Monday, June 11, 2012

ಇದೀಗ ಮಾರುಕಟ್ಟೆಯಲ್ಲಿ ಲಭ್ಯ

 

Improving the quality of public services has caught the attention of many developing countries, including India. A number of measures have been taken to reduce delay in delivery of services and enhance transparency and accountability. For instance, the use of information communications technology (ICT) has brought significant changes in the delivery of public services. Yet the interface between the service provider at the point of delivery and the citizen continues to be a major bottleneck. Taking a cue from the Citizens Charters, the Government of Karnataka has enacted the Karnataka Citizens Services Guarantee Act (Sakaala) with a view to ensure service delivery within the specified time limits. Similar legislation to exist in other states as well. Karnataka Citizens Services Guarantee Act envisages timely delivery of services of over 150 services provided by 11 departments. It is reported that from 1st March 2012 to 27th May 2012, over 11 lakh citizens have used this scheme to access public service. The State Government is in the process of bringing several other services within the ambit of the Sakaala scheme. This simple guide is an effort to inform, educate and enlighten the citizens about the Act and the procedure to be followed in using this important piece of legislation.


ಸರ್ಕಾರಿ ಕಛೇರಿಗಳಿಂದ ನ್ಯಾಯವಾಗಿ ದೊರೆಯಬೇಕಾದ ಸೇವೆಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡುತ್ತಿರುವುದು ಈ ದೇಶದ ದುರಂತಗಳಲ್ಲೊಂದು. ಸೂಕ್ತ ‘ದಕ್ಷಿಣೆ’ ನೀಡದೆ ಯಾವುದೆ ಕೆಲಸವನ್ನೂ ಮಾಡಿಸಿಕೊಳ್ಳಲಾಗದ ಪರಿಸ್ಥಿತಿ ಉದ್ಭವಿಸಿದೆ. ಅದು ಪಡಿತರ ಚೀಟಿ ಇರಬಹುದು ಇಲ್ಲವೆ ಜಾತಿ ಪ್ರಮಾಣ ಪತ್ರ ಇರಬಹುದು. ಅಧಿಕಾರಿಗಳು, ಸಿಬ್ಬಂದಿ ಮತ್ತು ಮಧ್ಯವರ್ತಿಗಳು ನಿಗದಿಪಡಿಸಿರುವ ಮೊತ್ತ ನೀಡದಿದ್ದರೆ ಆ ಸೇವೆ ದೊರೆಯುವುದು ಅಸಂಭವ. ನಾಗರಿಕರ ಕುಂದು ಕೊರತೆಗಳನ್ನು ಪರಿಹರಿಸಲು ರೂಪಗೊಂಡಿರುವ ಅನೇಕ ಕಾನೂನುಗಳು, ನೀತಿ ನಿಯಮಗಳು ನಾಗರಿಕರಿಗೆ ಸಹಕಾರಿಯಾಗಿಲ್ಲ. ಅವೆಲ್ಲಾ ಪುಸ್ತಕದಲ್ಲೇ ಅಡಕವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಸರ್ಕಾರ ನೀಡುವ ಕೆಲವೊಂದು ಸೇವೆಗಳನ್ನು ಇಂತಿಷ್ಟು ದಿನದಲ್ಲಿ ನೀಡಬೇಕೆಂಬ ಕಾನೂನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಈ ಕಾನೂನಿಗೆ ‘ಸಕಾಲ’ ಎಂದು ನಾಮಕರಣ ಮಾಡಲಾಗಿದೆ. ಒಂದು ವೇಳೆ ನಿಗದಿತ ವಾಯ್ದೆಯೊಳಗೆ ಸೇವೆಯನ್ನು ನೀಡದಿದ್ದರೆ ಸರ್ಕಾರವು ನಾಗರಿಕರಿಗೆ ನಿಗದಿತ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡುತ್ತದೆ. ಸೇವೆ ನೀಡದ ಅಧಿಕಾರಿ ಅಥವಾ ಸಿಬ್ಬಂದಿಯೇ ಈ ಮೊತ್ತವನ್ನು ಭರಿಸಬೇಕಾಗುತ್ತದೆ. ಅಥವಾ ಅವರ ಸಂಬಳದಿಂದ ಮುರಿದುಕೊಳ್ಳಲಾಗುತ್ತದೆ. ಸಕಾಲ ಯೋಜನೆ ಈಗಾಗಲೆ ಸಾಕಷ್ಟು ಪರಿಣಾಮಕಾರಿಯಾಗಿದ್ದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರದಿಂದ ಸೇವೆ ಪಡೆಯುವ ಸಂದರ್ಭದಲ್ಲಿ ನಾಗರಿಕರು ಸಕಾಲ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಸಕಾಲ ಯೋಜನೆಯ ಕಿರು ಪರಿಚಯ ಮಾಡಿಕೊಡುವುದು ಈ ಪುಸ್ತಕದ ಉದ್ದೇಶ.

ಪುಸ್ತಕಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ 

No comments:

Post a Comment