಾ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕೂಗೇಳುತ್ತಿರುವುದು ಕೇಳಿಸುತ್ತದೆ, ಕಾಣಿಸುತ್ತದೆ. ಇತ್ತೀಚೆಗೆ ನಡೆದ ಕೆಎಎಸ್‌ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪತ್ರಿಕೆ- 1ರಲ್ಲಿ ನೇರವಾಗಿ ಭ್ರಷ್ಟಾಚಾರ ವಿಷಯ ಕುರಿತ ಮುಖ್ಯ ಪ್ರಶ್ನೆಗಳಿದ್ದರೆ (ಭ್ರಷ್ಟಾಚಾರವು ಭಾರತದ ಪ್ರಗತಿಯನ್ನು ಕಾಡುತ್ತಿದೆಯೇ? ನಿಮ್ಮ ಟೀಕೆಗಳನ್ನು ಬರೆಯಿರಿ, ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ), ಪತ್ರಿಕೆ- 2ರಲ್ಲಿ ಸುತ್ತು ಬಳಸಿ ಅದೇ ವಿಷಯಕ್ಕೆ ಸಂಬಂಧಿಸಿದ ನಾಲ್ಕೈದು ಪ್ರಶ್ನೆಗಳಿದ್ದವು. (ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ, ಟಾಟಾ ಟ್ರಕ್‌ ಪ್ರಕರಣ, ಆಡಳಿತದಲ್ಲಿ ಪಾರದರ್ಶಕತೆ ಇತ್ಯಾದಿ) ಹಾಗೆಯೇ ಸಾರ್ವಜನಿಕ ಆಡಳಿತ ಪತ್ರಿಕೆಯಲ್ಲಿಯೂ ಕೂಡ ಈ ಕುರಿತಂತೆ ಪ್ರಶ್ನೆಗಳಿದ್ದವು. 

   ಭ್ರಷ್ಟಾಚಾರದ ಬಗ್ಗೆ ಇತ್ತೀಚೆಗೆ ನಡೆದ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪವಾಗಿದ್ದು, ಸಾಹಿತ್ಯ ವಲಯಕ್ಕೂ ಇದರ ಬಿಸಿ ತಟ್ಟಿದೆ ಎನ್ನುವುದನ್ನು ತೋರಿಸಿದರೆ ಆಶೀಶ್‌ ನಂದಿಯವರ ತಕ್ಷಣದ ಭಾವೋನ್ಮಾದದ ಪರಾಕಾಷ್ಟೆಯ ಮಾತುಗಳು ಭ್ರಷ್ಟಾಚಾರವನ್ನು ಸಮಾಜದ ನಿರ್ದಿಷ್ಟ ಪಂಗಡಗಳ ಕಡೆಗೆ ಬೊಟ್ಟು ಮಾಡಿ, ಸುಪ್ತವಾಗಿ ಕುದಿಯುತ್ತಿದ್ದ ಅಸಮಾಧಾನದ ಅಗ್ನಿಪರ್ವತವೇ ಸ್ಫೋಟಿಸಲಿಕ್ಕೆ ಕಾರಣವೂ ಆಗಿ¨ªಾರೆ. ಯಾವ ಹೇಳಿಕೆಗಳೂ ಸಾರ್ವಕಾಲಿಕ ಸತ್ಯವಲ್ಲ, ತಕ್ಷಣದ ಪ್ರತಿಕ್ರಿಯೆಗೆ ಭಾವೋದ್ರೇಕದ ಪರದೆ ಬೇಡ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ನಿರ್ದಿಷ್ಟ ಕಾರಣ, ವರ್ಗ, ವಯಸ್ಸು, ಲಿಂಗ ಎಂಬ ವರ್ಗೀಕರಣ ಇಲ್ಲ. ಕ್ಯಾನ್ಸರಿನೋಪಾದಿಯಲ್ಲಿ ಹಬ್ಬುತ್ತಿರುವ ಇದಕ್ಕೆ ಮೂಲದಲ್ಲಿಯೇ ಕತ್ತರಿ ಹಾಕಬೇಕಷ್ಟೇ! ಯುವಜನ ಶಕ್ತಿಯು ಮಂಥನಗೊಳ್ಳಲಿ, ಭ್ರಷ್ಟಾಚಾರ ನಿರ್ಮೂಲನೆಯಾಗಲಿ, ನಾಳಿನ ಭಾರತ ಉಜ್ವಲವಾಗಲಿ ಎಂದು ಹಾಡಬೇಕಷ್ಟೇ! 

   ಯಾವ ರಂಗದಲ್ಲಿ ಭ್ರಷ್ಟಾಚಾರವಿಲ್ಲ? ಯಾವ ಕಾರಣಕ್ಕಾಗಿ ಇದು ವ್ಯಾಪಕವಾಗಿ ಹಬ್ಬುತ್ತಿದೆ? ತಡೆಗಟ್ಟಲು ಸಾಧ್ಯವೇ? ಯುವಜನರಿಗೆ ಇದನ್ನು ತಡೆಯುವ ಚೈತನ್ಯ ಎಲ್ಲಿದೆ? ಈ ಎÇÉಾ ವಿಷಯಗಳಿಗೆ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ದಿನನಿತ್ಯ ಬರುತ್ತಿರುವ ಸುದ್ದಿಗಳೇ ಸಾಕ್ಷಿಯಾಗಿದ್ದರೂ ಅವುಗಳನ್ನು ವಿಶ್ಲೇಷಿಸುವ ಕೆಲಸ ಅಷ್ಟಾಗಿ ನಡೆದಿಲ್ಲವೆಂದೇ ಹೇಳಬೇಕು. ಉಪೇಂದ್ರ ಠಾಕೂರ್‌ ಅವರ ಕರಪ್ಷನ್‌ ಇನ್‌ ಏನ್‌ಶಿಯೆಂಟ್‌ ಇಂಡಿಯಾ ಕೃತಿ ಪ್ರಾಚೀನ ಭಾರತದಲ್ಲಿ ಇದ್ದ ಭ್ರಷ್ಟಾಚಾರದ ಸಂಗ್ರಹಿತ ಮಾಹಿತಿ ಒದಗಿಸಿದರೆ ಕಳೆದವಾರ ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ಸಾಮಾಜಿಕ ಕಾರ್ಯಕರ್ತ ವೈ. ಜಿ. ಮುರಳೀಧರನ್‌ ಅವರ ಭ್ರಷ್ಟಾಚಾರದ ಸುಳಿಯಲ್ಲಿ ಭಾರತ(ಪುಟಗಳು: 168, ಬೆಲೆ: ರೂ.120) ಮತ್ತು ಕರಪ್ಷನ್‌ ದ ರಾಟ್‌ ವಿಥಿನ್‌ ಎಂಬ ಕೃತಿಗಳು ಭಾರತದಲ್ಲಿ ಭ್ರಷ್ಟಾಚಾರದ ಪ್ರಸ್ತುತ ಸ್ಥಿತಿ-ಗತಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತದೆ.(ಪುಟಗಳು: 272, ಬೆಲೆ: ರೂ.225) 

   ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ಬಗ್ಗೆ ಪ್ರಕಟವಾಗಿರುವ ಲೇಖನ, ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಗಮನಿಸಿದರೆ ಈ ವಿಚಾರದ ಬಗ್ಗೆ ಬರೆಯಲು ಇನ್ನೇನೂ ಉಳಿದಿಲ್ಲವೇನೊ ಅನಿಸುತ್ತದೆ. ಅಷ್ಟೊಂದು ಮಾಹಿತಿ ರಾಶಿ ಇದೆ. ಆದರೆ ಇದರಲ್ಲಿ ಬಹುಪಾಲು ಸಾಮಗ್ರಿ ಇತ್ತೀಚೆಗೆ ಬೆಳಕಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ವ್ಯಾಖ್ಯಾನವಾಗಿದ್ದು, ಭ್ರಷ್ಟಾಚಾರದ ಮೂಲವನ್ನು ಶೋಧಿಸುವುದಿಲ್ಲ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಅದು ದಿಢೀರನೆ ಈ ಸಮಾಜಕ್ಕೆ ಕಾಲಿಡಲಿಲ್ಲ. ಅದೇ ರೀತಿ ಅದು ತಕ್ಷಣ ನಿರ್ಗಮಿಸುವುದೂ ಇಲ್ಲ. ಆದ್ದರಿಂದ ಭ್ರಷ್ಟಾಚಾರದ ಸಮಸ್ಯೆಗೆ ಕೂಡಲೇ ಪರಿಹಾರ ದೊರಕುವುದಿಲ್ಲ. ಅದರ ಬಗ್ಗೆ ಆಳವಾಗಿ ಅಭ್ಯಾಸ ಮಾಡುವ ಅಗತ್ಯವಿದೆ. ಭ್ರಷ್ಟಾಚಾರ ನಡೆದು ಬಂದ ರೀತಿ, ಅದರ ವಿಸ್ತಾರ ಮತ್ತು ಆಳ, ಅದರ ಕಾರಣಗಳು ಮತ್ತು ಪರಿಹಾರಗಳನ್ನು ಗುರುತಿಸಿ ಅದರ ಆಧಾರದ ಮೇಲೆ ಕಾರ್ಯಸೂಚಿಯೊಂದನ್ನು ತಯಾರಿಸಿ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ, ಎನ್ನುತ್ತಾ ತಮ್ಮ ಪ್ರಯತ್ನ ಈ ಕುರಿತಂತೆ ಹೆಚ್ಚಿನ ಬೆಳಕು ಚೆಲ್ಲುವಂತಹದ್ದು ಎಂದು ತಿಳಿಸಿ¨ªಾರೆ. 

   ಭ್ರಷ್ಟಾಚಾರ ಮತ್ತು ಅದರ ನಿಯಂತ್ರಣಕ್ಕೆ ಬೇಕಾದ ತಾತ್ವಿಕ ನೆಲೆಯನ್ನು ಸಿದ್ಧಪಡಿಸಿ ಕನ್ನಡ ಓದುಗರ ಮುಂದಿಡುವುದು ಅವಶ್ಯಕ. ಭ್ರಷ್ಟಾಚಾರವನ್ನು ಸಾರ್ವಜನಿಕರ ದೃಷ್ಟಿಯಿಂದಲೂ ನೋಡುವ ಅಗತ್ಯವಿದೆ. ಭ್ರಷ್ಟಾಚಾರದ ಸಮಸ್ಯೆಯನ್ನು ಕೇವಲ ಕಾನೂನುಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಆ ಜವಾಬ್ದಾರಿಯನ್ನು ಕೊಟ್ಟು ನಾಗರಿಕರು ಸುಮ್ಮನೆ ಕೈಕಟ್ಟಿ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಭ್ರಷ್ಟಾಚಾರ ಇಡೀ ಸಮುದಾಯದ ಸಮಸ್ಯೆ. ಹಾಗೆಯೇ ಅದನ್ನು ತಡೆಗಟ್ಟುವುದು ಇಡೀ ಸಮುದಾಯದ ಜವಾಬ್ದಾರಿ. ಈ ನಿಟ್ಟಿನಲ್ಲಿ ಜನಸಾಮಾನ್ಯರನ್ನು ಎಚ್ಚರಿಸುವ ಕೆಲಸವೂ ಆಗಬೇಕಿದೆ. ನಾಗರಿಕರನ್ನು ಸತತವಾಗಿ ಈ ಕೆಲಸಕ್ಕೆ ಹಚ್ಚಬೇಕು. ಯಾವುದೋ ಒಂದು ಸಂದರ್ಭದಲ್ಲಿ ಅಥವಾ ಒಂದು ಕಾಲಘಟ್ಟದಲ್ಲಿ ಅವರನ್ನು ರೊಚ್ಚಿಗೆಬ್ಬಿಸಿದರೆ ಭ್ರಷ್ಟಾಚಾರ ನಿಗ್ರಹವಾಗುವುದಿಲ್ಲ. ಭ್ರಷ್ಟಾಚಾರಕ್ಕೆ ದೀರ್ಘಾವಧಿಯ ಹೋರಾಟದ ಅಗತ್ಯವಿದೆ. ಈ ಎರಡೂ ಉದ್ದೇಶಗಳನ್ನಿಟ್ಟುಕೊಂಡು ಈ ಪುಸ್ತಕಗಳು ರಚಿತವಾಗಿವೆ ಎನ್ನುತ್ತಾರೆ ವೈ.ಜಿ. ಮುರಳೀಧರನ್‌. 

   ಭ್ರಷ್ಟಾಚಾರದ ಸುಳಿಯಲ್ಲಿ ಭಾರತ 

   ಸುಳಿಯ ವೃತ್ತ, ಸುಳಿಯ ಆಳ ಮತ್ತು ಸುಳಿಯಿಂದ ಬಿಡುಗಡೆ ಎಂಬ ಮೂರು ವಿಭಾಗಗಳಲ್ಲಿ 12 ಅಧ್ಯಾಯಗಳಲ್ಲಿ ಭಾರತವು ಹೇಗೆ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಒ¨ªಾಡುತ್ತಿದೆ ಎನ್ನುವುದನ್ನು ವಿವರಿಸಿ¨ªಾರೆ. 

   ಪುಸ್ತಕದ ಆರಂಭದಲ್ಲಿ ನೀಡಿರುವ ಗಣ್ಯರ ಅಭಿಪ್ರಾಯಗಳು ಮತ್ತು ಪುಸ್ತಕದ ಬಗೆಗಿನ ಅನಿಸಿಕೆಗಳು ಪ್ರಸ್ತುತ ಸನ್ನಿವೇಶವನ್ನು ವಿವರಿಸುತ್ತವೆ. ಸ್ವಾತಂತ್ರÂ ಹೋರಾಟಗಾರರು, ಲೇಖಕರು, ನಿವೃತ್ತ ನ್ಯಾಯಾಧೀಶರು ಮತ್ತು 79ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಕೋ. ಚೆನ್ನಬಸಪ್ಪ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್‌, ಕೇಂದ್ರ ವಿಚಕ್ಷಣ ಆಯುಕ್ತರು, ಕರ್ನಾಟಕದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಆರ್‌. ಶ್ರೀಕುಮಾರ್‌, ಕರ್ನಾಟಕದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ|| ಚಿರಂಜೀವಿ ಸಿಂಗ್‌, ಸ್ವಾತಂತ್ರÂ ಹೋರಾಟಗಾರರಾದ ಎಚ್‌.ಎಸ್‌. ದೊರೆಸ್ವಾಮಿ, ಮಾಜಿ ಲೋಕಸಭಾ ಸದಸ್ಯ, ಸುರವರಂ ಸುಧಾಕರ ರೆಡ್ಡಿ, ಅಮೆರಿಕದ ಕೆಟರಿಂಗ್‌ ವಿಶ್ವವಿದ್ಯಾಲಯದ ಡಾ|| ಬದರಿನಾಥ್‌ ಕೆ. ರಾವ್‌, ಸಾರ್ವಜನಿಕ ವ್ಯವಹಾರಗಳ ಕೇಂದ್ರದ ಸ್ಥಾಪಕರಾದ ಡಾ|| ಸ್ಯಾಮ್ಯುಯೆಲ್‌ ಪಾಲ್‌ ಅವರ ಪ್ರತಿಕ್ರಿಯೆಗಳು ಭ್ರಷ್ಟಾಚಾರವನ್ನು ಖಂಡಿಸುತ್ತಾ ಅದರ ಬಗ್ಗೆ ವಿಶ್ಲೇಷಣೆ ನಡೆಸಿರುವ ವೈ.ಜಿ. ಮುರಳೀಧರನ್‌ ಅವರ ಪ್ರಯತ್ನವನ್ನು ಶ್ಲಾ ಸಿವೆ. 

   ಭ್ರಷ್ಟಾಚಾರ- ಹಿರಿಯರು ಕಂಡಂತೆ 

   ಭ್ರಷ್ಟಾಚಾರವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಅದು ಒಂದು ದಿನ ಬಯಲಾಗಿಯೇ ಆಗುತ್ತದೆ. ಬಲವಾದ ಸಂಶಯ ಬಂದಾಗ ಸಂಬಂಧಪಟ್ಟವರಿಂದ ಸಮಜಾಯಿಷಿ ಕೇಳಲು, ಅವರನ್ನು ಅಧಿಕಾರದಿಂದ ವಜಾ ಮಾಡಲು, ನ್ಯಾಯಾಲಯದಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲು, ಅವರ ನಡತೆಯನ್ನು ಪರಿಶೀಲಿಸಲು, ಪಂಚಾಯತರನ್ನು ಅಥವಾ ತನಿಖಾಧಿಕಾರಿಯನ್ನು ನೇಮಿಸುವುದು ಸಾರ್ವಜನಿಕರ ಹಕ್ಕು ಹಾಗೂ ಕರ್ತವ್ಯ ಆಗಿರುತ್ತದೆ. 
   -ಮಹಾತ್ಮ ಗಾಂಧಿ 

   ಭ್ರಷ್ಟಾಚಾರ ಅತ್ಯಂತ ಹಾನಿಕರವಾದ್ದು. ಅದರ ವಿರುದ್ಧ ಎಲ್ಲ ಕಾರ್ಯ ಕ್ಷೇತ್ರಗಳಲ್ಲೂ, ಎಲ್ಲ ಹಂತಗಳಲ್ಲೂ ಸಮರ ಸಾರಬೇಕು. 
   - ಡಾ|| ಎಸ್‌. ರಾಧಾಕೃಷ್ಣನ್‌ 

   ನೈತಿಕ ನಿಯಮಗಳು ಮತ್ತು ಆರ್ಥಿಕತೆಯ ನಡುವೆ ಸಂಘರ್ಷ ಉಂಟಾದಾಗ ಗೆಲ್ಲುವುದು ಆರ್ಥಿಕತೆಯೇ. ಇತಿಹಾಸವೇ ಇದಕ್ಕೆ ಸಾಕ್ಷಿ. ಸಾಕಷ್ಟು ಒತ್ತಾಯ ಮಾಡದೇ ಇದ್ದ ಪಕ್ಷದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯಾವತ್ತಿಗೂ ಸ್ವಇಚ್ಛೆಯಿಂದ ಆರ್ಥಿಕತೆಯ ಮೇಲಿನ ತಮ್ಮ ಬಿಗಿಹಿಡಿತವನ್ನು ಬಿಟ್ಟುಕೊಡುವುದಿಲ್ಲ. 
   - ಬಿ. ಆರ್‌. ಅಂಬೇಡ್ಕರ್‌ 

   ಯಾವುದೇ ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿರಬೇಕು ಮತ್ತು ನೈತಿಕವಾಗಿ ಯಾ ಬೌದ್ಧಿಕವಾಗಿ ಶ್ರೇಷ್ಠತೆ ಸಾಧಿಸಿರುವ ಪ್ರಜೆಗಳನ್ನುಳ್ಳ ರಾಷ್ಟ್ರ ಎಂದೆನ್ನಿಸಿಕೊಳ್ಳಬೇಕೆಂದಾದರೆ ಆ ದಿಶೆಯಲ್ಲಿ ಸಮಾಜದಲ್ಲಿನ ಈ ಮೂವರು ಅತ್ಯಂತ ಮಹತ್ವದ, ಪರಿಣಾಮಕಾರಿಯಾದ ಕೊಡುಗೆ ನೀಡಬಲ್ಲರು ಎಂದು ದೃಢ ಆತ್ಮವಿಶ್ವಾಸದಿಂದ ಹೇಳಬÇÉೆ. ಅವರೆಂದರೆ ತಂದೆ, ತಾಯಿ ಮತ್ತು ಶಿಕ್ಷಕ. 
   - ಅಬ್ದುಲ್‌ ಕಲಾಮ್‌ 

   ಅಧಿಕಾರ ಯಾರನ್ನೂ ಭ್ರಷ್ಟಗೊಳಿಸುವುದಿಲ್ಲ. ಭ್ರಷ್ಟಾಚಾರದ ಮೂಲ ಭಯ, ಅಂಜಿಕೆ. ಅಧಿಕಾರದ ಗಾದಿ ಏರಿರುವವರು ಅದು ಎಲ್ಲಿ ತಮ್ಮ ಕೈತಪ್ಪಿ$ಹೋಗುವುದೋ ಎಂಬ ಭಯದಿಂದ ಭ್ರಷ್ಟಾಚಾರಕ್ಕೆ ಮೊರೆ ಹೋಗುತ್ತಾರೆ ಮತ್ತು ಅಧಿಕಾರದ ನೆರಳÇÉೇ ಅಧೀನರಾಗಿರುವವರು, ಪರತಂತ್ರರಾಗಿ ಇರುವವರು ಅದರ ದುಷ್ಪರಿಣಾಮಗಳಿಂದಲೇ ಭ್ರಷ್ಟರಾಗಿಬಿಡುತ್ತಾರೆ. 
   -ಆಂಗ್‌ ಸಾನ್‌ ಸು ಕೀ 

   14ನೇ ಹಣಕಾಸು ಆಯೋಗ 

   ರಿಸರ್ವ್‌ ಬ್ಯಾಂಕಿನ ನಿವೃತ್ತ ಗೌರ್ನರ್‌ ಡಾ.ವೈ.ವಿ. ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 14ನೇ ಹಣಕಾಸು ಆಯೋಗವನ್ನು ರಚಿಸಲಾಗಿದ್ದು, ಈ ಸಂಬಂಧವಾಗಿ ಜನವರಿ 2, 2013ರಂದು ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ಆಯೋಗದ ಅವಧಿ 31.10.2014 ರವರೆಗೆ ನಿಗದಿಯಾಗಿದ್ದು, ಅಷ್ಟರೊಳಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಬೇಕಿರುತ್ತದೆ. ಯೋಜನಾ ಆಯೋಗದ ಸದಸ್ಯ ಪೊ›. ಅಭಿಜಿತ್‌ ಸೆನ್‌, ಕೇಂದ್ರ ಹಣಕಾಸು ಮಾಜಿ ಕಾರ್ಯದರ್ಶಿ ಸುಷ್ಮಾನಾಥ್‌, ನವದೆಹಲಿಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಫೈನಾನ್ಸ್‌ ಆ್ಯಂಡ್‌ ಪಾಲಿಸಿ ಸಂಸ್ಥೆಯ ನಿರ್ದೇಶಕ ಡಾ.ಎಂ. ಗೋವಿಂದ ರಾವ್‌, ರಾಷ್ಟ್ರೀಯ ಅಂಕಿ ಅಂಶ ಆಯೋಗದ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಸುದೀಪೊ¤ ಮುಂಡ್ಲೆ ಅವರು ಈ ಹಣಕಾಸು ಆಯೋಗದ ಸದಸ್ಯರುಗಳಾಗಿದ್ದು, ಅಜಯ್‌ ನಾರಾಯಣ್‌ ಝಾ ಅವರು ಆಯೋಗದ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿ¨ªಾರೆ. 
   ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳನ್ನು ಅಧ್ಯಯನ, ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ, ಸಹಾಯಧನ, ಪಂಚಾಯತ್‌ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ ಈ ಆಯೋಗ¨ªಾಗಿರುತ್ತದೆ. 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳ ಅನುಷ್ಠಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ 2015ರ ಏಪ್ರಿಲ್‌ನಿಂದ ಮುಂದಿನ ಐದು ವರ್ಷಗಳವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸ್ಸುಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಮುಖ್ಯ ಕೆಲಸ. 

   ಐಎಎಸ್‌, ಐಪಿಎಸ್‌ ಪೂರ್ವಭಾವಿ ಪರೀಕ್ಷೆ 2013 

   ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು ಇದೇ ಫೆಬ್ರವರಿ 02ರಂದು ಲೋಕಸೇವಾ ಆಯೋಗದ ವೆಬ್‌ಸೈಟ್‌, ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ವಿವರವಾದ ಪ್ರಕಟಣೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ 2013ರ ಮಾರ್ಚ್‌ 04 ಆಗಿದ್ದು, ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2012ರ ಮೇ 19 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2013ರ ನವೆಂಬರ್‌ 08ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯುತ್ತವೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! 
   ಹೆಚ್ಚಿನ ಮಾಹಿತಿ ಹಾಗು ಮಾದರಿ ಪತ್ರಿಕೆಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

   ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪರೀಕ್ಷೆ 2013 

   ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹು¨ªೆಗಳಿಗಾಗಿ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ನಡೆಸುವ ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪ್ರಥಮ ಹಂತದ(ಟೈರ್‌-1) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟವಾಗಿದೆ. ಇದೇ ಜನವರಿ 19ರಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಟೈರ್‌-1 ಪರೀಕ್ಷೆಗಳು ಏಪ್ರಿಲ್‌ 14 ಮತ್ತು 21ರಂದು ನಡೆಯಲಿದ್ದು, ಇದರಲ್ಲಿ ಆಯ್ಕೆಯಾದವರಿಗಾಗಿ ಟೈರ್‌-2 ಪರೀಕ್ಷೆಗಳು ಜುಲೈ 21 ಮತ್ತು ಸೆಪ್ಟೆಂಬರ್‌ 20ರಂದು ನಡೆಯಲಿವೆ. ಅಂತಿಮವಾಗಿ ಸ್ಕಿಲ್‌ಟೆಸ್ಟ್‌/ ಕಂಪ್ಯೂಟರ್‌ ಪರೀಕ್ಷೆ/ ಆಯ್ಕೆ ಸಂದರ್ಶನವೂ ಕೆಲವು ಹು¨ªೆಗಳಿಗೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! 
   ಹೆಚ್ಚಿನ ಮಾಹಿತಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

   ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ನಲ್ಲಿ ಕ್ರಾಷ್‌ಕೋರ್ಸ್‌ 

   ಮೈಸೂರಿನಲ್ಲಿರುವ ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಟೆಕ್ನಾಲಜಿ(ಇಐಕಉಖ) ಮೂಲಕ ಪರಿಶಿಷ್ಟ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಂದ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಟೆಕ್ನಾಲಜಿ ಟ್ರೆ„ನಿಂಗ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಯೋಮಿತಿ 18 ರಿಂದ 35 ವರ್ಷಗಳು. ತರಬೇತಿಯ ಅವಧಿ ಆರು ತಿಂಗಳು. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ, ವಸತಿ ನೀಡಿ ಮಾಹೆಯಾನ ರೂ.500 ಶಿಷ್ಯವೇತನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.02.2013. ಅರ್ಜಿಗಳನ್ನು ಜಿÇÉಾ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿ ಅಥವಾ ಜಿÇÉಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗಳಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಉಪನಿರ್ದೇಶಕರು, ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಟೆಕ್ನಾಲಜಿ, 437/ಎ, ಹೆಬ್ಟಾಳ ಇಂಡಸ್ಟ್ರಿಯಲ್‌ ಏರಿಯಾ, ಮೈಸೂರು- 570 016. ದೂರವಾಣಿ: 0821-2510349 / 2416128