Tuesday, May 22, 2012
Saturday, May 12, 2012
ನವಕರ್ನಾಟಕ ಪ್ರಕಾಶನದ ಕೃತಿಗಳು
ಅತ್ಯಂತ ಪ್ರಭಾವಶಾಲಿ ಲೇಖಕರೆಂದು ಹೆಸರು ಗಳಿಸಿದ ರಹಮತ್ ತರೀಕೆರೆ
ಅವರ ಪ್ರವಾಸಾನುಭವಗಳ ಲೇಖನಮಾಲೆ. ಇಲ್ಲಿನ ಎಲ್ಲ ಬರಹಗಳೂ ಓದುಗರ ಮನಸೂರೆಗೊಳ್ಳುವುದಂತೂ
ಸತ್ಯ. ನಾಡನ್ನು ಸುತ್ತಿ ವಿವಿಧ ಮಾಹಿತಿಗಳನ್ನು ಕಲೆಹಾಕಿ ತಮ್ಮ ಅನುಭವ
ಹೆಚ್ಚಿಸಿಕೊಳ್ಳುವುದೇ ಅಲ್ಲದೆ ಅವನ್ನು ಪುಸ್ತಕ, ಲೇಖನಗಳ ಮೂಲಕ ಆಪ್ತವಾಗಿ
ಹಂಚಿಕೊಳ್ಳುವುದು ಇವರ ಒಂದು ವಿಶೇಷ ಗುಣ. ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿನ
ತಿರುಗಾಟದ ಒಟ್ಟು ೩೮ ಬರಹಗಳಿವೆ. ಇವರ ಪ್ರವಾಸಕಥನಗಳು ಆಯಾ ಪ್ರದೇಶದ ಐತಿಹಾಸಿಕ
ಮಹತ್ವವನ್ನು ತಿಳಿಸುವುದಲ್ಲದೆ ಅಲ್ಲಿಯ ಅಂದಿನ-ಇಂದಿನ ಬದುಕಿನ ರೀತಿಯನ್ನೂ
ತಿಳಿಸುತ್ತವೆ. ಓದಿ ಮರೆಯುವ ಯಾವ ವಿಷಯವೂ ಇಲ್ಲಿಲ್ಲ.
ಸಾಮಾಜಿಕ ಕಾದಂಬರಿ. ನಮ್ಮಲ್ಲಿ ಅನೇಕ ಆತಂಕಗಳನ್ನು ಸೃಷ್ಟಿಸಬಲ್ಲಂತಹ ಅಂತರ್ಮತೀಯ ವಿವಾಹದ ಒಳಿತು-ಕೆಡುಕುಗಳನ್ನು ವಿಶ್ಲೇಷಿಸುತ್ತದೆ. ಪರಸ್ಪರ ಪ್ರೀತಿಸಿ ತಮ್ಮಿಚ್ಛೆಯಂತೆ ಬಾಳಲು ಬಿಡಲೊಲ್ಲದ ಸಮಾಜದ ನಡವಳಿಕೆಗಳ ಚಿತ್ರಣ. ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾದ ಸಂಘರ್ಷಗಳ ಸರಮಾಲೆ ಹೇಗಿದ್ದುವೆಂಬ ಅರಿವು ನೀಡುವ ಕಥನ. ಕೌಟುಂಬಿಕ ಪರಿಸರವನ್ನು ದಾಟಿ ಮುಂದುವರೆದು ಕೇವಲ ವ್ಯಕ್ತಿಗತವಾದ ವಿಷಯವೊಂದು ಹೇಗೆ ಅನಗತ್ಯ ಪ್ರಚಾರದಿಂದ ಅಸಹನೀಯವಾಗುತ್ತದೆಂದು ನಾವು ಇಲ್ಲಿ ಗ್ರಹಿಸಬಹುದು. ಕಾಲೇಜು ದಿನಗಳಲ್ಲಿನ ಪ್ರೀತಿ-ಪ್ರೇಮ-ಪ್ರಣಯಗಳು ಬಾಳಿನಲ್ಲಿ ಹೇಗೆ ಗುಲ್ಲೆಬ್ಬಿಸುತ್ತವೆಂದು ತಿಳಿಸುವ ಒಂದು ನೈಜ ಅಪೂರ್ವ ಕಥೆ.

Tuesday, May 8, 2012
ನವಕರ್ನಾಟಕ ಪ್ರಕಾಶನದ ಮುಂದಿನ ಪ್ರಕಟಣೆ
ಭೀಮಾಯಣ - ಅಸ್ಪೃಶ್ಯತೆಯ ಅನುಭವಗಳು (ಭೀಮರಾವ್ ರಾಮಾಜಿ ಅಂಬೇಡ್ಕರ ಅವರ ಜೀವನದ ಘಟನೆಗಳು)
ಭಾರತದಲ್ಲಿ ಅಸ್ಪೃಶ್ಯನಾದವನಿಗೆ ಹೇಗನ್ನಿಸುತ್ತದೆ? ಕೆಲವು ಭಾರತೀಯರೇಕೆ ಇತರರನ್ನು ಸ್ಪರ್ಶಿಸಲು ಹೇಸುತ್ತಾರೆ? ಭೀಮರಾವ್ ರಾಮ್‌ಜೀ ಅಂಬೇಡ್ಕರರು(1895-1956)ದೇಶದ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿಗಳು, ಅಸ್ಪೃಶ್ಯನಾಗಿ ತಾವು ಬೆಳೆದು ಬಂದ ಅನುಭವಗಳನ್ನು ಮತ್ತು ನಿರಂತರವಾಗಿ ಎದುರಿಸಿದ ಜಾತಿ ಭೇದವನ್ನು ನೆನಪಿಸಿಕೊಂಡಿದ್ದಾರೆ. ಅವರ ಹತ್ತನೇ ವಯಸ್ಸಿನಲ್ಲಿ ಶಾಲೆಯಲ್ಲಿದ್ದಾಗ, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಂದ ಬಳಿಕ ಬರೋಡದಲ್ಲಿ: ತಾವು ಪ್ರಯಾಣಿಸುತ್ತಿದ್ದಾಗ, ಇತ್ಯಾದಿ ಸಂದರ್ಭಗಳಲ್ಲಿ. ಅನೇಕ ಸಂಕಷ್ಟಗಳನ್ನು ಎದುರಿಸಿ ಭಾರತದ ಸಂವಿಧಾನದ ಕರಡು ತಯಾರಿಸಿದರು. ಅನಂತರದ ದಿನಗಳಲ್ಲಿ ಬೌದ್ಧರಾದರು. ಅಂಬೇಡ್ಕರರ ಅನುಭವಗಳೇ ಭಾರತದ 170 ಮಿಲಿಯನ್ ದಲಿತರಿಗೆ ಇಂದೂ ಕಾಡುತ್ತಿವೆ. ಅವರಿಗೆ ನೀರನ್ನು ಕೊಡುವುದಿಲ್ಲ. ವಾಸಕ್ಕೆ ಸ್ಥಳವಿಲ್ಲ. ಜೀವನಾವಶ್ಯಕತೆಗಳ ಪೂರೈಕೆಯಿಲ್ಲ. ಈ ನೆಲನಡುಗಿಸುವ ಕೃತಿಯಲ್ಲಿ ಪಾರ್ಧಾನ್‌ಗೊಂಡ ಕಲಾವಿದರಾದ ದುರ್ಗಾಬಾಯಿ ವ್ಯಾಮ್ ಮತ್ತು ಸುಭಾಷ್ ವ್ಯಾಮ್‌ರವರು ಚಾರಿತ್ರಿಕ ಘಟನೆಗಳಾದ ಮಹಾಡ ಸತ್ಯಾಗ್ರಹವನ್ನು ಈಚಿನ ಘಟನೆಗಳ ಜೊತೆ ನೇಯುತ್ತಾರೆ. ಸಂಪ್ರದಾಯಬದ್ಧ ನಿರೂಪಣಾ ವ್ಯಾಕರಣವನ್ನೇ ಬದಿಗೆ ಸರಿಸಿ, ಚಿತ್ರಕಥೆಯಲ್ಲಿ ಹೊಸ ಚೈತನ್ಯ ತುಂಬಿದ್ದಾರೆ. ಅವರ ಮಾಂತ್ರಿಕ ಕಲೆಯು ಇಲ್ಲಿ ದೈತ್ಯಾಕಾರವಾಗಿ ಹೊರಹೊಮ್ಮಿದೆ.
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ
Tuesday, April 24, 2012
ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ, ನಿರ್ಭಯ - ಮುಕ್ತ ವಾತಾವರಣದಲ್ಲಿ
ಬೆಳೆದು ಇಂದಿನ ಮಹಿಳೆಯರಿಗೆ ಸ್ಫೂರ್ತಿ ನೀಡುವಂಥ ಬದುಕನ್ನು ಬಾಳಿದ ಕಮಲಾದೇವಿ
ಚಟ್ಟೋಪಾಧ್ಯಾಯರ ಪೂರ್ಣ ಪ್ರಮಾಣದ ಜೀವನ ಚರಿತ್ರೆಯಿದು. ಬಲು ದಿಟ್ಟೆಯಾದ ಅವರು ಸಹಕಾರಿ
ಸೇವಾಕ್ಷೇತ್ರದಲ್ಲೂ, ಸ್ವಾತಂತ್ರ್ಯ ಚಳುವಳಿಯ ಸ್ವದೇಶೀ ಆಂದೋಲನದಲ್ಲೂ ಭಾಗವಹಿಸಿದವರು.
ದೇಶಪ್ರೇಮಿಗಳ ಒಡನಾಟ, ನಿಷ್ಠಾವಂತ ಸಮಾಜ ಸೇವಕರ ಪರಿಚಯ ಚಿಕ್ಕಂದಿನಿಂದಲೂ ಇವರಿಗಿತ್ತು.
ಓರ್ವ ಸ್ವಯಂಸೇವಕಿಯಾಗಿ ಸೇವಾದಳದಲ್ಲಿ ಪ್ರವೇಶ ಪಡೆದ ಕಮಲಾದೇವಿ ಮುಂದೆ ಸಕ್ರಿಯ
ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಎಲ್ಲ ಚಳುವಳಿಗಳಲ್ಲಿ
ಭಾಗವಹಿಸಿ ಕಾರಾಗೃಹ ಸೇರಿ ಅತ್ಯಂತ ಕಠಿಣ ದಿನಗಳನ್ನು ಕಳೆದರು. ವೈಯುಕ್ತಿಕ, ಕೌಟುಂಬಿಕ
ಸುಖ ಸಂತೋಷವನ್ನು ದೇಶಕ್ಕಾಗಿ ತ್ಯಾಗ ಮಾಡಿದರು. ಉಪ್ಪಿನ ಸತ್ಯಾಗ್ರಹದ ಕಾಲ್ನಡಿಗೆಯಲ್ಲಿ
ಮಹಿಳೆಯರನ್ನು ಸೇರಿಸಿಕೊಳ್ಳಲಿಲ್ಲವೆಂದು ಗಾಂಧೀಜಿಯೊಂದಿಗೆ ತಕರಾರು ತೆಗೆದ ಮಹಿಳೆ
ಈಕೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೂ, ಮಹಿಳಾ ಅಭಿವೃದ್ಧಿಗೆ ಅಡ್ಡಿಯಾಗಿರುವ
ಸಮಾಜದ ಕೊಳಕು ಮನಸ್ಸಿನವರೊಂದಿಗೂ ಹೋರಾಡಬೇಕಾದ ಅನಿವಾರ್ಯತೆ ಇವರಿಗಿತ್ತು. ಅಂದಿನ
ರಾಷ್ಟ್ರಮಟ್ಟದ ಗಣ್ಯರೊಂದಿಗೆ ನಿಕಟಸಂಪರ್ಕವಿದ್ದ ಕಮಲಾದೇವಿ ತನ್ನ ವ್ಯವಹಾರ
ಚತುರತೆಯಿಂದ ಯಶಸ್ವಿಯಾಗಿ ಎಲ್ಲವನ್ನೂ ನಿಭಾಯಿಸಿದರು. ಕರಕುಶಲ ಮಂಡಳಿಯ ಮೂಲಕ ವಿವಿಧ
ನೇಯ್ಗೆ, ಹಸ್ತಕೌಶಲ್ಯದ ಸಾಮಗ್ರಿ ತಯಾರಿಕೆಗೆ ಪ್ರೋತ್ಸಾಹ ನೀಡಿದ ಅವರ ಸೇವೆ ಸ್ಮರಣೀಯ.
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ
ಇಲ್ಲಿರುವ ಲೇಖನಗಳು ಸ್ತ್ರೀಕೇಂದ್ರಿತವಾಗಿದ್ದು ಮುಖ್ಯವಾಗಿ ಮಹಿಳೆ ನಡೆದುಬಂದ ದಾರಿಯ ಅವಲೋಕನ ಮಾಡುತ್ತವೆ. ಆಕೆ ಹಂತ ಹಂತವಾಗಿ ತನ್ನತನವನ್ನು ಬೆಳೆಸಿಕೊಂಡು ಪ್ರಗತಿಯತ್ತ ಸಾಗಿದ್ದು ಇತ್ತೀಚಿನ ಶತಮಾನಗಳಲ್ಲಿ. ಆಕೆಗೆ ಹೆಚ್ಚಿನ ಆತ್ಮವಿಶ್ವಾಸ ಬಂದುದೂ ತೀರಾ ಇತ್ತೀಚಿನ ದಿನಗಳಲ್ಲಿ. ಇಲ್ಲಿ ತೀರಾ ಪುರಾಣಕಾಲದ ಮಹಿಳೆಯರ ಚಿತ್ರಣವಿಲ್ಲ. ಸುಮಾರು ನೂರು ವರ್ಷಗಳಷ್ಟರ ಕಾಲಾವಧಿಯ ಮಹಿಳಾ ಚಳುವಳಿ, ಸಂಘ-ಸಂಸ್ಥೆಗಳಲ್ಲಿ ಆಕೆಯ ಪಾತ್ರ, ಲೇಖಕಿಯಾಗಿ ಮಹಿಳೆಯ ಸಂವೇದನಾಶೀಲ ಬರಹ ಇವನ್ನೆಲ್ಲ ಪರಿಚಯಿಸಿದೆ. ಅಂತರರಾಷ್ಟ್ರೀಯ ಬೀಜಿಂಗ್ ಮಹಿಳಾ ಸಮ್ಮೇಳನ ಮತ್ತು ಮುಂದಿನ ಹೆಜ್ಜೆಯಾಗಿ ಈಗೇನು ನಡೆಯುತ್ತಿದೆ ಎಂದು ಮಹಿಳಾ ಸಶಕ್ತೀಕರಣದ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಮಹಿಳಾ ಸಂಘ-ಸಂಸ್ಥೆಗಳು ಕೆಲಸ ಮಾಡುವತ್ತಲೂ ಒಂದು ಕಿರುನೋಟವೂ ಇದೆ.

ಇವು ವ್ಯಕ್ತಿಚಿತ್ರಣಗಳು. ಲೇಖಕಿಯರಾಗಿ, ಸಮಾಜ ಸೇವೆಯಲ್ಲಿ ತೊಡಗಿ,
ದುಡಿವ ಮಹಿಳೆಯಾಗಿ ತಮ್ಮ ಕುಶಲತೆಯನ್ನು ಮೆರೆದಿರುವವರ ಬದುಕಿನ ವಿವರಗಳು ಇಲ್ಲಿವೆ.
ತಾವಾಯಿತು-ತಮ್ಮ ಮನೆಯಾಯಿತೆಂದುಕೊಂದು ಅಂತರ್ಮುಖಿಯಾಗಿದ್ದ ಮಹಿಳೆ ಇಂದು ತನ್ನ
ಅಭ್ಯುದಯಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾಳೆ. ಹೀಗೆ
ಜೀವನವನ್ನು ರೂಪಿಸಿಕೊಂಡು ಇತರರಿಗೂ ಮಾರ್ಗದರ್ಶನ ನೀಡಿ ಜನಪ್ರಿಯತೆಗಳಿಸಿ ಆದರ್ಶ
ಬಾಳನ್ನು ಬಾಳಿದ್ದಾರೆ. ಮಹಿಳೆ ಪ್ರಯತ್ನಪಟ್ಟರೆ ಏನೆಲ್ಲಾ ಸಾಧಿಸಬಹುದೆಂದು ಈ
ಕೃತಿಯನ್ನೋದಿದರೆ ತಿಳಿಯುತ್ತದೆ. ಇವರಲ್ಲಿ ಹೆಚ್ಚಿನವರು ಕನ್ನಡ ಬರಹಗಾರ್ತಿಯರು.
ಅವರಿಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉನ್ನತ ವ್ಯಕ್ತಿತ್ವ
ಬೆಳೆಸಿಕೊಂಡಿದ್ದಾರೆ. ಇದನ್ನು ಈ ಪುಸ್ತಕ ಪರಿಚಯಿಸುತ್ತದೆ.
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ
Friday, April 20, 2012
A Report in Vijayavani Daily on 23 April 2012
HAPPY BOOK DAY TO YOU ALL
ಪ್ರಿಯರೆ,
2012ರ ಏಪ್ರಿಲ್ 22ರ ಭಾನುವಾರ ಬೆಳಗ್ಗೆ10 ಕ್ಕೆ ಬಸವನಗುಡಿಯಲ್ಲಿರುವ ಇಂಡಿಯನ್
HAPPY BOOK DAY TO YOU ALL
ಪ್ರಿಯರೆ,
2012ರ ಏಪ್ರಿಲ್ 22ರ ಭಾನುವಾರ ಬೆಳಗ್ಗೆ10 ಕ್ಕೆ ಬಸವನಗುಡಿಯಲ್ಲಿರುವ ಇಂಡಿಯನ್
ಇನ್‌ಸ್ಟಿಟ್ಯೂಟ್ ಅಫ್ ವರ್ಲ್ಡ್ ಕಲ್ಚರ್ ನಲ್ಲಿ ಮೂರು
ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವಿದೆ.
ದಯವಿಟ್ಟು ಭಾಗವಹಿಸಿ. ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ.
ವಂದನೆಗಳು.
ವಂದನೆಗಳು.
ಆರ್. ಎಸ್. ರಾಜಾರಾಮ್
Wednesday, April 18, 2012
Thursday, March 29, 2012
![]() |
ಡಾ|| ಇಂದಿರಾ ಹೆಗ್ಗಡೆಯವರು ತುಳುನಾಡಿನ ಒಂದು ಪ್ರಾದೇಶಿಕ ಆಚರಣೆಯ ಪರಂಪರೆಯ ಮೂಲವನ್ನು ಹುಡುಕುತ್ತ ಬಹು ಶ್ತಮವಹಿಸಿ ಅಧ್ಯಯನ ಮಾದಿ ಅನುಭವ ಸಹಿತ ಪ್ರಸ್ತುತಪಡಿಸಿದ ಕೃತಿಯಿದು. ತುಳುನಾಡಿನಲ್ಲೆಲ್ಲ ಆರಾಧಿಸಲ್ಪಡುವ ಪ್ರಾಚೀನ ಸಂಸ್ಕೃತಿಯ ಬಿರ್ಮೆರ್ - ನಾಗ - ಭೂತ - ಮುಂತಾದ ದೈವಗಳ ಮೂಲಸ್ಥಾನ ಆದಿ - ಆಲಡೆ ಎಂದು ಕರೆಯಲಾಗುವ ಸ್ಥಳಗಳಿಗೆಲ್ಲ ಭೇಟಿ ಕೊಟ್ಟು ಈ ಆಚರಣೆಯ ಹಿನ್ನೆಲೆಯನ್ನು ಗ್ರಹಿಸಿದ್ದಾರೆ. ಇಲ್ಲಿ ಮಾತೃವಂಶೀಯ ಮೂಲದ ಅನೇಕ ಕಡೆಗಳಲ್ಲಿ ಮನೆಯೊಳಗೆ ಅಥವಾ ಹೊರಗಡೆ ಬನದಲ್ಲಿ ಸ್ಥಾಪಿತವಾದ ಭೂತ - ನಾಗಗಳ ಕಲ್ಲು ಪ್ರತಿಮೆಗಳಿದ್ದು ಅವುಗಳ ಹಿಂದಿರುವ ಚಾರಿತ್ರಿಕ ಅಂಶಗಳನ್ನು ತಿಳಿಸುತ್ತ ಇಂದಿಗೂ ಜೀವಂತವಾಗಿರುವ ಪದ್ಧತಿಗಳತ್ತ ನಮ್ಮ ಗಮನ ಸೆಳೆಯುತ್ತಾರೆ. ಗತ ಇತಿಹಾಸದ ಭಾಗವಾಗಿರುವ ಇವುಗಳ ಹಿಂದೆ ಏನೇನಿದೆಯೆಂದು ನಿಖರವಾಗಿ ತಿಳಿದುಕೊಳ್ಳಲು ನೂರಾರು ಗ್ರಂಥಗಳನ್ನು ಓದಿ ವಿವಿಧ ಜನವರ್ಗದವರನ್ನೂ ಸ್ವತಃ ಮಾತನಾಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜನರೊಂದಿಗೇ ಬೆಳೆದುಬಂದಿರುವ ಈ ಸಂಸ್ಕೃತಿಗಳ ಅಧ್ಯಯನ - ಪರಿಚಯಗಳು ಉಗಮ - ವಿಕಾಸ - ಪರಿವರ್ತನೆಗಳೆಂಬ ಮೂರು ನೆಲೆಗಳಲ್ಲಿ ಪರಿಚಯಿಸಲ್ಪಟ್ಟವೆ.
Monday, March 26, 2012
Gedde Gelluvevu - We Will Win - A Handbook on Career Guidance and Personality Development by Bedre Manjunath in Prajavani 26 March 2012
ಮಾರ್ಗದರ್ಶಿ ಕೈಪಿಡಿ
- March 26, 2012
- Share
- [-]
- Text
- [+]
ಪ್ರೌಢ
ಶಿಕ್ಷಣ, ಪಿಯು ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಯಾವ ವಿಷಯ ಆಯ್ಕೆ
ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂಥವರಿಗೆ ಪೋಷಕರೊ ಅಥವಾ ಹಿರಿಯ
ವಿದ್ಯಾರ್ಥಿಗಳೊ ಮಾರ್ಗದರ್ಶನ ಮಾಡುತ್ತಾರೆ. ಆದರೂ `ನಾನು ಆಯ್ಕೆ ಮಾಡಿಕೊಂಡ ಕೋರ್ಸ್
ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆಯೊ ಇಲ್ಲವೊ?
ಕೈತುಂಬ ಹಣ ಸಿಗುವ ಉದ್ಯೋಗ ಸಿಗುತ್ತದೆಯೋ ಇಲ್ಲವೊ?` ಇತ್ಯಾದಿ ಪ್ರಶ್ನೆಗಳು ಹಲವರ ಮನದಲ್ಲಿ ಮೂಡುತ್ತವೆ. ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬೇದ್ರೆ ಮಂಜುನಾಥ್ ಅವರು ಬರೆದಿರುವ `ಗೆದ್ದೇ ಗೆಲ್ಲುವೆವು` ಕೃತಿ ಮಾರ್ಗದರ್ಶಿ ಕೈಪಿಡಿಯಾಗಿದೆ.
114 ಅಧ್ಯಾಯಗಳ `ಗೆದ್ದೇ ಗೆಲ್ಲುವೆವು` ಕೃತಿಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡ, ವೃತ್ತಿ ಹುಡುಕಾಟದಲ್ಲಿರುವ ವಿದ್ಯಾರ್ಥಿಗಳ ಹಾಗೂ ಹೊಸ ಹೊಸ ಕೋರ್ಸ್‌ಗಳ ಮಾಹಿತಿ ಹೊತ್ತಿಗೆ. ಐಎಎಸ್, ಕೆಎಎಸ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕ್ರಮ... ಹೀಗೆ ಹತ್ತು ಹಲವು ಅನುಮಾನಗಳಿಗೆ ಉತ್ತರ ರೂಪವಾಗಿ ಪುಸ್ತಕ ರೂಪುಗೊಂಡಿದೆ.
ಸಂದರ್ಶನ ಎದುರಿಸಲಾಗದೆ ಅದೆಷ್ಟೋ ವಿದ್ಯಾರ್ಥಿಗಳು ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಬುದ್ಧಿವಂತರಾಗಿದ್ದರೂ ಸಂದರ್ಶಕರ ಎದುರು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸುತ್ತಾರೆ. ಇಂಥ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪದಂತೆ ಅಧ್ಯಾಯ ಒಂದರಲ್ಲಿ ಮಂಜುನಾಥ್ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಸರ್ಕಾರ, ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಹಾಗೂ ಅಂತರ್ಜಾಲ ತಾಣ, ವೆಬ್‌ಸೈಟ್ ವಿಳಾಸಗಳನ್ನು ಆಯಾ ಅಧ್ಯಾಯಗಳಲ್ಲಿ ನಮೂದಿಸಿದ್ದಾರೆ.
ಹೊಸ ಹೊಸ ವೃತ್ತಿ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಈ ರೀತಿಯ ಕೃತಿಗಳ ಸೇರ್ಪಡೆ ಪ್ರಸ್ತುತವಿದೆ. ಈ ನಿಟ್ಟಿನಲ್ಲಿ ಮಂಜುನಾಥ ಅವರ ಪ್ರಯತ್ನ ಉಪಯುಕ್ತ ಪುಸ್ತಕ.
Thank You Editors
Gedde Gelluvevu - We Will Win - A Handbook on Career Guidance and Personality Development by Bedre Manjunath in Prajavani 26 March 2012
http://prajavani.net/include/story.php?news=7399§ion=129&menuid=13

Sunday, March 25, 2012
Thursday, March 22, 2012
ಆತ್ಮೀಯರೆ,
ಈಗಾಗಲೇ ಐದು ಸುಸಜ್ಜಿತ ಪುಸ್ತಕ ಮಳಿಗೆಗಳನ್ನು ಹೊಂದಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆ ತನ್ನ ಆರನೇ ಪುಸ್ತಕ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆಯಲಿದೆ. ಮಂಗಳೂರಿನಲ್ಲಿ ಇದು ನಮ್ಮ ಎರಡನೇ ಮಳಿಗೆ.
ಶ್ರೀ ಜಿ. ಏನ್. ಆಶೋಕವರ್ಧನ ಅವರು ಕಳೆದ 36 ವರ್ಷಗಳಿಂದ ಮಂಗಳೂರಿನ ಬಲ್ಮಠದ ಶರಾವತಿ ಕಟ್ಟಡದಲ್ಲಿ 'ಅತ್ರಿ ಬುಕ್ ಸೆಂಟರ್ ' ಮಳಿಗೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಈಗ ವೃತ್ತಿ ಜೀವನದಿಂದ ವಿಶ್ರಾಂತರಾಗಲು ಬಯಸಿದ್ದಾರೆ. ಅವರ 'ಅತ್ರಿ ಬುಕ್ ಸೆಂಟರ್' ಇದೇ ಏಪ್ರಿಲ್ 1 ರಿಂದ ನಮ್ಮ 'ನವಕರ್ನಾಟಕ ಪುಸ್ತಕ ಮಳಿಗೆ' ಆಗಲಿದೆ. ಇದರ ಉದ್ಘಾಟನೆ ಹಾಗೂ ಅದೇ ಸಂದರ್ಭದಲ್ಲಿ ನಡೆಯಲಿರುವ 'ತುಳುವರ ಮೂಲತಾನ ಆದಿ ಆಲಡೆ' ಕೃತಿಯ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಲಗತ್ತಿಸಿದ್ದೇವೆ. ದಯವಿಟ್ಟು ಭಾಗವಹಿಸಿ.
ಇದನ್ನು ನಿಮ್ಮ ಗೆಳೆಯರಿಗೂ, ಆಸಕ್ತರಿಗೂ ಕಳಿಸಿ. ಅವರನ್ನೂ ಕರೆತನ್ನಿ.
ವಂದನೆಗಳು,
ನವಕರ್ನಾಟಕ ಪ್ರಕಾಶನ

Tuesday, March 20, 2012
ನವಕರ್ನಾಟಕ ಪ್ರಕಾಶನದ ಮುಂಬರುವ ಕೃತಿಗಳು
ಶ್ರೀ ಬಿ. ಎ. ಸನದಿಯವರ ವ್ಯಕ್ತಿತ್ವ ಮತ್ತು ಅವರ ಕಾವ್ಯದ ಬಗ್ಗೆ
ಒಂದು ಸಂಪೂರ್ಣ ನೋಟವನ್ನಿಲ್ಲಿ ಗೌರೀಶ ಕಾಯ್ಕಿಣಿಯವರು ನೀಡಿದ್ದಾರೆ. ಸನದಿ-ಕಾಯ್ಕಿಣಿ
ಇಬ್ಬರೂ ಕವಿಗಳೇ-ಸಾಹಿತಿಗಳೇ ಆದ್ದರಿಂದ ಇಲ್ಲಿನ ವಿಮರ್ಶೆ, ವ್ಯಕ್ತಿಚಿತ್ರಣಕ್ಕೆ
ಒಳ್ಳೆಯ ಮೌಲ್ಯ ಬಂದಿದೆ. ವಿಮರ್ಶಕರೂ, ವಿಚಾರವಾದಿಗಳೂ, ಸಾಹಿತಿಯೂ ಆಗಿರುವ ಗೌರೀಶ
ಕಾಯ್ಕಿಣಿಯವರು ತಮ್ಮ ಸಮಕಾಲೀನ ಕವಿಯೊಬ್ಬರ ಕಾವ್ಯಕ್ಕೆ ಅಲ್ಲಿನ ಮೌಲ್ಯಕ್ಕೆ ಈ ಮೂರು
ನೆಲೆಗಳಲ್ಲಿ ನ್ಯಾಯವೊದಗಿಸಿದ್ದಾರೆ. ಕಾವ್ಯದ ತುಣುಕುಗಳನ್ನು ಅಲ್ಲಲ್ಲಿ ಉದಾಹರಿಸುತ್ತ
ಅಲ್ಲಡಗಿರುವ ವೈವಿಧ್ಯಮಯ ಜಾಡನ್ನು ಉಲ್ಲೇಖಿಸುತ್ತ ಓದುಗನಿಗೆ ನಿಲುಕದಿರುವ
ಸಂಗತಿಗಳನ್ನು ತಿಳಿಸಿಕೊಟ್ಟಿದ್ದಾರೆ. ತೂಕದ ವಿಮರ್ಶೆ ಮತ್ತು ಮೌಲ್ಯಮಾಪನವನ್ನಿಲ್ಲಿ
ಓದುಗರು ಗ್ರಹಿಸಬಹುದು. ನವ ಸಂಭವದ ನಿರೀಕ್ಷೆ, ಭವಿಷ್ಯದಲ್ಲಿ ಒಳ್ಳೆಯ ವಿಚಾರಗಳಿರಲಿ
ಎಂಬ ಆಕಾಂಕ್ಷೆ ಸನದಿಯವರ ಹೆಚ್ಚಿನ ಕವಿತೆಗಳಲ್ಲಿವೆ.
ನಾಡಿನ ಹಿರಿಯ ಕವಿಗಳು ಬರೆದ ಬೇರೆ ಬೇರೆ ಕಾವ್ಯಗಳನ್ನು ಬಿ. ಎ.
ಸನದಿಯವರು ತಮ್ಮ ದೃಷ್ಟಿಕೋನದಿಂದ ವಿಮರ್ಶೆ ಮಾಡಿರುವ ಅಪೂರ್ವ ಕೃತಿ. ಜನರ ಮಧ್ಯೆ
ಬೆಳೆದು ಬಂದ ಕಾವ್ಯವು ಜನಮನದಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ಕಾಲಕಾಲಕ್ಕೆ ಹೊಸ ಹೊಸ
ಚಿಗುರು-ಹೂವು-ಹಣ್ಣುಗಳನ್ನು ಬಿಡುವ ಒಂದು ಮರದಂತೆ ಕಾವ್ಯವನ್ನು ಸೃಷ್ಟಿಸಬೇಕು. ಹೊಸ
ಅಲೆಗಳನ್ನು ಸ್ವೀಕರಿಸುತ್ತ ಹಳೆಯ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ ಜನರ ಒಡನಾಡಿಯಾಗಿ
ಕಾವ್ಯ ನಿಲ್ಲಬೇಕು, ಜನರ ಮಧ್ಯೆಯೇ ಉಸಿರಾಡಬೇಕು. ಕಾವ್ಯ ಸೃಷ್ಟಿಯ ಉದ್ದೇಶವೂ ಇದೇ
ಆಗಿದೆ. ನವ್ಯ ಕಾವ್ಯ, ನವ್ಯೋತ್ತರ ಕಾಲಗಳಲ್ಲಿನ ಈ ವಿಮರ್ಶೆ ಮುಂದೊಂದು ದಿನದ ಕಾವ್ಯ
ಸೃಷ್ಟಿಗೂ ಅನ್ವಯಿಸುವಂತಿದೆ. ಒಳನಾಡಿನಲ್ಲೂ ಹೊರ ನಾಡಿನಲ್ಲೂ ವಿವಿಧ ಜನರ ಮಧ್ಯೆ
ಬೆರೆತು ಜನಜೀವನದ ನಾಡಿಮಿಡಿತಗಳನ್ನು ಚೆನ್ನಾಗಿ ಅರಿತಿರುವ ಸನದಿಯವರ ಇಲ್ಲಿನ ವಿಮರ್ಶೆ
ಜನಕಾವ್ಯದೃಷ್ಟಿಗೆ ಹಿಡಿದ ಕನ್ನಡಿಯಂತಿದೆ.
Monday, March 19, 2012
Gedde Gelluvevu - We Will Win - A Handbook on Career Guidance and Personality Development by Bedre Manjunath
Gedde Gelluvevu - We Will Win - A Handbook on Career Guidance and Personality Development by Bedre Manjunath
Published by Navakarnataka Publications, Bangalore Pages: 216 + 4 , Price: 100/-
Copies are available from all Navakarnataka Book Stores, Exhibition Outlets, Leading Book Stalls, Bus-Stand Book Depots and also from
www.flipkart.com
WWW
- WE WILL WIN. ಗೆದ್ದೇ ಗೆಲ್ಲುವೆವು! ಹೇಗೆ? ಗೆಲವಿನ ಗುಟ್ಟನ್ನು ಹಂಚಿಕೊಳ್ಳುವ
ಕೃತಿ ಇದು. ಎಂಪ್ಲಾಯಬಿಲಿಟಿ ಸ್ಕಿಲ್ಸ್ - ಪೂರ್ವಸಿದ್ಧತೆ, ಸ್ಪರ್ಧಾತ್ಮಕ
ಪರೀಕ್ಷೆಗಳು, ಕಲಿಕೆ - ಗಳಿಕೆಯ ಕೋರ್ಸ್‌ಗಳು, ಅತ್ಯುಪಯುಕ್ತ ವೆಬ್‌ಸೈಟ್ ಮತ್ತು
ಪುಸ್ತಕಗಳು ಹಾಗೂ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಎಂಬ ಐದು
ಭಾಗಗಳಲ್ಲಿ, 114 ಅಧ್ಯಾಯಗಳಲ್ಲಿ ಸಂಕಲಿತವಾಗಿರುವ "ಗೆದ್ದೇ ಗೆಲ್ಲುವೆವು -
ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೋರ್ಸ್‌ಗಳ ಮಾಹಿತಿ
ಸಾಹಿತ್ಯ ಕೈಪಿಡಿ" ಕನ್ನಡದಲ್ಲಿ ದೊರೆಯುವ
ಏಕೈಕ ಸಮಗ್ರ ವೃತ್ತಿ ಮಾರ್ಗದರ್ಶಿ ಮಾಹಿತಿ ಸಾಹಿತ್ಯ ಕೃತಿ. ಎಂಪ್ಲಾಯಬಿಲಿಟಿ
ಸ್ಕಿಲ್ಸ್! ಐ.ಕ್ಯು., ಇ.ಕ್ಯು., ವಿ.ಕ್ಯು., ಕೆ.ಕ್ಯು., ಜಿ.ಕೆ.ಕ್ಯು., ಸಿ.ಕ್ಯು.,
ಮೊದಲಾದ ಸಾಮರ್ಥ್ಯಗಳು, ಎಸ್.ಕ್ಯು., ಸಿ.ವಿ./ ರೆಸ್ಯೂಮೆ / ಬಯೋಡಾಟಾ ಹೇಗಿರಬೇಕು ?
ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ದಿನಪತ್ರಿಕೆಗಳೇ ದಾರಿದೀಪ, ಎಸ್.ಡಿ.ಎ. /
ಎಫ್.ಡಿ.ಎ./ಕೆ.ಇ.ಎಸ್./ಕೆ.ಎ.ಎಸ್./ ಐ.ಎ.ಎಸ್.
ಪರೀಕ್ಷೆಗಳಿಗೆ ಸಿದ್ಧತೆ ಹೇಗೆ ? ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ
ಅನ್ನೋರಿಗೆಲ್ಲಾ ಈ ಐ.ಎ.ಎಸ್./ಐ.ಎಫ್.ಎಸ್., ಯಂಗ್ ಇಂಡಿಯಾ ಬ್ಯುರೋಕ್ರಸಿ, ನೇಮಕಾತಿ
ಪರೀಕ್ಷೆಗಳು, ವಿಭಿನ್ನವಾಗಿ ಆಲೋಚಿಸಿ - ಯಶಸ್ಸು ಗಳಿಸಿ, ಎಡ್ವರ್ಡ್-ಡ-ಬೋನೋ, ಡಾ.
ಸ್ಪೆನ್ಸರ್ ಜಾನ್ಸನ್, ಪಾಲ್ ಆರ್ಡೆನ್, ಗ್ಲಾಡ್‌ವೆಲ್‌ನ 10,000 ಗಂಟೆಗಳ ಪರಿಶ್ರಮ
ಸೂತ್ರ!, ಸ್ಟೀವ್ ಜಾಬ್ಸ್‌ನ - ಸ್ಟೇ ಹಂಗ್ರಿ, ಸ್ಟೇ ಫೂಲಿಶ್, ದಿ ಲಾಸ್ಟ್
ಲೆಕ್ಚರ್... ಒಹ್! ಏನೆಲ್ಲಾ ಅಡಗಿದೆ ಇಲ್ಲಿ! ಶಿಕ್ಷಕರು, ವಿದ್ಯಾರ್ಥಿಗಳು,
ಸಂಶೋಧನಾರ್ಥಿಗಳು, ಯಶಸ್ಸಿನ ಬೆನ್ನು ಹತ್ತಿರುವ ಸ್ಪರ್ಧಾರ್ಥಿಗಳ ಆಪ್ತ ಸಂಗಾತಿ
ಇದು. ಕ್ವಿಜ್, ಅಡ್ವೆಂಚರ್,ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್,
ವ್ಯಕ್ತಿತ್ವ ವಿಕಾಸ ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ
ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 75ಕ್ಕೂ ಹೆಚ್ಚು
ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ
ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಯಶಸ್ಸು ನಿಮ್ಮದಾಗಲಿ!
Monday, March 5, 2012
Sunday, March 4, 2012
PLAY AND LEARN SPOKEN AND WRITTEN ENGLISH THROUGH LANGUAGE GAMES by Bedre Manjunath
PLAY AND LEARN SPOKEN AND WRITTEN ENGLISH THROUGH LANGUAGE GAMES
An Illustrated Handbook of Word Power, Language Games, Activities and TLM for Students, Teachers, D.Ed. / B.Ed. / M.Ed. Trainees and Parents by Bedre Manjunath
An Illustrated Handbook of Word Power, Language Games, Activities and TLM for Students, Teachers, D.Ed. / B.Ed. / M.Ed. Trainees and Parents by Bedre Manjunath
Published by Navakarnataka Publications, Bangalore
Pages 352 Rs.290/- Available through www.flipkart.com
Saturday, March 3, 2012
Subscribe to:
Posts (Atom)

.jpg)