Thursday, November 21, 2013

Easy English through Mobile Phones and Apps - Article in Prajavani Daily - Shikshana Supplement - 18 Nov 2013



  

ಇಂಗ್ಲಿಷ್ ಕಲಿಕೆ ಬೆರಳ ತುದಿಯಲ್ಲಿ!


ಇಂಗ್ಲಿಷ್‌ ಭಾಷೆ ಮಾತನಾಡಲು ಮತ್ತು ಬರೆಯುವುದನ್ನು ಕಲಿಯಲು ಖಾಸಗಿ ತರಗತಿಗಳಿಗೇ ಸೇರಬೇಕೆಂದೇನೂ ಇಲ್ಲ. ಮನಸ್ಸು ಮಾಡಿದರೆ, ನಾವು ದಿನನಿತ್ಯ ಬಳಸುವ ಮೊಬೈಲ್‌, ಟಿ.ವಿ., ಇಂಟರ್‌ನೆಟ್‌ಗಳ ಮೂಲಕವೇ ಸ್ವಂತ ‘ಲ್ಯಾಂಗ್ವೇಜ್‌ ಲ್ಯಾಬ್‌’ ರಚಿಸಿಕೊಂಡು ಭಾಷೆಯನ್ನು ಸಿದ್ಧಿಸಿಕೊಳ್ಳಬಹುದು.
ಸಾವಿರಾರು ರೂಪಾಯಿ ಶುಲ್ಕ ಕೊಟ್ಟು ‘ಸ್ಪೋಕನ್ ಇಂಗ್ಲಿಷ್’ ತರಗತಿಗಳಿಗೆ ಸೇರಿ, ಇಂಗ್ಲಿಷ್‌ ಕಾನ್‌ವರ್ಸೇಷನ್‌, ಸ್ಪೋಕನ್‌ ಇಂಗ್ಲಿಷ್‌, ಇಂಗ್ಲಿಷ್‌ ಸ್ಪೀಕಿಂಗ್‌,  ಕಾನ್‌ವರ್ಸೇಷನಲ್‌ ಇಂಗ್ಲಿಷ್‌, ಸಾಫ್ಟ್‌ಸ್ಕಿಲ್ ಟ್ರೈನಿಂಗ್ ಎಂದೆಲ್ಲ ಉಠಾಬೈಸ್ ತೆಗೆಯುತ್ತಿರುವ ಕನ್ನಡದ ಇಂಗ್ಲಿಷ್ ಪ್ರೇಮಿಗಳಿಗೆ, ತಮ್ಮ ಬೆರಳ ತುದಿಯಲ್ಲೇ ಇಂಗ್ಲಿಷ್‌ ಕಲಿಕೆಯ ಸಾಧನಗಳಿವೆ ಎಂಬುದು ಅರಿವಿಗೇ ಬರುತ್ತಿಲ್ಲ!
ತಮ್ಮ ಕಿಸೆಯಲ್ಲೇ ಇರುವ ಮೊಬೈಲ್ ಫೋನ್, ಮನೆಯಲ್ಲಿರುವ ರೇಡಿಯೊ, ಟಿ.ವಿ., ಡಿ.ವಿ.ಡಿ., ಎಂಪಿತ್ರೀ ಪ್ಲೇಯರ್, ಕಂಪ್ಯೂಟರ್, ಇಂಟರ್‌ನೆಟ್‌­ಗಳನ್ನೇ ಬಳಸಿ ಸ್ವಂತ ‘ಲ್ಯಾಂಗ್ವೇಜ್ ಲ್ಯಾಬ್’ ಮಾಡಿಕೊಂಡು, ಇಂಗ್ಲಿಷ್ ಕಲಿಯಲು ಅವರು ಯಾಕೆ ಮನಸ್ಸು ಮಾಡುತ್ತಿಲ್ಲವೋ ಆ ದೇವರೇ ಬಲ್ಲ.
ಹಲೊ ‘ಟಾಕಿಂಗ್ ಟಾಮ್’!
‘ಗುಡ್‌ ಈವ್ನಿಂಗ್‌ ಸರ್‌, ಏನ್‌ ಸರ್ ನೀವೂ ಮಕ್ಕಳ ತರಾ ಮೊಬೈಲ್‌ನಲ್ಲಿ ‘ಟಾಕಿಂಗ್‌ ಟಾಮ್‌’ ಜೊತೆ ಆಟ ಆಡ್ತಾ ಇದ್ದೀರಾ?  ಒಂದ್ ಸಲ ನಮ್‌ ಕೈಗೆ ಅದನ್ನ ಕೊಡಿ, ಆ ಟಾಕಿಂಗ್‌ ಟಾಮ್‌ ಗತಿ ಏನಾಗುತ್ತೆ ಅಂತ ನೋಡ್ತೀರಂತೆ’ ಎಂದು ಸಮರ್ಥ ಹೇಳಿದ.
‘ಕೊಡಿ ಸರ್ ಪ್ಲೀಸ್! ನಾವೂ ಸ್ವಲ್ಪ ಹೊತ್ತು ಅದರ ಜೊತೆ ಆಡಿ ಕೊಡ್ತೀವಿ’ ಅಂತ ಅವನ ಸ್ನೇಹಿತರ ಗುಂಪು ಒಕ್ಕೊರಲಿನಿಂದ ಕೂಗಿತು. ‘ಓ.ಕೆ., ಓ.ಕೆ. ತಗೊಳ್ಳಿ ಕೊಡ್ತೇನೆ. ಅದರ ಜೊತೆ ಅದೇನೇನ್ ಮಾಡ್ತೀರೋ ಅದನ್ನ ನನಗೂ ತೋರಿಸಬೇಕು ಆಯ್ತಾ’ ಎಂದು ಹೇಳಿ ಪ್ರೊ. ಛಾಯಾಪತಿ ಅವರು ಸಮರ್ಥನ ಕೈಗೆ ತಮ್ಮ ಹೊಸ ಆಂಡ್ರಾಯ್ಡ ಫೋನ್ ಕೊಟ್ಟರು.
‘ಎಲ್ಲಿ, ಯಾರಾದ್ರೂ ಇದಕ್ಕೆ ಸ್ವಲ್ಪ ತಮಾಷೆಯಾಗಿ ಬೈಯಿರಿ ನೋಡೋಣ’ ಎಂದು  ಹೇಳಿ ಪ್ರಜ್ವಲ್ ಮೊಬೈಲ್‌ನಲ್ಲಿದ್ದ ‘ಟಾಕಿಂಗ್‌ ಟಾಮ್‌’ನ್ನು ಆ್ಯಕ್ಟಿವೇಟ್ ಮಾಡಿದ. ‘ಯೂ ಈಡಿಯಟ್‌’ ಅಂತ ಶೋಭಿತ್ ಬೈಯ್ದ. ‘ಟಾಕಿಂಗ್‌ ಟಾಮ್‌’ ಸಹ ಕೂಡಲೇ ‘ಯೂ ಈಡಿಯಟ್‌’ ಎಂದು ತಿರುಗಿಸಿ ಬೈಯ್ದುಬಿಟ್ಟಿತು. ಸ್ನೇಹಿತರೆಲ್ಲ ಘೊಳ್ ಎಂದು  ನಗತೊಡಗಿದರು. ‘ಹಲೊ, ಹೌ ಆರ್‌ ಯೂ’ ಎಂದು ಧ್ರುತಿ ಭಟ್ ಕೇಳಿದಳು. ‘ಟಾಕಿಂಗ್‌ ಟಾಮ್‌’ ಅವಳಿಗೂ ತಿರುಗಿ ಹಾಗೇ ಕೇಳಿತು. ‘ಹಾಯ್‌, ಹ್ಯಾಡ್‌ ಯುವರ್‌ ಮೀಲ್ಸ’ ಸಹನಾ ಪ್ರಶ್ನಿಸಿದಳು. ‘ಟಾಕಿಂಗ್‌ ಟಾಮ್‌’ ಸಹ ಅವಳಿಗೂ ಮರಳಿ ಅದೇ ಪ್ರಶ್ನೆ ಕೇಳಿತು.
ಹೀಗೆ ‘ಟಾಕಿಂಗ್ ಟಾಮ್’ ಜೊತೆಗಿನ ಮಕ್ಕಳ ಆಟ ಮುಂದುವರಿಯುತ್ತಲೇ ಇತ್ತು ಛಾಯಾಪತಿಯವರ ಅಧ್ಯಯನ ಕೋಣೆ- ಕಂ- ಮೊಬೈಲ್ ಲ್ಯಾಂಗ್ವೇಜ್ ಲ್ಯಾಬ್‌­ನಲ್ಲಿ. ಮಕ್ಕಳಂತೆಯೇ ಹೀಗೆ ಕಲಿಯುವುದು ಎಷ್ಟು ಸುಲಭ, ಸರಳ, ಪರಿಣಾಮಕಾರಿ ಅಲ್ಲವೇ?
ಆ್ಯಪ್ಸ್ ಬಳಸಿ ಸುಲಭವಾಗಿ ಕಲಿಸಿ
ಇತ್ತೀಚೆಗೆ ಗೂಗಲ್ ಪ್ಲೇ ಸ್ಟೋರ್, ಸ್ಯಾಮ್ಸಂಗ್, ನೋಕಿಯಾ, ಮೈಕ್ರ್ೊಮ್ಯಾಕ್ಸ್, ಆ್ಯಪಲ್ ಇತ್ಯಾದಿ ಜಾಲತಾಣಗಳಲ್ಲಿ ಲಕ್ಷಾಂತರ ಆ್ಯಪ್ಸ್‌ಗಳು (ಅಪ್ಲಿಕೇಶನ್‌ಗಳು) ಲಭ್ಯವಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉಪಯೋಗಕ್ಕಾಗಿ ಉಚಿತ ಡಿಕ್ಷ್‌ನರಿಗಳು, ಸ್ಪೋಕನ್ ಇಂಗ್ಲಿಷ್ ಮಾದರಿಗಳು, ಭಾರತೀಯ ಭಾಷೆಗಳ ಪದಕೋಶಗಳು, ವಿಶ್ವಕೋಶ, ಯೂ- ಟ್ಯೂಬ್, ವರ್ಚುಯಲ್ ಲ್ಯಾಬ್, ಗ್ಲೋಬ್,  ಟ್ರಾನ್ಸ್‌ಲೇಶನ್ ಸೌಲಭ್ಯ, ಆಡಿಯೊ-– ವಿಡಿಯೊ ಚಿತ್ರಣ, ವೆಬ್ ಬ್ರೌಸಿಂಗ್‌ನಂತಹ ಸೌಲಭ್ಯಗಳು ಕಲಿಕೆಯನ್ನು ಆಸಕ್ತಿದಾಯಕ ಆಗಿಸಿವೆ.
ಇವುಗಳನ್ನು ಮೊಬೈಲ್ ಇಲ್ಲವೇ ಐಪ್ಯಾಡ್/ ನೋಟ್‌­ಪ್ಯಾಡ್‌ಗಳಲ್ಲಿ ಡೌನ್‌ಲೋಡ್ ಮಾಡಿ­ಕೊಂಡು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಮುದ್ರಿತ ಪುಸ್ತಕಗಳು ಮತ್ತು ಪದಕೋಶಗಳಿಗಿಂತ ಇ-– ಬುಕ್ ಹಾಗೂ ಇ-– ಡಿಕ್ಷ್‌ನರಿಗಳು ಜನಪ್ರಿಯವಾಗುತ್ತಿದ್ದು, ಥಟ್ ಎಂದು ಬಳಸಲು ಅನುಕೂಲಕರವಾಗಿವೆ. ಹೆಚ್ಚಿನ ವಿವರಗಳಿಗೆ ಗಮನಿಸಿ:
https://play.google.com/store/apps/category/ EDUCATION
www.nokia.com/in-en/apps/
http://apps.samsung.com/mercury/topApps
ಬರೆದು ನೋಡಿ
‘ಸರ್, ಸರ್, ಲೆಟರ್ ರೈಟಿಂಗ್ ಹೇಳ್ಕೊಡಿ ಸರ್ ಪ್ಲೀಸ್‌.  ಈ ತಿಂಗಳ ಟೆಸ್ಟ್‌ನಲ್ಲಿ ಲೆಟರ್ ರೈಟಿಂಗ್ ಕೊಡ್ತಾರಂತೆ’ ಎಂದು ಕೇಳಿದ ರಕ್ಷಿತ್.
‘ಅಲ್ಲಯ್ಯ, ನಿಮ್ ಟೀಚರ್ ಯಾವ ಜಮಾನಾದಲ್ಲಿ­ದ್ದಾರೆ ಇನ್ನೂ. ಲೆಟರ್ ರೈಟಿಂಗ್ ಬರೀ ಪರೀಕ್ಷೆಗೆ ಮಾತ್ರ ಕೇಳೋ ಪ್ರಶ್ನೆ ಥರಾ ಮಾಡಿಬಿಟ್ಟಿದ್ದಾರೆ ಇವ್ರೆಲ್ಲ. ಇದು ಇ–- ಮೇಲ್, ಎಸ್.ಎಂ.ಎಸ್., ಟ್ವಿಟರ್ ಬಳಕೆ­ಯಾಗ್ತಿರೋ ಕಾಲ.  ಇದ­ರಲ್ಲಿ ಅವರದ್ದೇನೂ ತಪ್ಪಿಲ್ಲ ಬಿಡು, ಸಿಲೆಬಸ್‌ನಲ್ಲಿ ಇದೆ ಅಂತ ಹೇಳಿಕೊಡ್ತಾರೆ’ ಎಂದು ಪ್ರೀತಿಯಿಂದಲೇ ಟೀಕಿಸಿದರು ಛಾಯಾಪತಿ.
ಪತ್ರ ಲೇಖನ, ಪ್ರಬಂಧ, ನಿಬಂಧಗಳೆಲ್ಲ ದೀರ್ಘ ಅಭ್ಯಾಸಗಳೆಂದು ಪರಿಗಣಿತವಾಗಿ, ಎಸ್.ಎಂ.ಎಸ್., ಚಾಟಿಂಗ್, ಇ-– ಮೇಲ್ ಭರಾಟೆ ಆರಂಭ ಆಗಿರುವು­ದರಿಂದ ಮೊಬೈಲ್, ಇಂಟರ್‌ನೆಟ್‌, ಫೇಸ್‌ಬುಕ್ ಮತ್ತು ಬ್ಲಾಗ್‌ಗಳ ಮೂಲಕ ತೋಚಿದ್ದನ್ನು ಗೀಚಿ (ಟೈಪ್ ಮಾಡಿ) ಕಲಿಯುವ ಅವಕಾಶ ಇದೆ.
ಬಹುತೇಕ ಮಕ್ಕಳು ಈಗ ಹೇಗೋ ಮಾಡಿ ಇ-– ಮೇಲ್ ಐ.ಡಿ. ಬಳಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ತಮ್ಮ ಅಕೌಂಟ್ ತೆರೆದು ಸ್ನೇಹಿತರೊಂದಿಗೆ ಸಂಭಾ­ಷಣೆ, ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಬ್ಲಾಗ್ ಓಪನ್ ಮಾಡಿ ತಮಗೆ ಇಷ್ಟವಾದ ಮಾಹಿತಿ, ಫೋಟೊಗಳನ್ನು ಪ್ರಕಟಿಸುತ್ತಿದ್ದಾರೆ. ಜಗತ್ತಿನ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನೂ ನಿಲ್ಲಿಸುತ್ತಿದ್ದಾರೆ. ಇದಕ್ಕಿಂತ ಸುಲಭವಾದ, ಪ್ರಾಕ್ಟಿಕಲ್ ಆಗಿ ಕಲಿಯುವ ವಿಧಾನ ಬೇರೆ ಯಾವುದಿದೆ ಹೇಳಿ?
ಕಾಲಕ್ಕೆ ತಕ್ಕಂತೆ ಹಿರಿಯ­ರಾದ ನಾವೂ ಬದಲಾಗಲೇ ಬೇಕು. ಕಂಪ್ಯೂಟರ್ ಗೊತ್ತಿಲ್ಲ, ಬ್ರೌಸಿಂಗ್ ಬರೋಲ್ಲ, ಸೌಲಭ್ಯ ಇಲ್ಲ ಎಂದು ಕೊರಗುತ್ತಾ ಕೂರದೆ ಹೊಸ ಸವಾಲನ್ನು ಎದುರಿಸಲು ಸಿದ್ಧರಾಗಲೇಬೇಕು.
ಕೌಶಲ ಕಲಿಸುವ ಸಾಧನ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು. ಕನ್ನಡ, ಸಂಸ್ಕೃತ, ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಮೊಬೈಲ್ ಸಂಭಾಷಣೆಯಲ್ಲಿ, ಟಿ.ವಿ./ ರೇಡಿಯೊ/ ಇಂಟರ್‌ನೆಟ್ ಕಾರ್ಯಕ್ರಮಗಳಲ್ಲಿ ಆಲಿಸುವ ಮತ್ತು ಮಾತನಾಡುವ ಕೌಶಲವನ್ನು ಕಲಿಯುವ ಅವಕಾಶ ಇದೆ. ಓದಲಿಕ್ಕೆ ಕಂಪ್ಯೂಟರ್ ಮತ್ತು ಪತ್ರಿಕೆಗಳಿವೆ. ಬರೆಯ­ಲಿಕ್ಕೆ ಎಸ್.ಎಂ.ಎಸ್., ಇ- ಮೇಲ್, ಚಾಟಿಂಗ್‌­ಗಳಿವೆ! ಇತ್ತೀಚಿನ ಆಂಡ್ರಾಯ್ಡ ಮೊಬೈಲ್‌ಗಳಲ್ಲಿ ನೂರಾರು ಆ್ಯಪ್‌ಗಳಿದ್ದು ಡಿಕ್ಷನರಿ, ಚಾಟಿಂಗ್‌, ಗ್ರಾಮರ್‌, ಇ– ಬುಕ್, ಪ್ಲೇ– ಬುಕ್‌ಗಳ ಮೂಲಕ ಇಂಗ್ಲಿಷ್‌ ಕಲಿಸುವ ಮಾಹಿತಿ ಭಂಡಾರವೇ ಅಡಗಿದೆ.
ಓದಿ, ಓದಿಸಿ, ಕಲಿಯಿರಿ
ಓದುವುದನ್ನು ಅಥವಾ ಮಾತನಾಡುವು­ದನ್ನು ಧ್ವನಿ ಮುದ್ರಿಸಿಕೊಳ್ಳಲು ಮೊಬೈಲ್ ಮತ್ತು ಕಂಪ್ಯೂಟರ್‌­ಗಳಲ್ಲಿ ಸೌಲಭ್ಯಗಳಿವೆ.  ಒಂದೇ ಒಂದು ನಿಮಿಷ ನೀವು ಓದುವುದನ್ನು ಧ್ವನಿ ಮುದ್ರಿಸಿಕೊಳ್ಳಿ. ಓದುವ ವಿಷಯ ನಿಮ್ಮ ತರಗತಿಗೆ ಸಂಬಂಧಿಸಿದ ಪಾಠ, ಇಲ್ಲವೇ ಯಾವುದೇ ದಿನಪತ್ರಿಕೆಯ ಆಯ್ದ ಭಾಗವಾ­ದರೂ ಆಗಿರಬಹುದು. ಇಂಗ್ಲಿಷ್ ಸಂಭಾಷಣಾ ಪ್ರಾಯೋ­­ಗಿಕ ಪಾಠಗಳೂ ಈ ಸಂದರ್ಭದಲ್ಲಿ ಉಪಯುಕ್ತವೇ.
ನಿಧಾನ ಗತಿಯ ಓದುಗರಾದರೆ ಸುಮಾರು 60-– 100 ಪದಗಳನ್ನು ಮಾತ್ರ ಓದಿರುತ್ತೀರಿ. ಮಧ್ಯಮ ಗತಿಯವರಾದರೆ 100-– 140 ಪದಗಳು. ವೇಗವಾಗಿ ಓದುವವರಾದರೆ 140-– 200 ಪದಗಳು. ಇದು ನಿಮ್ಮ ಓದಿನ ಗತಿ! ಇದನ್ನು ಟಿ.ವಿ. ಅಥವಾ ರೇಡಿಯೊ ನ್ಯೂಸ್ ರೀಡರ್‌ಗಳ ಓದಿನ ವೇಗದೊಂದಿಗೆ ಹೋಲಿಸಿ ನೋಡಿಕೊಂಡರೆ ತಿಳಿಯುತ್ತದೆ. ವಿದೇಶಿ ವಾರ್ತಾ ವಾಚಕರು 240-– 300 ಪದಗಳ ವೇಗದಲ್ಲಿ ಓದುವುದರಿಂದ ನಮಗೆ ಅವರ ಇಂಗ್ಲಿಷ್‌ನ್ನು ಅಷ್ಟು ಬೇಗ ಅನುಸರಿಸಲು ಸ್ವಲ್ಪ ಕಷ್ಟವಾಗುತ್ತದೆ.
ಇಂಟರ್‌ನೆಟ್‌ನಲ್ಲಿ ಸಾವಿರಾರು ಮಾದರಿ ಪಾಠಗಳು ಲಭ್ಯವಿವೆ.  ನೀವು ಧ್ವನಿ ಮುದ್ರಿಸಿಕೊಂಡಿರುವುದನ್ನು ಮತ್ತೆ ಮತ್ತೆ ಕೇಳಿದಾಗ ಎಲ್ಲಿ ತಪ್ಪಿದ್ದೀರಿ, ಯಾವ ಪದವನ್ನು ಸರಿಯಾಗಿ ಉಚ್ಚರಿಸಬೇಕಿತ್ತು, ಎಲ್ಲೆಲ್ಲಿ ಒತ್ತು ನೀಡಬೇಕಿತ್ತು, ಧ್ವನಿಯ ಏರಿಳಿತ ಹೇಗಿರಬೇಕಿತ್ತು ಎಂಬುದು ತಿಳಿಯುತ್ತದೆ. ಮಕ್ಕಳಿಗೆ ಅವರ ತರಗತಿಯ ಪಾಠಗಳನ್ನು ಓದಿ, ಧ್ವನಿ ಮುದ್ರಿಸಿಕೊಂಡು, ಮತ್ತೆ ಮತ್ತೆ ಕೇಳಲು ಹೇಳುವುದರಿಂದ ಓದುವ, ಮಾತನಾಡುವ, ಆಲಿಸುವ ಕೌಶಲ ಕರಗತವಾಗುತ್ತದೆ.
(ಇಂಗ್ಲಿಷ್‌ ಕಲಿಕೆಗೆ ಪೂರಕವಾಗಿ One Minute English, Applied English Course -– A Handbook of Spoken and Written English, Play and Learn English through Language Games, Blog Blog Blog ಪುಸ್ತಕಗಳನ್ನು ಗಮನಿಸಬಹುದು. ಫೋನ್: 080-22203580 / 30578020).
Easy English through Mobile Phones and Apps - Article in Prajavani Daily - Shikshana Supplement - 18 Nov 2013

Monday, October 14, 2013

Nobel Prize in Economics 2013

The Sveriges Riksbank Prize in Economic Sciences in Memory of Alfred Nobel 2013
Eugene F. Fama, Lars Peter Hansen, Robert J. Shiller

The Sveriges Riksbank Prize in Economic Sciences in Memory of Alfred Nobel 2013

Eugene F. Fama

Eugene F. Fama

Lars Peter Hansen

Lars Peter Hansen

Robert J. Shiller

Robert J. Shiller

The Sveriges Riksbank Prize in Economic Sciences in Memory of Alfred Nobel 2013 was awarded jointly to Eugene F. Fama, Lars Peter Hansen and Robert J. Shiller "for their empirical analysis of asset prices".

http://www.nobelprize.org/nobel_prizes/economic-sciences/laureates/2013/
The Sveriges Riksbank Prize in Economic Sciences in Memory of Alfred Nobel 2013
Eugene F. Fama, Lars Peter Hansen, Robert J. Shiller
logo
EnglishEnglish (pdf)
Swedish 
Swedish (pdf)

Press Release

14 October 2013
The Royal Swedish Academy of Sciences has decided to award The Sveriges Riksbank Prize in Economic Sciences in Memory of Alfred Nobel for 2013 to
Eugene F. Fama
University of Chicago, IL, USA
Lars Peter Hansen
University of Chicago, IL, USA
and
Robert J. Shiller
Yale University, New Haven, CT, USA
"for their empirical analysis of asset prices”.

Trendspotting in asset markets

There is no way to predict the price of stocks and bonds over the next few days or weeks. But it is quite possible to foresee the broad course of these prices over longer periods, such as the next three to five years. These findings, which might seem both surprising and contradictory, were made and analyzed by this year’s Laureates, Eugene Fama, Lars Peter Hansen and Robert Shiller.
Beginning in the 1960s, Eugene Fama and several collaborators demonstrated that stock prices are extremely difficult to predict in the short run, and that new information is very quickly incorporated into prices. These findings not only had a profound impact on subsequent research but also changed market practice. The emergence of so-called index funds in stock markets all over the world is a prominent example.
If prices are nearly impossible to predict over days or weeks, then shouldn’t they be even harder to predict over several years? The answer is no, as Robert Shiller discovered in the early 1980s. He found that stock prices fluctuate much more than corporate dividends, and that the ratio of prices to dividends tends to fall when it is high, and to increase when it is low. This pattern holds not only for stocks, but also for bonds and other assets.
One approach interprets these findings in terms of the response by rational investors to uncertainty in prices. High future returns are then viewed as compensation for holding risky assets during unusually risky times. Lars Peter Hansen developed a statistical method that is particularly well suited to testing rational theories of asset pricing. Using this method, Hansen and other researchers have found that modifications of these theories go a long way toward explaining asset prices.
Another approach focuses on departures from rational investor behavior. So-called behavioral finance takes into account institutional restrictions, such as borrowing limits, which prevent smart investors from trading against any mispricing in the market.
The Laureates have laid the foundation for the current understanding of asset prices. It relies in part on fluctuations in risk and risk attitudes, and in part on behavioral biases and market frictions.
Read more about this year's prize
Information for the Public
Pdf 600 kb
Scientific Background
Pdf 900 kb
To read the text you need Acrobat Reader.



Eugene F. Fama, U.S. citizen. Born 1939 in Boston, MA, USA. Ph.D. 1964 from University of Chicago, IL, USA. Robert R. McCormick Distinguished Service Professor of Finance at University of Chicago, IL, USA.
www.chicagobooth.edu/faculty/directory/f/eugene-f-fama
Lars Peter Hansen, U.S. citizen. Born 1952 in USA. Ph.D. 1978 from University of Minnesota, Minneapolis, MN, USA. David Rockefeller Distinguished Service Professor in Economics & Statistics at University of Chicago, IL, USA.
http://larspeterhansen.org
Robert J. Shiller, U.S. citizen. Born 1946 in Detroit, MI, USA. Ph.D. 1972 from Massachusetts Institute of Technology (MIT), Boston, MA, USA. Sterling Professor of Economics at Yale University, New Haven, CT, USA.
www.econ.yale.edu/~shiller
The Prize amount: SEK 8 million, to be shared equally between the Laureates.

Contacts: Perina Stjernlöf, Press Officer/Editor, Phone +46 8 673 95 44, +46 70 673 96 50, perina.stjernlof@kva.se
Fredrik All, Editor, Phone +46 8 673 95 63, +46 70 673 95 63, fredrik.all@kva.se



The Royal Swedish Academy of Sciences, founded in 1739, is an independent organization whose overall objective is to promote the sciences and strengthen their influence in society. The Academy takes special responsibility for the natural sciences and mathematics, but endeavours to promote the exchange of ideas between various disciplines.

Eugene F. Fama

Eugene F. Fama
Eugene F. Fama
Born: 14 February 1939, Boston, MA, USA
Affiliation at the time of the award: University of Chicago, Chicago, IL, USA
Prize motivation: "for their empirical analysis of asset prices"




















Lars Peter Hansen

Lars Peter Hansen
Lars Peter Hansen
Born: 26 October 1952, Champaign, IL, USA
Affiliation at the time of the award: University of Chicago, Chicago, IL, USA
Prize motivation: "for their empirical analysis of asset prices"




















Robert J. Shiller

Robert J. Shiller
Robert J. Shiller
Born: 29 March 1946, Detroit, MI, USA
Affiliation at the time of the award: Yale University, New Haven, CT, USA
Prize motivation: "for their empirical analysis of asset prices"




















Nobel Prize for Economics 2013

Friday, October 11, 2013

Nobel Peace Prize 2013

The Nobel Peace Prize 2013
Organization for the Prohibition of Chemical Weapons

The Nobel Peace Prize 2013

Organization for the Prohibition of Chemical Weapons (OPCW)

Organization for the Prohibition of Chemical Weapons (OPCW)

The Nobel Peace Prize 2013 was awarded to Organization for the Prohibition of Chemical Weapons "for its extensive efforts to eliminate chemical weapons".






Logo
English
Norwegian

The Nobel Peace Prize for 2013

The Norwegian Nobel Committee has decided that the Nobel Peace Prize for 2013 is to be awarded to the Organization for the Prohibition of Chemical Weapons (OPCW) for its extensive efforts to eliminate chemical weapons.
During World War One, chemical weapons were used to a considerable degree. The Geneva Convention of 1925 prohibited the use, but not the production or storage, of   chemical weapons. During World War Two, chemical means were employed in Hitler’s mass exterminations. Chemical weapons have subsequently been put to use on numerous occasions by both states and terrorists. In 1992-93 a convention was drawn up prohibiting also the production and storage of such weapons. It came into force in 1997. Since then the OPCW has, through inspections, destruction and by other means, sought the implementation of the convention. 189 states have acceded to the convention to date.
The conventions and the work of the OPCW have defined the use of chemical weapons as a taboo under international law. Recent events in Syria, where chemical weapons have again been put to use, have underlined the need to enhance the efforts to do away with such weapons. Some states are still not members of the OPCW. Certain states have not observed the deadline, which was April 2012, for destroying their chemical weapons. This applies especially to the USA and Russia.
Disarmament figures prominently in Alfred Nobel’s will. The Norwegian Nobel Committee has through numerous prizes underlined the need to do away with nuclear weapons. By means of the present award to the OPCW, the Committee is seeking to contribute to the elimination of chemical weapons.

Prohibition of Chemical Weapons - Facts

Organization for the Prohibition of Chemical Weapons (OPCW)
Organization for the Prohibition of Chemical Weapons (OPCW)
Founded: 1997
Prize motivation: "for its extensive efforts to eliminate chemical weapons"
Field: arms control and disarmament

Oslo, 11 October 2013

 

 

 

 

 

 

Announcement of the 2013 Nobel Peace Prize

 

 

 

Live Webcast



LIVE Webcast on Nobelprize.org!

Watch the Nobel Prize announcements live! Nobelprize.org provides:
- press conferences from the Nobel Prize awarding institutions
- exclusive interviews with members of the Nobel Committee
Note! If you are watching from countries where YouTube doesn't webcast live, you need to choose this stream.
You can also watch the live webcast from here, or at Nobelprize.org's YouTube channel (but not if your are watching from China, e.g.).
The 2013 Nobel Peace Prize will be announced on Friday 11 October, 11:00 a.m. CET.

th