Sunday, January 9, 2011

Kannada Sahitya Charitre 2 Volumes to be released on 14 Jan 2011


Book Review in Prajavani - Sapthahika Puravani 9th Jan 2011
ಪ್ರಜಾವಾಣಿ » ಪುಸ್ತಕ ವಿಮರ್ಶೆ



ಸಾಹಿತ್ಯ ಚರಿತ್ರೆಯ ಹೊಸ ಅಂಕ



ವೀರಣ್ಣನವರ ‘ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ- ಪ್ರಾಚೀನ ಸಾಹಿತ್ಯ’ ಮರುಮುದ್ರಣ ಮುದ್ರಣ ಕಾಣುತ್ತಿರುವ ಕೃತಿ. ಈ ಪುಸ್ತಕ ಸಾಹಿತ್ಯಾಸಕ್ತರ ನಡುವೆ ಚರ್ಚೆ- ಜಿಜ್ಞಾಸೆಗಳಿಗೆ ಎಡೆ ಮಾಡಿಕೊಟ್ಟಿದ್ದ ಕೃತಿ. ಈ ಪುಸ್ತಕದ ಮುಂದುವರಿದ ಭಾಗವಾಗಿ ರಾಜಸತ್ತೆಯ ವಿಘಟನೆಯ ಕಾಲದ ಕೃತಿ ಹೊರಬಂದಿದೆ.



ಬೆಂಗಳೂರಿನ ‘ನವಕರ್ನಾಟಕ ಪ್ರಕಾಶನ’ ಸಂಸ್ಥೆ ತನ್ನ ಚಿನ್ನದ ಹಬ್ಬದ ಸಂಭ್ರಮದ ಪ್ರಯುಕ್ತ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ಹಿರಿಯ ಲೇಖಕ ಡಾ. ಸಿ.ವೀರಣ್ಣ ಅವರು ರಚಿಸಿರುವ ‘ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ- ಪ್ರಾಚೀನ ಸಾಹಿತ್ಯ’ ಹಾಗೂ ‘ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ- ಮಧ್ಯಕಾಲೀನ ಸಾಹಿತ್ಯ’ ಕೃತಿಗಳೂ ಸೇರಿವೆ.

ಪ್ರಾಚೀನ ಸಾಹಿತ್ಯ ರಾಜಸತ್ತೆಯ ವೈಭವದ ಕಾಲಕ್ಕೆ ಸಂಬಂಧಿಸಿದ್ದರೆ, ಮಧ್ಯಕಾಲೀನ ಸಾಹಿತ್ಯ ರಾಜಸತ್ತೆಯ ವಿಘಟನೆಯ ಕಾಲಕ್ಕೆ ಸಂಬಂಧಿಸಿದೆ. ಇತಿಹಾಸವನ್ನು ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಅಧ್ಯಯನ ಮಾಡುವ ಮಹತ್ವದ ಕಾರ್ಯದಲ್ಲಿ ಲಿಖಿತ ದಾಖಲೆಯಾದ ಸಾಹಿತ್ಯದ ಒಳನೋಟಗಳು ಅಪಾರ ನೆರವು ನೀಡುತ್ತವೆ. ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯದ ಚರಿತ್ರೆಯನ್ನು, ಆಯಾ ಸಾಮಾಜಿಕ ಸನ್ನಿವೇಶದಲ್ಲಿ ನಡೆಯುವ ಸಂಘರ್ಷಗಳ ಅಭಿವ್ಯಕ್ತಿಯಾಗಿ ಅಧ್ಯಯನ ಮಾಡುವುದು ಅಗತ್ಯ. ಇಂಥ ಅಗತ್ಯದ ಹಿನ್ನೆಲೆಯಲ್ಲಿ ವೀರಣ್ಣನವರ ಕೃತಿಗಳು ಮುಖ್ಯವೆನ್ನಿಸುತ್ತವೆ.

ವೀರಣ್ಣನವರ ‘ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ- ಪ್ರಾಚೀನ ಸಾಹಿತ್ಯ’ ಮರುಮುದ್ರಣ ಮುದ್ರಣ ಕಾಣುತ್ತಿರುವ ಕೃತಿ. ಈ ಪುಸ್ತಕ ಸಾಹಿತ್ಯಾಸಕ್ತರ ನಡುವೆ ಚರ್ಚೆ- ಜಿಜ್ಞಾಸೆಗಳಿಗೆ ಎಡೆ ಮಾಡಿಕೊಟ್ಟಿದ್ದ ಕೃತಿ. ಈ ಪುಸ್ತಕದ ಮುಂದುವರಿದ ಭಾಗವಾಗಿ ರಾಜಸತ್ತೆಯ ವಿಘಟನೆಯ ಕಾಲದ ಕೃತಿ ಹೊರಬಂದಿದೆ.


1986ರಲ್ಲಿ ‘ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ- ಪ್ರಾಚೀನ ಸಾಹಿತ್ಯ’ ಕೃತಿಯನ್ನು ಡಾ. ರಂ.ಶ್ರೀ.ಮುಗಳಿ ಬಿಡುಗಡೆ ಮಾಡಿದ್ದರು. ‘ಕನ್ನಡ ಸಾಹಿತ್ಯ ಚರಿತ್ರೆ’ ಮುಗಳಿ ಅವರ ಮೇರುಕೃತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಅಂಥವರು- ‘ನನ್ನ ಶಿಷ್ಯ ವೀರಣ್ಣ ಬರೆದ ಈ ಸಾಹಿತ್ಯ ಚರಿತ್ರೆ ಅನೇಕ ವಿಷಯಗಳಲ್ಲಿ ನನ್ನ ಕೃತಿಗಿಂತಲೂ ಮುಂದೆ ಹೋಗಿದೆ’ ಎಂದು ಪ್ರಶಂಸಿಸಿದ್ದರು. ‘ಹೊಸ ಹಾದಿ, ಹೊಸ ಹೊರಡುವಿಕೆ’ ಎಂದು ಹಾ.ಮಾ.ನಾಯಕರು ಬೆನ್ನುತಟ್ಟಿದ್ದರು. ಹಿರಿಯರು ಹರಸಿದ ಈ ಕೃತಿ ಈಗ ಮರುಮುದ್ರಣ ಕಾಣುತ್ತಿದೆ. ಇದರ ಜೊತೆಗೆ, ಮುಂದುವರಿದ ಭಾಗವೂ ಅನಾವರಣಗೊಳ್ಳುತ್ತಿದೆ. ಸಾಹಿತ್ಯ ಚರಿತ್ರೆ ಮುಂದುವರಿಯಲಿದೆ.


ಜ.14ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಸಿ.ವೀರಣ್ಣನವರ ಎರಡೂ ಪುಸ್ತಕಗಳನ್ನು 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಬಿಡುಗಡೆ ಮಾಡುವರು.

Book Review in Vijaya Karnataka - Lavlavike Section 9th Jan 2011

Book Review in Kannada Prabha - Sapthahika Prabha 9th Jan 2011
Kannada Sahitya Charitre 2 Volumes to be released on 14 Jan 2011

No comments:

Post a Comment