Saturday, February 10, 2024
Friday, September 13, 2019
Friday, August 23, 2019
Tuesday, August 20, 2019
Thursday, August 1, 2019
Tuesday, June 25, 2019
ಕನ್ನಡ ಸಾಹಿತ್ಯ ಪರಿಷತ್ತಿನ 2018ರ ವಿವಿಧ ದತ್ತಿ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ 2018ರ ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ನವಕರ್ನಾಟಕದ 4 ಕೃತಿಗಳು.
ದಿ|| ಡಾ. ಎಚ್. ನರಸಿಂಹಯ್ಯ ದತ್ತಿ
ಬಹುಮಾನಿತ ಕೃತಿ : ಭಗವದ್ಗೀತೆ ಒಂದು ಅವಲೋಕನ
ಲೇಖಕರು : ಡಾ. ಜಿ. ರಾಮಕೃಷ್ಣ
ದಿ|| ಡಾ. ಎ.ಎಸ್ ಧರಣೇಂದ್ರಯ್ಯ - ಮನೋವಿಜ್ಞಾನ ದತ್ತಿ
ಬಹುಮಾನಿತ ಕೃತಿ : ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ ?
ಲೇಖಕರು : ಡಾ. ಮಹಾಬಲೇಶ್ವರ ರಾವ್
ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ - ವೈಚಾರಿಕ ಲೇಖನಗಳ ಕೃತಿ
ಬಹುಮಾನಿತ ಕೃತಿ : ಸಣ್ಣ ಸಂಗತಿ (ವೈಚಾರಿಕತೆ)
ಲೇಖಕರು : ಡಾ. ರಹಮತ್ ತರೀಕೆರೆ
ಶ್ರೀಮತಿ ಭಾರತಿ ಮೋಹನಕೋಟಿ ದತ್ತಿ
ಬಹುಮಾನಿತ ಕೃತಿ : ಕೊನೆಯ ಅಲೆ
ಅನುವಾದಕರು : ಶ್ರೀಮತಿ ಸುಮಂಗಲಾ ಎಸ್. ಮುಮ್ಮಿಗಟ್ಟಿ

Friday, June 14, 2019
Saturday, April 27, 2019
Friday, April 5, 2019
ಸ್ವಾತಂತ್ರ್ಯೋತ್ತರ ಭಾರತ - ಸಮಕಾಲೀನ ಭಾರತ ಕುರಿತು ಒಂದು ಪರಿಪೂರ್ಣ ಮತ್ತು ವಸ್ತುನಿಷ್ಠ ಪರಿಚಯ
ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವವೆನಿಸಿದ ಭಾರತದ ಪ್ರಗತಿಯ ಕತೆ ಸಮೃದ್ಧ ಮತ್ತು
ಪ್ರೇರಣಾತ್ಮಕವಾಗಿದೆ. ಬಿಪಿನ್‍ಚಂದ್ರ ಮತ್ತು ಸಹಲೇಖಕರ ‘ಸ್ವಾತಂತ್ರ್ಯಕ್ಕಾಗಿ ಭಾರತದ
ಹೋರಾಟ’ ಗ್ರಂಥದ ಮುಂದುವರಿದ ಭಾಗವಾಗಿರುವ ಈ ಸಂಪುಟ ಭಾರತ ಎದುರಿಸಿದ ಸವಾಲುಗಳನ್ನು
ಹಾಗೂ ಅದು ಸಾಧಿಸಿದ ಯಶಸ್ಸುಗಳನ್ನು ವಸಾಹತುಶಾಹಿ ಪರಂಪರೆ ಮತ್ತು ಒಂದು ಶತಮಾನದವರೆಗೆ
ನಡೆದ ಸ್ವಾತಂತ್ರ್ಯ ಹೋರಾಟದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
ಈ ಗ್ರಂಥ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ಹಾಗೂ ನೆಹರುವಾದಿ ರಾಜಕೀಯ, ಆರ್ಥಿಕ ಕಾರ್ಯಕ್ರಮ ಮತ್ತು ವಿದೇಶಾಂಗ ನೀತಿ ಹೇಗೆ ವಿಕಸಿಸಲ್ಪಟ್ಟಿತು ಹಾಗೂ ಅಭಿವೃದ್ಧಿಪಡಿಸಲ್ಪಟ್ಟಿತು ಎಂಬುದನ್ನು ವಿವರಿಸುತ್ತದೆ. ಇದು ರಾಷ್ಟ್ರದ ಸದೃಢೀಕರಣ ಹಂತಗಳು, ಕೇಂದ್ರ ಮತ್ತು ರಾಜ್ಯಗಳಲ್ಲಿ ಪಕ್ಷ ರಾಜಕೀಯ, ಪಂಜಾಬ್ ಸಮಸ್ಯೆ, ಜಾತಿ ವಿರೋಧಿ ರಾಜಕಾರಣ ಮತ್ತು ಅಸ್ಪøಶ್ಯತೆಯನ್ನು ಪರಾಮರ್ಶಿಸುತ್ತದೆ.
ಭಾರತದಲ್ಲಿ ಕೋಮುವಾದದ ಬೆಳವಣಿಗೆ ಹಾಗೂ ಅದನ್ನು ಪ್ರಚ್ಛನ್ನಗೊಳಿಸುವಲ್ಲಿ ರಾಜ್ಯಾಧಿಕಾರದ ಬಳಕೆಯನ್ನು ಈ ಗ್ರಂಥ ವಿಶ್ಲೇಷಿಸುತ್ತದೆ. ಇದು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟದ ಪತನದ ಪರಿಣಾಮವಾಗಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಉದಯ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸುತ್ತದೆ.
ಈ ಗ್ರಂಥ 1991ರಿಂದೀಚೆಯ ಭಾರತೀಯ ಆರ್ಥಿಕ ಸುಧಾರಣೆಗಳು ಹಾಗೂ ವಿಸ್ತøತ ಭೂಸುಧಾರಣೆಗಳು, ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಸಾಧನೆಗಳು ಮತ್ತು ವೈಫಲ್ಯಗಳ ಮೌಲ್ಯಮಾಪನ ಮಾಡುತ್ತದೆ. ಅದರೊಂದಿಗೆ ಜವಾಹರ್‍ಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್, ರಾಜೀವ್ ಗಾಂಧಿ, ವಿಶ್ವನಾಥ ಪ್ರತಾಪ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನ್‍ಮೋಹನ್ ಸಿಂಗ್ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತ ಪ್ರಗತಿಪಥದಲ್ಲಿರುವ ದೇಶವೊಂದರ ಸಂಚಲನೆ ಕುರಿತು ಗಣನೀಯ ಮೇಲ್ನೋಟವೊಂದನ್ನು ಒದಗಿಸುತ್ತದೆ.

Thursday, March 21, 2019
ಯಾವ ಜನ್ಮದ ಮೈತ್ರಿ ? (ರಾವೀಯಿಂದ ಕಾವೇರಿಯವರೆಗಿನ ಯಾನ)
‘ಒಳಗಿನವರು’ ಮತ್ತು ‘ಹೊರಗಿನವರು’ ಎಂಬ ಅಸಹನೆಯ ಚರ್ಚೆ ಎಲ್ಲ ಸಂಸ್ಕøತಿಗಳಲ್ಲೂ,
ಎಲ್ಲ ಕಾಲಕ್ಕೂ ನಡೆಯುತ್ತಲೇ ಬಂದಿದೆ. ಬಹಳಷ್ಟು ಸಂದರ್ಭಗಳಲ್ಲಿ ಈ ಚರ್ಚೆ ನಮ್ಮೆಲ್ಲ
ನಡಾವಳಿಯ ಸುಪ್ತವಾಹಿನಿಯಾಗಿರುತ್ತದೆ. ಸಾಧಾರಣವಾಗಿ, ಸರ್ದಾರ್ ಚಿರಂಜೀವಿ ಸಿಂಫ್ ಅವರ
ಬಗ್ಗೆ ನಾವು ಬೆರಗು, ಸಂತಸ, ಸಂಭ್ರಮ ವ್ಯಕ್ತಪಡಿಸುವುದು ಅವರು ದೂರದ ಪಂಜಾಬಿನಿಂದ ಬಂದು
ನಮ್ಮ ಸೀಮೆಯ ಗುಣಕ್ಕೆ ಅದ್ಭುತವಾಗಿ ಹೊಂದಿಕೊಂಡರು ಎಂಬ ಕಾರಣಕ್ಕೆ. ಅವರು ನಮ್ಮ
ಸಂಸ್ಕøತಿಯ ಸೂಕ್ಷ್ಮ ಅರಿತರು; ನಮ್ಮ ಕಲೆ, ಸಂಗೀತ, ಸಾಹಿತ್ಯ ಪೋಷಿಸಿದರು; ನಮ್ಮ ಭಾಷೆ
ಮತ್ತು ಅದರ ನುಡಿಗಟ್ಟನ್ನು ನಮಗಿಂತಲೂ ಚೆನ್ನಾಗಿ ಬಳಸಿದರು; ನಮ್ಮ ಹಬ್ಬಗಳ ಬಗ್ಗೆ
ಹಿಗ್ಗಿದರು; ನಮ್ಮ ಊಟ, ಉಪ್ಪಿನಕಾಯಿ ಸವಿದರು; ಕೊನೆಗೆ, ನಮ್ಮ ನದಿಯಲ್ಲಿ ತಮ್ಮ
ತಂದೆ-ತಾಯಿಯ ಮೋಕ್ಷ ಹುಡುಕಿದರು ಎಂಬ ಕಾರಣಕ್ಕೆ. ಅಂದರೆ, ‘ಮಾದರಿಯ ಹೊರಗಿನವರಾದರು’
ಎಂಬುದಕ್ಕೆ. ಇದೆಲ್ಲವೂ ಸರಿಯೆ. ಇದೆಲ್ಲವೂ ಅವರ ಹೆಗ್ಗಳಿಕೆ. ಆದರೆ, ಅವರನ್ನು
ಮೆಚ್ಚಿಕೊಳ್ಳಲು ಇದಷ್ಟೆ ಸುಲಭದ ತರ್ಕ ಸಾಲದು.
ಜಗತ್ತು ಕಂಡು, ಅದರ ಮೂಲೆ-ಮೂಲೆಗಳಲ್ಲಿ ಬದುಕಿ, ತಮ್ಮ ಲೋಕದೃಷ್ಟಿ ವಿಸ್ತರಿಸಿಕೊಂಡು, ಆಧುನಿಕತೆಯ ಒಳ-ಹೊರಗನ್ನು ಅರಿಯುತ್ತಲೇ ಸಂಪ್ರದಾಯಕ್ಕೆ ವಿಶಾಲತೆಯ ಚಾದರವನ್ನು ಹೊದಿಸಿದ ಸಿಂಫ್ ಸಾಹೇಬರು ನಮ್ಮಲ್ಲಿ ನಮ್ಮವರಾಗಿ ಬದುಕಿದ್ದು ಅವರ ದೊಡ್ಡತನ, ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ಆದರೆ, ನಾವು ಅವರಿಂದ ಕಲಿತದ್ದೇನು? ಅವರ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಂಡದ್ದು ಹೇಗೆ? ಅವರ ಘನತೆ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಗೆ ನಾವು ಸ್ಪಂದಿಸಿದ್ದು ಹೇಗೆ? ಅವರ ಭಾಷೆ, ಅವರ ಧರ್ಮ, ಅವರ ಸಂಸ್ಕøತಿಯ ವಿಶೇಷಗಳಿಗೆ ನಾವು ತೆರೆದುಕೊಂಡದ್ದು ಹೇಗೆ? ಇವೆಲ್ಲವನ್ನು ನಾವು ಯೋಚಿಸಬೇಕಿದೆ. ಹೀಗೆ ಯೋಚಿಸುವುದರ ಮೂಲಕ ನಾವು ನಮ್ಮ ಸಂಕುಚಿತತೆ, ಸಣ್ಣತನ, ಅಹಂಕಾರ, ಅಸಹನೆ, ಅಂಧಾಭಿಮಾನವನ್ನು ಮೀರಬೇಕಿದೆ. ನಮಗೆ ಇರಬಹುದಾದ ನಮ್ಮ ಶ್ರೇಷ್ಠತೆಯ ವ್ಯಸನದ ಸೂಚನೆಗಳನ್ನು ಧಿಕ್ಕರಿಸಬೇಕಿದೆ. ಇಲ್ಲಿರುವ ಲೇಖನಗಳು ನಮಗೆ ಈ ದಿಕ್ಕಿನಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡಲಿವೆ.
ಈ ಲೇಖನಗಳನ್ನು ಬರೆಯುವ ಮುನ್ನ ಕೂಡ ಸಿಂಫ್ ಅವರು ಕನ್ನಡದಲ್ಲಿ ಬರೆಯುತ್ತಿದ್ದರು. ಆದರೆ, ಅದು ಸರ್ಕಾರಿ ವ್ಯವಹಾರಗಳಿಗೆ ಸೀಮಿತಗೊಂಡಿತ್ತು. ತಮ್ಮ ಮಾತೃಭಾಷೆಯಾದ ಪಂಜಾಬಿ, ಶಿಷ್ಟವಾಗಿ ಕಲಿತ ಜರ್ಮನ್, ಫ್ರೆಂಚ್, ಉರ್ದು, ಹಿಂದಿ, ಮರಾಠಿ, ಬೆಂಗಾಲಿ ಸೇರಿದಂತೆ ಇನ್ನೂ ಅನೇಕ ಭಾಷೆಗಳಲ್ಲಿ ಸಾಹಿತ್ಯಿಕ ನಿಪುಣತೆಯಿಂದ ವ್ಯವಜರಿಸಬಹುದಾದ ಸಿಂಫ್ ಅವರು, ತಾವು ಬಳ್ಳಾರಿ ಮತ್ತು ತರೀಕೆರೆಗಳಲ್ಲಿ ಕಲಿಯಲು ಪ್ರಾರಂಭಿಸಿದ ಕನ್ನಡಕ್ಕೆ ನಿರ್ದಿಷ್ಟ ಆಲೋಚನಾ ಸ್ವರೂಪ ಕೊಟ್ಟದ್ದು ಇದೇ ಮೊದಲು, ಈ ಲೇಖನಗಳ ಮೂಲಕ. ಇದು ನನ್ನ ‘ವಿಜಯ ಕರ್ನಾಟಕ’ದ ಸಂಪಾದಕತ್ವದ ಬೆಲೆ ಹೆಚ್ಚಿಸಿತು. ಅದಕ್ಕಾಗಿ ನಾನು ಅವರಿಗೆ ನಮಸ್ಕರಿಸುತ್ತೇನೆ.
- ಸುಗತ ಶ್ರೀನಿವಾಸರಾಜು

Monday, March 18, 2019
Monday, March 11, 2019
ಡಾ. ಬಿ. ಎಸ್ . ಶೈಲಜಾ ಅವರ '' ಆಕಾಶದಲ್ಲಿ ಏನಿದೆ ? ಏಕಿದೆ ?'' ಕೃತಿಯ ಲೋಕಾರ್ಪಣೆ
ಮಾನ್ಯರೆ,
2019ರ ಮಾರ್ಚ್ 16ರ ಶನಿವಾರ ಸಂಜೆ 4.00 ಗಂಟೆಗೆ ಬೆಂಗಳೂರಿನ ಟಿ. ಚೌಡಯ್ಯ ರಸ್ತೆಯಲ್ಲಿರುವ ಜವಾಹರಲಾಲ್ ನೆಹರು ತಾರಾಲಯದಲ್ಲಿ ಡಾ. ಬಿ. ಎಸ್ . ಶೈಲಜಾ ಅವರ '' ಆಕಾಶದಲ್ಲಿ ಏನಿದೆ ? ಏಕಿದೆ ?'' ಕೃತಿಯ ಲೋಕಾರ್ಪಣೆ ಕಾರ್ಯಕ್ರಮವಿದೆ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.
Subscribe to:
Posts (Atom)