Saturday, February 22, 2025

ಬನ್ನಿ ಕ್ಯಾನ್ಸರ್ ಗೆಲ್ಲೋಣ

 

ಬನ್ನಿ ಕ್ಯಾನ್ಸರ್ ಗೆಲ್ಲೋಣ ಎಂಬ ಈ ಕನ್ನಡ ಪುಸ್ತಕವು ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ಮತ್ತು ಅದರ ಚಿಕಿತ್ಸಾ ಆಯ್ಕೆಗಳನ್ನು ಸುಲಭ ಹಾಗೂ ಸ್ಪಷ್ಟ ರೀತಿಯಲ್ಲಿ ವಿವರಿಸಲು ರಚಿಸಲಾಗಿದೆ. ಕ್ಯಾನ್ಸರ್ ರೋಗದ ಪ್ರಮುಖ ಕಾರಣಗಳು, ಮೊದಲ ಹಂತದ ಲಕ್ಷಣಗಳು ಹಾಗೂ ಇತ್ತೀಚಿನ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಸಮಗ್ರವಾಗಿ ಒಳಗೊಂಡಿರುವ ಈ ಕೃತಿ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಅನಾವರಣವಾಗದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತದೆ. ಈ ಪುಸ್ತಕವು ಯಾವುದೇ ವಿಭ್ರಾಂತಿಗಳನ್ನು ದೂರ ಮಾಡಿ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಎದುರಿಸಲು ಅಗತ್ಯವಿರುವ ಧೈರ್ಯ, ಉತ್ಸಾಹ ಮತ್ತು ಸಮರ್ಥತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಬನ್ನಿ, ಜ್ಞಾನದ ಮೂಲಕ ಬಲಶಾಲಿಗಳಾಗಿ, ಆರೋಗ್ಯಕರ ಭವಿಷ್ಯಕ್ಕೆ ಹೆಜ್ಜೆ ಇಡೋಣ.


ದಿ. 13.09.2025ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ಬನ್ನಿ ಕ್ಯಾನ್ಸರ್‍ ಗೆಲ್ಲೋಣ ಕುರಿತು  

 

ಅರವಿಂದ ಗುಪ್ತ ಅವರ ಇತ್ತೀಚಿನ ಕೃತಿಗಳು

 


Saturday, January 18, 2025

 

ಭೌತವಿಜ್ಞಾನ ನೂರೆಂಟು ಪ್ರಶ್ನೆಗಳು


ಭೌತವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಈ ಪುಸ್ತಕ ಸಹಕಾರಿ ಯಾಗಿದೆ. ಚಿತ್ರಸಹಿತವಾದ ವಿವರಣೆಯೊಂದಿಗೆ ಭೌತ ನಿಯಮಗಳಿಗನುಸಾರವಾಗಿ ನಡೆಯುವ ವಿದ್ಯಮಾನಗಳು ನಮಗೆ ಹೆಚ್ಚಿನ ಮಾಹಿತಿ ನೀಡುತ್ತವೆ. ಭೌತವಿಜ್ಞಾನದಲ್ಲಿನ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿವೆ ಹಾಗೂ ಸಮಂಜಸ


Saturday, February 10, 2024

 


ಪ್ರಜಾವಾಣಿ ಪ್ರಕಾಶನದ ಹೊಸ ಪುಸ್ತಕ "ಹೊನ್ನ ಕಣಜ ಭಾಗ 2





Sunday, December 18, 2022

 

ಕಿಂಡರ್ ಕಥಾ ಮಾಲಿಕೆ (Set of 10 Books) 


Tuesday, June 25, 2019

ಕನ್ನಡ ಸಾಹಿತ್ಯ ಪರಿಷತ್ತಿನ 2018ರ ವಿವಿಧ ದತ್ತಿ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತಿನ 2018ರ ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ನವಕರ್ನಾಟಕದ 4 ಕೃತಿಗಳು.


ದಿ|| ಡಾ. ಎಚ್. ನರಸಿಂಹಯ್ಯ ದತ್ತಿ
ಬಹುಮಾನಿತ ಕೃತಿ : ಭಗವದ್ಗೀತೆ ಒಂದು ಅವಲೋಕನ
ಲೇಖಕರು : ಡಾ. ಜಿ. ರಾಮಕೃಷ್ಣ


ದಿ|| ಡಾ. ಎ.ಎಸ್ ಧರಣೇಂದ್ರಯ್ಯ - ಮನೋವಿಜ್ಞಾನ ದತ್ತಿ
ಬಹುಮಾನಿತ ಕೃತಿ : ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ ?
ಲೇಖಕರು : ಡಾ. ಮಹಾಬಲೇಶ್ವರ ರಾವ್


ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ - ವೈಚಾರಿಕ ಲೇಖನಗಳ ಕೃತಿ
ಬಹುಮಾನಿತ ಕೃತಿ : ಸಣ್ಣ ಸಂಗತಿ (ವೈಚಾರಿಕತೆ)
ಲೇಖಕರು : ಡಾ. ರಹಮತ್ ತರೀಕೆರೆ


ಶ್ರೀಮತಿ ಭಾರತಿ ಮೋಹನಕೋಟಿ ದತ್ತಿ
ಬಹುಮಾನಿತ ಕೃತಿ : ಕೊನೆಯ ಅಲೆ
ಅನುವಾದಕರು : ಶ್ರೀಮತಿ ಸುಮಂಗಲಾ ಎಸ್. ಮುಮ್ಮಿಗಟ್ಟಿ


http://www.navakarnatakaonline.com/bookslist?value=nkp_new

Friday, June 14, 2019

"ವಿಶ್ವದ ವೈವಿಧ್ಯ " ಕೃತಿಗೆ ಕರ್ನಾಟಕ ಸಂಘ, ಶಿವಮೊಗ್ಗ - ಇವರ ೨೦೧೮ರ "ಹಸೂಡಿ ವೆಂಕಟಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ "

ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಡಾ ಪಾಲಹಳ್ಳಿ ವಿಶ್ವನಾಥ್ ಅವರ "ವಿಶ್ವದ ವೈವಿಧ್ಯ " ಕೃತಿಗೆ ಕರ್ನಾಟಕ ಸಂಘ, ಶಿವಮೊಗ್ಗ - ಇವರ ೨೦೧೮ರ "ಹಸೂಡಿ ವೆಂಕಟಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ ". ಲೇಖಕರಿಗೆ ಅಭಿನಂದನೆಗಳು.



Friday, April 5, 2019

ಸ್ವಾತಂತ್ರ್ಯೋತ್ತರ ಭಾರತ - ಸಮಕಾಲೀನ ಭಾರತ ಕುರಿತು ಒಂದು ಪರಿಪೂರ್ಣ ಮತ್ತು ವಸ್ತುನಿಷ್ಠ ಪರಿಚಯ

ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವವೆನಿಸಿದ ಭಾರತದ ಪ್ರಗತಿಯ ಕತೆ ಸಮೃದ್ಧ ಮತ್ತು ಪ್ರೇರಣಾತ್ಮಕವಾಗಿದೆ. ಬಿಪಿನ್‍ಚಂದ್ರ ಮತ್ತು ಸಹಲೇಖಕರ ‘ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ’ ಗ್ರಂಥದ ಮುಂದುವರಿದ ಭಾಗವಾಗಿರುವ ಈ ಸಂಪುಟ ಭಾರತ ಎದುರಿಸಿದ ಸವಾಲುಗಳನ್ನು ಹಾಗೂ ಅದು ಸಾಧಿಸಿದ ಯಶಸ್ಸುಗಳನ್ನು ವಸಾಹತುಶಾಹಿ ಪರಂಪರೆ ಮತ್ತು ಒಂದು ಶತಮಾನದವರೆಗೆ ನಡೆದ ಸ್ವಾತಂತ್ರ್ಯ ಹೋರಾಟದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
ಈ ಗ್ರಂಥ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ಹಾಗೂ ನೆಹರುವಾದಿ ರಾಜಕೀಯ, ಆರ್ಥಿಕ ಕಾರ್ಯಕ್ರಮ ಮತ್ತು ವಿದೇಶಾಂಗ ನೀತಿ ಹೇಗೆ ವಿಕಸಿಸಲ್ಪಟ್ಟಿತು ಹಾಗೂ ಅಭಿವೃದ್ಧಿಪಡಿಸಲ್ಪಟ್ಟಿತು ಎಂಬುದನ್ನು ವಿವರಿಸುತ್ತದೆ. ಇದು ರಾಷ್ಟ್ರದ ಸದೃಢೀಕರಣ ಹಂತಗಳು, ಕೇಂದ್ರ ಮತ್ತು ರಾಜ್ಯಗಳಲ್ಲಿ ಪಕ್ಷ ರಾಜಕೀಯ, ಪಂಜಾಬ್ ಸಮಸ್ಯೆ, ಜಾತಿ ವಿರೋಧಿ ರಾಜಕಾರಣ ಮತ್ತು ಅಸ್ಪøಶ್ಯತೆಯನ್ನು ಪರಾಮರ್ಶಿಸುತ್ತದೆ.
ಭಾರತದಲ್ಲಿ ಕೋಮುವಾದದ ಬೆಳವಣಿಗೆ ಹಾಗೂ ಅದನ್ನು ಪ್ರಚ್ಛನ್ನಗೊಳಿಸುವಲ್ಲಿ ರಾಜ್ಯಾಧಿಕಾರದ ಬಳಕೆಯನ್ನು ಈ ಗ್ರಂಥ ವಿಶ್ಲೇಷಿಸುತ್ತದೆ. ಇದು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟದ ಪತನದ ಪರಿಣಾಮವಾಗಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಉದಯ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸುತ್ತದೆ.
ಈ ಗ್ರಂಥ 1991ರಿಂದೀಚೆಯ ಭಾರತೀಯ ಆರ್ಥಿಕ ಸುಧಾರಣೆಗಳು ಹಾಗೂ ವಿಸ್ತøತ ಭೂಸುಧಾರಣೆಗಳು, ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಸಾಧನೆಗಳು ಮತ್ತು ವೈಫಲ್ಯಗಳ ಮೌಲ್ಯಮಾಪನ ಮಾಡುತ್ತದೆ. ಅದರೊಂದಿಗೆ ಜವಾಹರ್‍ಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್, ರಾಜೀವ್ ಗಾಂಧಿ, ವಿಶ್ವನಾಥ ಪ್ರತಾಪ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನ್‍ಮೋಹನ್ ಸಿಂಗ್ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತ ಪ್ರಗತಿಪಥದಲ್ಲಿರುವ ದೇಶವೊಂದರ ಸಂಚಲನೆ ಕುರಿತು ಗಣನೀಯ ಮೇಲ್ನೋಟವೊಂದನ್ನು ಒದಗಿಸುತ್ತದೆ.

http://www.navakarnatakaonline.com/swaatantryottara-bhaarata