![](https://blogger.googleusercontent.com/img/b/R29vZ2xl/AVvXsEinKpZngC_CD784INHCKB0uYh3parTdF0nrc1HJ4b_D6pml-NvIC0hzM0kAmUgkdsqxlfPbzqpjtW1mPmG0QQPVUFKi-ciokI7T9_a9LOVeYs7OQ5psFfN6OXwAUYyXEakFYSQqTzKuMSeQ/s400/NKP+Kaladarshana+VK+16+March+2010.jpg)
Karnataka Kaladarshana - Press Meet on 15 March 2010
‘ಕರ್ನಾಟಕ ಕಲಾದರ್ಶನ’ ಶೀಘ್ರ ಬಿಡುಗಡೆ |
ಪ್ರಜಾವಾಣಿ ವಾರ್ತೆ
ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಎರಡು ಸಾವಿರ ವರ್ಷಗಳ ಬೆಳವಣಿಗೆ-ಸಾಧನೆಗಳ ದರ್ಶನ ‘ಕರ್ನಾಟಕ ಕಲಾದರ್ಶನ’ ಬೃಹತ್ ಸಂಪುಟಗಳು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಸದ್ಯದಲ್ಲೇ ಹೊರಬರಲಿದೆ.
ಬೆಂಗಳೂರು: ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಎರಡು ಸಾವಿರ ವರ್ಷಗಳ ಬೆಳವಣಿಗೆ-ಸಾಧನೆಗಳ ದರ್ಶನ ‘ಕರ್ನಾಟಕ ಕಲಾದರ್ಶನ’ ಬೃಹತ್ ಸಂಪುಟಗಳು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಸದ್ಯದಲ್ಲೇ ಹೊರಬರಲಿದೆ.
|
‘ಚಿತ್ರಕಲೆ, ಶಿಲ್ಪಕಲೆ, ಕರಕುಶಲಕಲೆ, ಛಾಯಾಚಿತ್ರಕಲೆ, ವಾಸ್ತುಶಿಲ್ಪ, ರಂಗಭೂಮಿ, ಸಂಗೀತ, ನೃತ್ಯ, ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದ 50 ಲೇಖನಗಳು ಈ ಸಂಪುಟಗಳಲ್ಲಿ ದಾಖಲಾಗಿದ್ದು, ಆಯಾ ಕ್ಷೇತ್ರದ 55 ಪರಿಣತರು, ತಜ್ಞರು ಅಧಿಕೃತ ಮಾಹಿತಿ ಮತ್ತು ವಿವರಣೆ ನೀಡಿದ್ದಾರೆ. ವಿಶೇಷವಾಗಿ ಕಣ್ಮನ ಸೆಳೆಯುವ 4200 ವರ್ಣಚಿತ್ರಗಳು ಸಾವಿರಾರು ವರ್ಷಗಳ ಸಾಂಸ್ಕೃತಿ ಬೆಳವಣಿಗೆ, ಸಾಧನೆಗಳಿಗೆ ಕನ್ನಡಿ ಹಿಡಿದಂತಿವೆ. ಒಟ್ಟಿನಲ್ಲಿ ಬಹು ಹಿಂದೆ ಅನಕೃ ಅವರು ಕಂಡ ಕನಸು, ಕಲ್ಪನೆ ಈಗ ದ್ವಿಸಂಪುಟವಾಗಿ ಹೊಮ್ಮಿದೆ’ ಎಂದು ತಿಳಿಸಿದರು.
‘ಈ ಸಂಪುಟಗಳು ಹೊರಬರಲು ಸುಮಾರು 4 ವರ್ಷಗಳೇ ಬೇಕಾದವು. ಇದು ಯಾವುದೇ ಕಲೆಯ ಬಗೆಗಿನ ಕಾಲಾನುಕ್ರಮಣಿಕೆ ಚರಿತ್ರೆ ಅಲ್ಲ. ಐತಿಹಾಸಿಕ ಕಾಲದ ಬಹುಮುಖ್ಯ ಕೊಡುಗೆಗಳನ್ನು ಹಿನ್ನೆಲೆ ಯನ್ನು ನಿರೂಪಿಸಿ, ವರ್ತಮಾನದಲ್ಲಾಗುವ ಬೆಳವ ಣಿಗೆ, ಪ್ರಯೋಗ ವೈವಿಧ್ಯ, ಚಿಂತನೆ, ಪ್ರತಿಭಾ ವೈಶಿಷ್ಟ್ಯಗಳನ್ನು ನಿರೂಪಿಸುವುದು ಹಾಗೂ ಕರ್ನಾಟಕದ ಅನನ್ಯತೆಯನ್ನು ಗುರುತಿಸುವುದು ಈ ಗ್ರಂಥದ ಮುಖ್ಯ ಉದ್ದೇಶ’ ಎಂದು ಅವರು ಹೇಳಿ ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ, ಲೇಖಕಿ ಡಾ. ವಿಜಯಾ, ‘ಹೊಸತು’ ಪತ್ರಿಕೆಯ ಸಹ ಸಂಪಾದಕ ಸಿ.ಆರ್. ಕೃಷ್ಣರಾವ್ ಉಪಸ್ಥಿತರಿದ್ದರು.
ಮೂರು ಕಂತಿನಲ್ಲಿ ಹಣ
‘ಕರ್ನಾಟಕ ಕಲಾದರ್ಶನ’ ಬೃಹತ್ ಸಂಪುಟ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. 1200 ಪುಟಗಳ ಎರಡು ಸಂಪುಟಗಳ ಮುಖಬೆಲೆ ರೂ 3,000. ಪ್ರಕಟಪೂರ್ವ ಬೆಲೆ ರೂ 2,000. ಅಂದರೆ ರೂ 500 ಕೊಟ್ಟು ನೋಂದಾವಣಿ ಮಾಡಿಸಿದಲ್ಲಿ ಉಳಿದ ರೂ 1,500 ಅನ್ನು ಮೂರು ಕಂತುಗಳಲ್ಲಿ ಕಟ್ಟಬಹುದು. ಈ ರೀತಿ ಬಿಡುಗಡೆಗೆ ಮುನ್ನವೇ ಕೃತಿ ಕಾಯ್ದಿರಿಸಿದಲ್ಲಿ ಉಚಿತ ಸಿಡಿ/ಡಿವಿಡಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. ದೂರವಾಣಿ ಸಂಖ್ಯೆ: 30578020
No comments:
Post a Comment